ಗಣೇಶ ಚತುರ್ಥಿ ಹಾಗೂ ಮೊಹರಂ ಹಬ್ಬದಗಳ ನಿಷೇದ ನಿರ್ಬಂಧಗಳನ್ನು ಮೀರಿದರೆ ಕಾನೂನು ಕ್ರಮ::-ಜಗದೇವಪ್ಪ ಪಾಳಾ.

ಅಫಜಲಪುರ-ಕಲಬುರಗಿ ಜಿಲ್ಲೆಯ ಅಫಜಲಪುರದ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗಣೇಶ ಚತುರ್ಥಿ ಹಾಗೂ ಮೊಹರಂ ಹಬ್ಬದ ನಿಮಿತ್ತ ಸಿಪಿಐ ಜಗದೇವಪ್ಪ ಪಾಳಾ ನೇತೃತ್ವದಲ್ಲಿ ಶಾಂತಿ ಸಭೆ ಜರುಗಿತು.

ಗಣೇಶ ಚತುರ್ಥಿ ಹಾಗೂ ಮೊಹರಂ ಹಬ್ಬದ ಪ್ರಯುಕ್ತ ಪ್ರಾರ್ಥನಾ ಸಭೆ ಹಾಗೂ ಮೆರವಣಿಗೆ ನಿಷೇ ದಿಸಲಾಗಿದೆ. ನಿರ್ಬಂಧಗಳನ್ನು ಮೀರಿ ಸಾರ್ವಜನಿಕ ಸ್ಥಳಗಳಲ್ಲಿ ಆಚರಣೆಗೆ ಮುಂದಾದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಿಪಿಐ ಜಗದೇವಪ್ಪ ಪಾಳಾ ಎಚ್ಚರಿಸಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗಣೇಶ ಚತುರ್ಥಿ ಹಾಗೂ ಮೊಹರಂ ಹಬ್ಬದ ಅಂಗವಾಗಿ ಸೋಮವಾರ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಗಣೇಶ ಚತುರ್ಥಿಯನ್ನು ಸರಳವಾಗಿ ದೇವಸ್ಥಾನ ಮತ್ತು ಮನೆಯೊಳಗೆ ಮಾತ್ರ ಆಚರಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಚಪ್ಪರ, ಪೆಂಡಾಲ್, ಶಾಮಿಯಾನ ಹಾಕಿ ವೇದಿಕೆ ನಿರ್ಮಿಸಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವಂತಿಲ್ಲ, ಗಣೇಶನ ಮೂರ್ತಿ ವಿಸರ್ಜಿಸುವಾಗ ಮೆರವಣಿಗೆ ಅಥವಾ ಮನೋರಂಜನೆ
ಕಾರ್ಯಕ್ರಮಗಳು ಆಯೋಜಿಸುವಂತಿಲ್ಲ ಎಂದು ಎಚ್ಚರಿಕೆ ನೀಡಿದರು.
ತಾಲೂಕಿನ ಕೋಲಿ ಸಮಾಜ ಮುಖಂಡ ಲಚ್ಚಪ್ಪ ಜಮಾದಾರ ರೈತ ಸಂಘದ ಅಧ್ಯಕ್ಷ ಮಾಹಾಂತೇಶ ಮುಸ್ಲಿಂ ಸಮುದಾಯದ ಹಿರಿಯರು
ಮಕ್ಬುಲ್ ಪಟೇಲ್ ಜೆಡಿಎಸ್ ತಾಲೂಕ ಅಧ್ಯಕ್ಷರು ಜಮೀಲ್ ಗೊಂಡಿ ಡಿ ಎಸ್ ಎಸ್ ತಾಲ್ಲೂಕ ಅಧ್ಯಕ್ಷರು ರಾಜು ಅರೇಕರ್ ಇನ್ನು ಅನೇಕ ಜನ ಉಪಸ್ಥಿತಿ ಇದ್ದರು.

 

Be the first to comment

Leave a Reply

Your email address will not be published.


*