ಕಟ್ಟಡ ಕಾರ್ಮಿಕರಿಗೆ 3000/- ರೂ ಸಹಾಯಧನ ನೇರವಾಗಿ ಅವರ ಖಾತೆಗೆ DBT ಮೂಲಕ ಸಂದಾಯ

ವರದಿ:ಅಂಬಿಗ ನ್ಯೂಸ್ ತಂಡ

ರಾಜ್ಯ ಸುದ್ದಿಗಳು

ಬೆಂಗಳೂರು : ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ಸಿಎಂ ಯಡಿಯೂರಪ್ಪ ಘೋಷಿಸಿರುವಂತೆ ನೊಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ರೂ.3,000/- ರೂ ಲಾಕ್ ಡೌನ್ ವಿಶೇಷ ಪರಿಹಾರಧನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.

ದಿನಾಂಕ 19-05-2021ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಸದರಿ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೊಳಗಾದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ತಲಾ ರೂ.3000ದಂತೆ ಸಹಾಯ ಧನ ವಿತರಿಸುವುದಾಗಿ ಘೋಷಣೆ ಮಾಡಿರುತ್ತಾರೆ.

ಷರತ್ತುಗಳು

* ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೊಂದಣಿಗೊಂಡ ಫಲಾನುಭವಿಗಳಿಗೆ ಮಾತ್ರ ಸಹಾಯಧನವನ್ನು ಪಾವತಿಸುವುದು.

* ಡಿಬಿಟಿಯ ಮೂಲಕ ವರ್ಗಾಯಿಸುವಾಗ ಫಲಾನುಭವಿಯ ಪುನರಾವರ್ತನೆಯಾಗದಂತೆ, ನಕಲೀಕರಣವಾಗದಂತೆ ಜಾಗ್ರತೆ ವಹಿಸುವುದು.

* ಒಬ್ಬರೇ ಫಲಾನುಭವಿಯು ಅಸಂಘಟಿತ ಮತ್ತು ಸಂಘಟಿತ ಎರಡೂ ಮಂಡಳಿಗಳಿಂದ ಫಲಾನುಭವಿಯಾಗದಂತೆ ಮತ್ತು ಪರಿಹಾರ ಪಡೆಯುವಲ್ಲಿ ಪುನರಾವರ್ತನೆಯಾಗದಂತೆ ಜಾಗ್ರತೆ ವಹಿಸುವುದು.

* ಫಲಾನುಭವಿಯ ಹೆಸರು, ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ, ಮೊಬೈಲ್ ದೂರುವಾಣಿ ಸಂಖ್ಯೆ, ವಿಳಾಸ, ಅಂಚೆ ಸೂಚ್ಯಂಕ ಸಂಖ್ಯೆ, ಇತರೆ ಗುರುತಿಸುವಿಕೆಗಳನ್ನು ಸಮರ್ಪಕವಾಗಿರುವ ಬಗ್ಗೆ ದೃಢೀಕರಿಸಿಕೊಂಡು ಖಚಿತಪಡಿಸಿಕೊಳ್ಳುವುದು.

* ಕಾಲಕಾಲಕ್ಕೆ ಎಷ್ಟು ಫಲಾನುಭವಿಗಳಿಗೆ ಸಹಾಯಧನ ನೀಡಲಾಗಿದೆಯೆಂಬ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವುದು.

* ಸದರಿ ವಿತರಣೆಯು ವಿಳಂಬವಾಗದಂತೆ ಎಚ್ಚರಿಕೆ ವಹಿಸುವುದು.

Be the first to comment

Leave a Reply

Your email address will not be published.


*