ಜಿಲ್ಲಾ ಸುದ್ದಿಗಳು
ದೇವನಹಳ್ಳಿ
ಪ್ರತಿ ಸ್ನೇಹಿತರು ಆಪ್ತರಾಗಿರುತ್ತಾರೆ. ಸ್ನೇಹಿತರಿಲ್ಲದ ನನ್ನ ಜೀವನ ವ್ಯರ್ಥ ಎಂದು ಕಾಂಗ್ರೆಸ್ ಯುವ ಮುಖಂಡ ಅರ್ಜುನ್ ಹೇಳಿದರು.ಪಟ್ಟಣದ ಮರಳುಬಾಗಿಲು ರಸ್ತೆಯ ಡೇರಿ ಪಕ್ಕದಲ್ಲಿ ಸ್ನೇಹಿತ ಬಳಗದಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಪ್ರತಿಯೊಬ್ಬರು ಜೀವನದಲ್ಲಿ ತಮ್ಮದೇ ಆದ ಗುರಿಯನ್ನು ಹೊಂದಿರುತ್ತಾರೆ.
ಗುರಿ ತಲುಪುವಲ್ಲಿ ಸ್ನೇಹಿತರು, ಹಿರಿಯರ ಮಾರ್ಗದರ್ಶನ ಇರಲೇಬೇಕು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್ ಅವರ ಆಸರೆಯಲ್ಲಿ ರಾಜಕೀಯ ಜ್ಞಾನ ಲಭಿಸಿದೆ. ಈ ಸಂದರ್ಭದಲ್ಲಿ ಅವರಿಗೆ ಅಭಿನಂದನೆ ಸಲ್ಲಿಸುತ್ತಾ ಅವರ ಹಾದಿಯಲ್ಲಿ ನನಗೆ ಬೆನ್ನೆಲುಬಾಗಿರುವ ಸ್ನೇಹಿತರು, ಹಿರಿಯರಿಗೆ ಚಿರ ಋಣಿಯಾಗಿರುತ್ತೇನೆ ಎಂದರು.
ಈ ವೇಳೆಯಲ್ಲಿ ಯುವಕರ ಬಳಗ, ಸುತ್ತಮುತ್ತಲಿನ ನಾಗರಿಕರು ಕಾಂಗ್ರೆಸ್ ಯುವ ಮುಖಂಡ ಅರ್ಜುನ್ ಅವರನ್ನು ಅಭಿನಂದಿಸಿದರು.
Be the first to comment