ಲಿಂಗಸುಗೂರ/ಹುಣಸಗಿ:(ಅ;12) ಕೃಷ್ಣ ನದಿ ಪ್ರವಾಹ ದಿಂದ ನಿರಾಶ್ರಿತರಾದ ಜನರಿಗೆ ದಿನ ನಿತ್ಯ ಬೇಕಾಗುವ ಅಗತ್ಯ ವಸ್ತುಗಳನ್ನು ಸಂಗ್ರಹಸಿಕೋಂಡು ನೀಡಲು ಬರುತ್ತಿರು ದಾನಿಗಳಿಗೆ ಸಂತ್ರಸ್ತರಿಗೆ ನೀಡಲು ಸಾಧ್ಯವಾಗುತ್ತಿಲ್ಲ ಕೃಷ್ಣಾ ನದಿ ತೀರದ ಜಲದುರ್ಗ ವ್ಯಾಪ್ತಿಯ ಕಡದರಗಡ್ಡಿ,ಶೀಲಹಳ್ಳಿ, ಯಳಗುಂದಿ,ಹಂಚಿನಾಳ, ಈ ಪ್ರವಾಹ ಪೀಡಿತ ಹಳ್ಳಿಗ ಸಂಪರ್ಕ ಕಲ್ಪಿಸುವ ಜಲದುರ್ಗ ಸೇತುವೆ ಜಲಾವೃತ ವಾಗುರುವುದರಿಂದ ಪರಿಹಾರ ಸಾಮಗ್ರಿ ಹೊತ್ತು ಬಂದು ವಾಹನಗಳು ವಾಪಸ್ ಹೋಗುತ್ತಿರುವು ಕಂಡು ಬರುತ್ತಿದೆ
ಸಿಂಧನೂರುನ ಯುವಕರು ಸಂತ್ರಸ್ತರಿಗೆ ಪರಿಹಾರ ಸಾಮಗ್ರಿಗಳನ್ನು ತಮ್ಮ ಗ್ರಾಮದಲ್ಲಿ ಸಾರ್ವಜನಿಕರಿಂದ ಸಂಗ್ರಹಸಿಕೋಂಡು ಲಿಂಗಸುಗೂರ ತಾಲ್ಲೂಕಿನ ಪ್ರವಾಹ ಪೀಡಿತ ಪ್ರದೇಶಗಳಾದ ಕಡದರಗಡ್ಡಿ,ಯಳಗುಂದಿ, ಶೀಲಹಳ್ಳಿ, ಹಂಚಿನಾಳ,ಮತ್ತು ಜಲದುರ್ಗ ನೀಡಲು ಬಂದು ನಿರಾಶೆ ಪಡಬೇಕಾದ ಪರಿಸ್ಥಿತಿ ನಿರ್ಮಾಣ ವಾಗಿದೆ ಪ್ರವಾಹ ಪೀಡಿತ ಪ್ರದೇಶಗಳಗೆ ನೇರವಾಗಿ ಗ್ರಾಮಗಳಿಗೆ ಹೋಗಿ ನೀಡಬೇಕೆಂದು ಬಂದ ಯುವಕರಿಗೆ ಜಲದುರ್ಗ ಸಂಪರ್ಕ ಸೇತುವೆ ನೀರಿನಲ್ಲಿ ಮೂಳಿಗಿರುವದರಿಂದ ನೀಡಲಾಗುತ್ತಿಲ್ಲ ಎಂದು ಅಂಬಿಗ ನ್ಯೂಸ್ ಮುಂದೆ ತಮ್ಮ ನೋವನ್ನು ತೋಡಿಕೊಂಡ
ನಾವು ಸತತ ಎರಡು ದಿನಗಳಿಂದ ಇಲ್ಲಿಗೆ ಬರುತ್ತಿದೆವೆ ನಾವು ತಂದ ಸಾಮಗ್ರಿಗಳನ್ನು ನಿರಾಶ್ರಿತರಿಗೆ ಮುಟ್ಟಿಸಲು ಸಹಾಯ ಮಾಡಿ ಎಂದು ಯುವಕರು ಕೇಳಿಕೊಂಡಾಗ ಅಂಬಿಗ ನ್ಯೂಸ್ ಬಳಗ ದಾನಿಗಳನ್ನು ನಾರಾಯಣಪುರ ಜಲಾಶಯದ ಮುಂಭಾಗದ ಯಾದಗಿರಿ ಜೀಲ್ಲೆಯ ಪ್ರವಾಹ ಪೀಡಿತ ಮೇಲಿನಗಡ್ಡಿ ಕ್ಯಾಂಪಿಗೆ ಕರೆದುಕೊಂಡು ಹೋಗಿ ಅವರು ತಂದ ವಸ್ತುಗಳನ್ನು ತಲುಪಿಸುವ ಕಾರ್ಯ ಮಾಡಿತ್ತು
ಕಡದರಗಡ್ಡಿ,ಶೀಲಹಳ್ಳಿ, ಜಲದುರ್ಗ, ಯಳಗುಂದಿ, ನೇರೆಸಂತ್ರಸ್ಥರಿಗೆ ನೇರವು ನೀಡಲು ಬರುತ್ತಿರು ದಾನಿಗಳ ವಸ್ತುಗಳನ್ನು ಸಂಗ್ರಹಿಸಿ ಜನರಿಗೆ ತಲುಪಿಸುವ ಕಾರ್ಯ ಲಿಂಗಸುಗೂರ ತಾಲೂಕಿನ ಆಡಳಿತ ಮಾಡಬೇಕಿದೆ
Be the first to comment