ಜೆಡಿಎಸ ಟ್ಟಿಟರ್ ಮೂಲಕ ಬಿಜೆಪಿ, ಕಾಂಗ್ರೆಸ್ ಪಕ್ಷಗಳು ನಾಚುವಂತೆ ಕರೆ ನೀಡಿದೆ ?


      ರಾಜಕೀಯ ಸುದ್ದಿಗಳು


ಬೆಂಗಳೂರು: (ಅ:13)  ರಾಜ್ಯದ ಹಲವೆಡೆ ಸುರಿಯುತ್ತಿರುವ ಧಾರಾಕಾರ ಮಳೆ ನಾಗರೀಕರನ್ನು ತತ್ತರಗೊಳಿಸಿದೆ. ಉತ್ತರ ಕರ್ನಾಟಕದಲ್ಲಂತೂ ಜನತೆ ಮಳೆಯ ರೌದ್ರವತಾರದಿಂದ ನಲುಗಿ ಹೋಗಿದ್ದು, ಬದುಕು ಮುರಾಬಟ್ಟೆಯಾಗಿದೆ. ಸಂತ್ರಸ್ತರ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಈ ಮಧ್ಯೆ, ರಾಜ್ಯದಲ್ಲಿ ಎದುರಾಗಿರುವ ಅತಿವೃಷ್ಟಿ ಹಿನ್ನೆಲೆಯಲ್ಲಿ ಎಲ್ಲರೂ ಪಕ್ಷಬೇಧ ಮರೆತು ನೆರವಾಗೋಣ ಎಂದು ಜೆಡಿಎಸ್ ಟ್ವೀಟ್ ಮಾಡಿದೆ.

 

ಕಳೆದ ಎರಡು ದಿನಗಳಿಂದ ಸಿಎಂ ಯಡಿಯೂರಪ್ಪ ಅವರ ಕಾರ್ಯವೈಖರಿ ಬಗ್ಗೆ ಟ್ವೀಟರ್ ನಲ್ಲಿ ಕಾಳೆದಿದ್ದ ಜೆಡಿಎಸ್ ಇಂದು ಪ್ರವಾಹ ಪೀಡಿತರ ನೆರವಿಗೆ ಎಲ್ಲರೂ ನೆರವಾಗೋಣ ಎಂದು ಟ್ವೀಟ್ ಮಾಡಿದೆ. ರಾಜ್ಯದ 16 ಜಿಲ್ಲೆಗಳು ಪ್ರವಾಹದಲ್ಲಿ ಮುಳುಗಿದ್ದು, ಒಟ್ಟು 15 ಜನ ಸಾವಿಗೀಡಾಗಿದ್ದಾರೆ. ರಸ್ತೆಗಳು ಹಾನಿಯಾಗಿದ್ದು, ಸಂಪರ್ಕ ಕಳೆದುಹೋಗಿ ಲಕ್ಷಾಂತರ ಜನರ ಜೀವನ ಅಸ್ತವ್ಯಸ್ತವಾಗಿದೆ. ಪಕ್ಷ ಬೇಧ ಮರೆತು ಕಷ್ಟದಲ್ಲಿರುವವರಿಗೆ ಸಹಾಯ ಮಾಡೋಣ ಎಂದು ಜೆಡಿಎಸ್ ಟ್ವೀಟ್ ಮಾಡಿದೆ.

ಇದಕ್ಕೂ ಮುನ್ನ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕೂಡ ಟ್ವೀಟ್ ಮಾಡಿ ಅತಿವೃಷ್ಟಿಯಿಂದ ತತ್ತರಿಸಿರುವ ಉತ್ತರ ಕರ್ನಾಟಕ ಭಾಗದ ಪರಿಹಾರ ಕಾರ್ಯಕ್ಕಾಗಿ ಜೆಡಿಎಸ್ ಪಕ್ಷದ ಎಲ್ಲಾ ಶಾಸಕರು ನಮ್ಮ ಒಂದು ತಿಂಗಳ ಸಂಬಳವನ್ನು ನೀಡುತ್ತಿದ್ದೇವೆ. ಕಷ್ಟದ ಸಂದರ್ಭದಲ್ಲಿ ನಮ್ಮ ಅಣ್ಣ-ತಮ್ಮಂದಿರೊಂದಿಗೆ ನಿಲ್ಲೋಣ ಎಂದು ತಿಳಿಸಿದ್ದರು…

Be the first to comment

Leave a Reply

Your email address will not be published.


*