ಕರ್ನಾಟಕ ಅನ್ನದಾತ ರಕ್ಷಣಾ ವೇದಿಕೆ ವತಿಯಿಂದ ಕಾಲುವೆಯ ಜಂಗಲ ಕಟ್ಟಿಂಗ ಮಾಡುವಂತೆ KBJNL ಗೆ ಒತ್ತಾಯ


               ರೈತ ಧ್ವನಿ


ಲಿಂಗಸುಗೂರು(ಅ.02)ಲಿಂಗಸುಗೂರು ತಾಲ್ಲೂಕಿನ ಜಾಲಿಬೆಂಚಿ ಬಲದಂಡೆ ಕಾಲುವೆಯಲ್ಲಿ 2017, 2018,2019 ರಿಂದ ಸೀಲ್ ಜಂಗಲ್ ತೆಗೆಯಲಾರದೆ ನೀರು ಹರಿಬಿಡುತ್ತಿದ್ದಾರೆ ಈ ವರ್ಷವು ಜಂಗಲ್ನೀ ಕಟ್ಟಿಂಗ ಮಾಡದೆ ನೀರು ಬಿಟ್ಟರು ಕಾರಣ ರೈತರ ಮುಂದಿನ ಹೊಲಗಳಿಗೆ ನೀರು ಹರಿಯುತ್ತಿಲ್ಲ ಇದರಿಂದ ರೈತರಿಗೆ ತುಂಬಾ ತೊಂದರೆಯಾಗಿದೆ

ಬಲದಂಡೆ ಡಿಸ್ಟ್ರಿಬ್ಯೂಟರ್ ನಾಲ್ಕರಲ್ಲಿ ಉಪಕಾಲುವೆ ಜಂಗಲ್ ತೆಗೆಯಬೇಕೆಂದು ರೈತರ ಒತ್ತಾಯವಾಗಿದೆ ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ ರೋಡಲಬಂಡಾ 33 ಬಲದಂಡೆ ಕಾಲುವೆ ಉಪ-ವಿಭಾಗ ರೋಡಲಬಂಡಾ ಈ ಕಛೇರಿಗೆ ಒಳಪಟ್ಟಿರುವ ಈ ಕಾಲುವೆ ಉಪ-ವಿಭಾಗದ ಅಧಿಕಾರಿಗಳ ಬೇಜವಾಬ್ದಾರಿತನದಿಂದ ರೈತರಿಗೆ ತೊಂದರೆ ಉಂಟಾಗಿದ್ದು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಸಂಪರ್ಕ ಮಾಡಿಲಾಗಿ ಜಂಗಲ್ ಕಟಿಂಗ್ ಹಾಗೂ ಹೂಳೆತ್ತುವ ಕಾಮಗಾರಿ ಕುರಿತು ಇದರ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಉಡಾಫೆ ಉತ್ತರಗಳನ್ನು ನೀಡುತ್ತಿದ್ದಾರೆ ಎಂದು ರೈತ ಮುಖಂಡರು ಆರೋಪಿಸಿದರು.

ಇದರಿಂದ ರೈತರು ಕಂಗಲಾಗಿದ್ದಾರೆ. ಇಷ್ಟು ದಿನಗಳಾದರೂ ಈಕಡೆ ಬಂದು ಯಾವ್ ಅಧಿಕಾರಿಗಳು ನೋಡದೆ ಇದ್ದದು ಸಮಸ್ಯಗೆ ಇಡಿದ ಕನ್ನಡಿ ಎಂದು ಗ್ರಾಮಸ್ಥರು ಆರೋಪಿಸಿದರು.

ರೈತರ ಜೀವನದ ಜೋತೆ ಚಲ್ಲಾಟವಡುತ್ತಿರು ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಅನ್ನದಾತ ರಕ್ಷಣಾ ವೇದಿಕೆಯ ಸಂಘದವರು ಒತ್ತಾಯಿಸಿದರು ಗ್ರಾಮ ಘಟಕದ ಅಧ್ಯಕ್ಷರಾದ ಹನುಮಂತ ಸಾಲಿ ಜಾಲಿಬೆಂಚಿ ಅಮರೇಶ್ ಬಸವರಾಜ ಲಿಂಗಸುಗೂರು ಯಮನಪ್ಪ ಚಿನ್ನೂರ್ ಹನುಮಂತ ನಂಬರ್ ಆದಪ್ಪ ಜಲಿಬೆಂಚಿ,ಸಂಘದ ಪದಾಧಿಕಾರಿಗಳು ಹಾಗೂ ಇತರ ಹಾಜರಿದ್ದರು

ವರದಿ::ಅಮರೇಶ್ ಲಿಂಗಸ್ಗೂರು

Be the first to comment

Leave a Reply

Your email address will not be published.


*