ಜಿಲ್ಲಾ ಸುದ್ದಿಗಳು
ಬಾಗಲಕೋಟೆ:ಅಂಚೆ ಇಲಾಖೆಯಿಂದ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿರುವ ಅಂಚೆ ಕಚೇರಿ ಗ್ರಾಮೀಣ ಡಾಕ್ ಸೇವಕ ಮತ್ತು ಪೋಸ್ಟಮನ್‍ಗಳಿಗೆ ಆಧಾರ ಪತ್ರದಲ್ಲಿ ಮೊಬೈಲ್ ಸಂಖ್ಯೆ ತಿದ್ದುಪಡಿ ಕುರಿತು ಜಿಲ್ಲೆಯ ವಿವಿದೆಡೆ ತರಬೇತಿ ಕಾರ್ಯಕ್ರಮ ನಡೆಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈಗಾಗಲೇ ಆಧಾರ ಹೊಸ ನೊಂದಣಿ ಹಾಗೂ ತಿದ್ದುಪಡಿ ಕಾರ್ಯ ತಹಶೀಲ್ದಾರ ಕಚೇರಿ ಹಾಗೂ ನಾಡ ಕಚೇರಿಗಳಲ್ಲಿ 18, ಇ-ಆಡಳಿತ ಇಲಾಖೆಯಲ್ಲಿ 3, ಬ್ಯಾಂಕ್‍ಗಳಲ್ಲಿ ಅಂದಾಜು 45, ಅಂಚೆ ಕಚೇರಿಗಳಲ್ಲಿ 32 ಆಧಾರ ನೊಂದಣಿ ಕಿಟ್‍ಗಳು ಕಾರ್ಯನಿರ್ವಹಿಸುತ್ತಿವೆ. ಜೂನ್-2021ರ ವರೆಗೆ 20.66 ಲಕ್ಷ ಆಧಾರ ಜನರೇಟ ಆಗಿರುತ್ತವೆ ಎಂದು ತಿಳಿಸಿದ್ದಾರೆ.
ಆಧಾರ ಕೇಂದ್ರಗಳಿಗೆ ಮೊಬೈಲ್ ಸಂಖ್ಯೆ, ಹೆಸರು, ವಿಳಾಸ ಹಾಗೂ ಬಯೋಮ್ಯಾಟ್ರಿಕ್ ತಿದ್ದುಪಡಿಗಳು ಹೆಚ್ಚಿನ ಸಂಖ್ಯೆಯಲ್ಲಿರುವದರಿಂದ ಅಂಚೆ ಕಚೇರಿಯ ಗ್ರಾಮೀಣ ಡಾಕ್ ಸೇವಕ ಮತ್ತು ಪೋಸ್ಟಮನ್‍ಗಳಿಗೆ ಆಧಾರ ತಿದ್ದುಪಡಿ ತರಬೇತಿಯನ್ನು ಬಾಗಲಕೋಟೆ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್, ಹುನಗುಂದ, ಜಮಖಂಡಿ ತಹಶೀಲ್ದಾರ ಕಚೇರಿ ಹಾಗೂ ಬಾದಾಮಿ ವೀರಪುಲಕೇಶಿ ಕಾಲೇಜಿನಲ್ಲಿ ನೀಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಅಂಚೆ ಕಚೇರಿ ಜಿಡಿಎಸ್ ಮತ್ತು ಪೋಸ್ಟಮನ್‍ಗಳಿಗೆ ಮೊಬೈಲ್ ಆಧಾರ ಆಂಡ್ರ್ಯಾಡ್ ಅಪ್ಲಿಕೇಶಷನನ್ನು (ಸಿಇಎಲ್‍ಸಿ) ಯುಐಡಿಅಐ ರವರು ನೀಡಿದ್ದು, ಸದರಿ ಸಿಇಎಲ್‍ಸಿ ಅಪ್ಲೀಕೇಶನಲ್ಲಿ ಮೊಬೈಲ್ ಸಂಖ್ಯೆಯನ್ನು ತಿದ್ದುಪಡಿಯನ್ನು ಮಾಡಬಹುದಾದಿಗೆ. ಶುಲ್ಕ 50 ರೂ.ಗಳ ಮಾತ್ರ ಇದ್ದು, ಜಿಲ್ಲೆಯ ಜನತೆ ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದ್ದಾರೆ. ಆಧಾರ ಜಿಲ್ಲಾ ಸಮಾಲೋಚಕ ಸಿದ್ದಪ್ಪ ತಪ್ಪಲದ, ಸಹಾಯ ಅಂಚೆ ಅಧೀಕ್ಷಕ ಸಿ.ಜಿ.ಕಾಂಬಳೆ, ಹಿರಿಯ ವ್ಯವಸ್ಥಾಪಕ ಶ್ರೀನಿವಾಸ, ವ್ಯವಸ್ಥಾಪಕ ಪ್ರಕಾಶ ತಂಡದಿಂದ ತರಬೇತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
Be the first to comment