ಜಿಲ್ಲಾ ಸುದ್ದಿಗಳು
ಕೇಂದ್ರ ಪುರಸ್ಕೃತ ಯೋಜನೆಯ ರಾಷ್ಟ್ರೀಯ ಆಯುಷ ಅಭಿಯಾನದಡಿ ಕೋವಿಡ್ ನಿರ್ವಹಣೆಗೆ ಅಗತ್ಯವಿರುವ ಆಯುಷ ಔಷಧಿಗಳ ಕಿಟ್‍ಗಳನ್ನು ಹುನಗುಂದ ತಾಲೂಕಾ ವೈದ್ಯಾಧಿಕಾರಿ ಡಾ.ಪ್ರಶಾಂತ ತುಂಬಗಿ ಅವರಿಗೆ ಹಸ್ತಾಂತರಿಸುವ ಮೂಲಕ ಚಾಲನೆ ನೀಡಲಾಯಿತು.
ಬಾಗಲಕೋಟೆ :ಹುನಗುಂದ ತಾಲೂಕಿನ ಆಯುರ್ವೇಧ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ.ಚಂದ್ರಕಾಂತ ರಕ್ಕಸಗಿ ಅವರು ಆಯುಷ ಔಷಧಿಗಳ ಕಿಟ್‍ಗಳನ್ನು ಶನಿವಾರ ಹಸ್ತಾಂತರಿಸಿ ಮಾತನಾಡಿದ ಅವರು ಹುನಗುಂದ ತಾಲೂಕಿಗೆ 80 ಆಯುಷ ಔಷಧಿ ಕಿಟ್‍ಗಳನ್ನು ನೀಡಲಾಗುತ್ತಿದ್ದು, ಸಿಸಿಸಿ ಕೇಂದ್ರದಲ್ಲಿರುವ ಅ-ಸಿಸ್ಟಮಿಟಿಕ್ ಹಾಗೂ ಮೈಲ್ಡ್ ಪಾಜಿಟಿವ್ ರೋಗಿಗಳಿಗೆ ವಿತರಿಸಲು ಭಾರತ ಸರಕಾರದ ಆಯುಷ ಮಂತ್ರಾಲಯ ಮಾರ್ಗಸೂಚಿನಯ್ವಯ ಆಯುಷ-64, ಅಶ್ವಗಂಧ ಚೂರ್ಣ, ಚವನಪ್ರಾಸ್, ಸಂಶಮನಿ ವಟಿ, ಶರಬತ್ ಎ ಉನ್ನಬ್ ಈ 5 ಆಯುಷ ಔಷಧಿ ಕಿಟ್‍ಗಳನ್ನು ನೀಡಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಚಿತ್ತವಾಡಗಿ ಸರಕಾರಿ ಆಯುಷ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಶಿವಾನಂದ ನಿಡಗುಂದಿ, ಔಷಧ ವಿತರಕ ಶಿವಾನಂದ ಲಾಯದಗುಂದಿ ಸೇರಿದಂತೆ ಇತರರು ಇದ್ದರು.
Be the first to comment