ಮಾಜಿ ಶಾಸಕ ವಜ್ಜಲ್ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ : ಪರಿಶೀಲನೆ


          ಜೀಲ್ಲಾ ಸುದ್ದಿಗಳು


ಲಿಂಗಸುಗೂರು :(ಅ:12) ತಾಲೂಕಿನ ಪ್ರವಾಹ ಪೀಡಿತ ಪ್ರದೇಶಕ್ಕೆ ತೆರಳಿದ ಮಾಜಿ ಶಾಸಕ ಮಾನಪ್ಪ ವಜ್ಜಲ್ ಪರಿಸ್ಥಿತಿಯನ್ನು ಅವಲೋಕಿಸಿದರು.

ಜಲದುರ್ಗ ಮಾರ್ಗದಲ್ಲಿರುವ ಸೇತುವೆ ಮೇಲೆ‌ ನೀರು ಹರಿಯುತ್ತಿರುವ ಪರಿಣಾಮ ಸೇತುವೆ ಬಳಿಯಿಂದಲೇ ವೀಕ್ಷಣೆ ಮಾಡಿದರು.

 

ತಾಲೂಕಿನಲ್ಲಿ ನೆರೆಯಿಂದ ಅಪಾರ ಪ್ರಮಾಣದ ಹಾನಿಯಾಗಿದ್ದು, ಈ ಬಗ್ಗೆ ಸರಕಾರಕ್ಕೆ ಮನವರಿಕೆ ಮಾಡಿಕೊಡುವ ಮೂಲಕ ಸಂತ್ರಸ್ತರು ತಮ್ಮ‌ ಬದುಕನ್ನು ಕಟ್ಟಿಕೊಳ್ಳಲು ಹೆಚ್ಚಿನ ಪರಿಹಾರಕ್ಕೆ ಒತ್ತಾಯಿಸುವುದಾಗಿ ಮಾಜಿ‌ ಶಾಸಕರು ತಿಳಿಸಿದರು.

ಬಿಜೆಪಿ ಅದ್ಯಕ್ಷ ವೀರನಗೌಡ ಲೆಕ್ಕಿಹಾಳ, ಮುಖಂಡರಾದ ಡಾ.ಶಿವಬಸಪ್ಪ, ಅಬ್ದುಲ್ಲಾ, ಗಿರಿಮಲ್ಲನಗೌಡ, ರಮೇಶ ಕಟ್ಟಿಮನಿ ಸೇರಿ ಇತರರು ಇದ್ದರು.

ವರದಿ : ಅಮರೇಶ

Be the first to comment

Leave a Reply

Your email address will not be published.


*