ಪತ್ರಿಕಾ ದಿನಾಚರಣೆ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ:ಪತ್ರಕರ್ತರು ಸಮಾಜದ ಕೈಗನ್ನಡಿ :ಎಸ್‍ಪಿ ಜಗಲಾಸರ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ: ಸಕಾರಾತ್ಮಕ ಸಮಾಜ ನಿರ್ಮಾಣ ಕಾರ್ಯದಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಹೇಳಿದರು.

ನವನಗರದ ನೂತನ ಪತ್ರಿಕಾ ಭವನದಲ್ಲಿಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಪತ್ರಿಕಾ ದಿನಾಚರಣೆ ಹಾಗೂ ಅತ್ಯುತ್ತಮ ಗ್ರಾಮೀಣ ಮತ್ತು ಹಿರಿಯ ಪತ್ರಕರ್ತರಿಗೆ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಿಖರತೆ, ಸ್ವಾತಂತ್ರ್ಯತೆ, ಸಂತ್ಯಾಂಶ, ನಿಷ್ಪಕ್ಷಪಾತತೆ ಮತ್ತು ತಪ್ಪು ಮಾಡಿದಾಗ ಒಪ್ಪಿಕೊಳ್ಳುವಂತ ಐದು ಗುಣಗಳನ್ನು ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳುವುದು ಪ್ರತಿ ಪತ್ರಕರ್ತನ ಜವಾಬ್ದಾರಿಯಾಗಿದೆ. ಕೋವಿq-19 ಮತ್ತು ಪ್ರವಾಹದಂತಹ ಸಂದರ್ಭಗಳಲ್ಲಿ ಎದೆಗುಂದದೆ ಕೆಲಸ ಮಾಡಿದ್ದು ಶ್ಲಾಘನೀಯ. ಪರ್ತಕರ್ತರು ಸಮಾಜಪರ ಕೈಗನ್ನಡಿಯಾಗಿ ಪತ್ರಿಕೋದ್ಯಮವನ್ನು ಇನ್ನಷ್ಟು ಎತ್ತರ ಮಟ್ಟಕ್ಕೆ ಒಯ್ಯುವ ಕೆಲಸವಾಗಬೇಕೆಂದು ತಿಳಿಸಿದರು.

ಉಪನ್ಯಾಸಕರಾಗಿ ಆಗಮಿಸಿದ್ದ ಹುಬ್ಬಳ್ಳಿಯ ಕನ್ನಡಪ್ರಭ ದಿನಪತ್ರಿಕೆಯ ಸ್ಥಾನಿಕ ಸಂಪಾದಕರಾದ ಮಲ್ಲಿಕಾರ್ಜುನ ಸಿದ್ದಣ್ಣವರ ಮಾತನಾಡಿ ಕೊರೊನಾ ಸಮಯದಲ್ಲಿ ನಾವೆಲ್ಲ ವೃತ್ತಿನಿಷ್ಠೆಯಿಂದ ಅತ್ಯಂತ ಕಷ್ಟಕರ ಸಮಯದಲ್ಲೂ ಕೆಲಸ ಮಾಡಿದ್ದೇವೆ. ಕೋವಿಡ್ ಸಮರದಲ್ಲಿ ಅನ್ನ ಹಾಕುವ ಕೈಗಳು, ಸಂಬಂಧಿಕರನ್ನು ಕಳೆದುಕೊಂಡಿದ್ದೆವೆ. ದೇಶದಲ್ಲಿ 311 ಜನ ಕೋವಿಡ್‍ನಿಂದ ಮೃತಪಟ್ಟರೆ, ರಾಜ್ಯದಲ್ಲಿ 40 ಜನ ಮೃತಪಟ್ಟಿರುತ್ತಾರೆ. ಅದರಲ್ಲಿ ಅತೀ ಹೆಚ್ಚು ತೊಂದರೆ ಒಳಪಟ್ಟಿದ್ದು ಗ್ರಾಮೀಣ ಭಾಗದ ಪತ್ರಕರ್ತರು. ಈ 40 ಜನರಲ್ಲಿ 36 ಜನ 5 ಲಕ್ಷ ರೂ.ಗಳ ಪರಿಹಾರಧನ ಪಡೆದುಕೊಂಡಿದ್ದಾರೆಂದು ತಿಳಿಸಿದರು.

ದೇಶದಲ್ಲಿ ಕರ್ನಾಟಕ ಸೇರಿದಂತೆ 16 ರಾಜ್ಯಗಳಲ್ಲಿನ ಪತ್ರಕರ್ತರನ್ನು ಫ್ರಂಟ್‍ಲೈನ್ ವಾರಿಯರ್ಸ್ ಎಂದು ಆಯಾ ರಾಜ್ಯ ಸರಕಾರಗಳು ಘೋಷಿಸಿವೆ. ಪತ್ರಕರ್ತರ ಜೀವನದ ವಸ್ತುಸ್ಥಿತಿ ಅರಿಯಲು ರಾಷ್ಟ್ರ ಮಟ್ಟದಲ್ಲಿ 77 ರಾಷ್ಟ್ರಗಳು ಸಮೀಕ್ಷೆ ಕಾರ್ಯ ನಡೆಸಿವೆ. ನಮ್ಮೆಲ್ಲರ ಬರವಣಿಗೆ ಬದಲಾಗಬೇಕಾದ ಅನಿವಾರ್ಯತೆ ಇದೆ. ಎಕೆಂದರೆ ಮುದ್ರಣ ಮಾಧ್ಯಮ ಈಗ ಡಿಜಟಲೀಕರಣದತ್ತ ಮುಖವಾಡ ಮಾಡುತ್ತಿರುವುದಾಗಿ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಜಿಲ್ಲಾ ಕಾ.ನಿ.ಪ. ಸಂಘದ ಜಿಲ್ಲಾ ಅಧ್ಯಕ್ಷ ಸುಭಾಸ ಹೊಲ್ದೂರ ಮಾತನಾಡಿದರು.

ಇದೇ ಸಂದರ್ಭದಲ್ಲಿ ದಿ.ಶರಣಬಸವರಾಜ ಜಿಗಜಿನ್ನಿ ಸ್ಮರಣಾರ್ಥವಾಗಿ ನೀಡುತ್ತಿರುವ ಹಿರಿಯ ಪತ್ರಕರ್ತರ ಪ್ರಶಸ್ತಿಯನ್ನು ಜಿಲ್ಲೆಯ ವಿದ್ಯಮಾನ ದಿನಪತ್ರಿಕೆಯ ಸಂಪಾದಕರಾದ ಕೆ.ಎಮ್ ಕಳ್ಳಿಗುಡ್ಡ ಅವರಿಗೆÉ ಹಾಗೂ ದಿ. ಶ್ರೀಶೈಲ ಅಂಗಡಿ ಸ್ಮರಣಾರ್ಥ ನೀಡುವ ಅತ್ಯುತ್ತಮ ಗ್ರಾಮೀಣ ಪ್ರತ್ರಕರ್ತರ ಪ್ರಶಸ್ತಿಯನ್ನು ಗುಳೇದಗುಡ್ಡದ ವರದಿಗಾರರಾದ ಬಸವರಾಜ ಯಂಡಿಗೇರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕಾ.ನಿ.ಪ ರಾಜ್ಯ ಕಾರ್ಯಕಾರಣಿ ಸದಸ್ಯ ಈಶ್ವರ ಶೆಟ್ಟರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಜಾಫರ ಶಾಲಗಾರ, ಹಿರಿಯ ಸಂಪಾದಕರಾದ ರಾಮ ಮನಗೂಳಿ, ಮಹೇಶ ಅಂಗಡಿ, ಚಂದ್ರಶೇಖರ ಜಿಗಜಿನ್ನಿ, ಸಾಹಿತಿ ಸತ್ಯಾನಂದ ಪಾತ್ರೋಟ ಸೇರಿದಂತೆ ಜಿಲ್ಲಾ ಮತ್ತು ತಾಲೂಕಾ ಮಟ್ಟದ ಪತ್ರಕರ್ತರು ಉಪಸ್ಥಿತರಿದ್ದರು. ಪತ್ರಕರ್ತ ಶ್ರೀಶೈಲ ಬಿರಾದಾರ ನಿರೂಪಿಸಿದರು.

Be the first to comment

Leave a Reply

Your email address will not be published.


*