ಅಕ್ರಮ ಸ್ಥಳದಲ್ಲಿ ಸರಕಾರಿ ಸಬ್ಸಿಡಿ ಪೈಪ್ ವಿತರಣೆ…!!! ಕೃಷಿ ಇಲಾಖೆ ಎಡಿ ಆದೇಶವನ್ನು ಗಾಳಿಗೆ ತೂರಿಗೆ ಎಎಒ ಅಧಿಕಾರಿ: ಅಧಿಕಾರಿಗಳ ವಿರುದ್ಧ ಕಠೀಣ ಕ್ರಮಕ್ಕೆ ಆಗ್ರಹಿಸಿದ ಪ್ರಗತಿಪರ ಚಿಂತಕರು

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಮುದ್ದೇಬಿಹಾಳ ತಾಲೂಕಾ ಕೃಷಿ ಇಲಾಖೆಯಿಂದ ರೈತರಿಗಾಗಿ ಬಂದ ಸಬ್ಸಿಡಿ ಪೈಪ್‌ಗಳನ್ನು ಗ್ರಾಮೀಣ ಪ್ರದೇಶದ ಓರ್ವ ವ್ಯಕ್ತಿಯ ಜಮೀನಿನಲ್ಲಿಟ್ಟು ತಮ್ಮ ಅನುಕೂಲಕರ ರೈತರಿಗೆ ಹಂಚಿಕೆ ಮಾಡಲು ಇಟ್ಟ ಪೈಪ್‌ಗಳು.

ಜಿಲ್ಲಾ ಸುದ್ದಿಗಳು

ಮುದ್ದೇಬಿಹಾಳ:

CHETAN KENDULI

ಕೃಷಿ ಇಲಾಖೆಯಿಂದ ರೈತರಿಗೆ ಹಂಚಿಕೆ ಮಾಡುವ ಸಬ್ಸಿಡಿ ಪೈಪ್‌ಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿದ ಕೃಷಿ ಇಲಾಖೆ ಅಧಿಕಾರಿಗಳ ವಿರುದ್ಧ ರೈತರು ತಮ್ಮ ಆಕ್ರೋಶವನ್ನು ವ್ಯಕ್ತಿ ಪಡಿಸಿದ ಘಟನೆ ಶನಿವಾರ ತಾಲೂಕಿನ ಗಂಗೂರ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ರೈತರಿಗೆ ನೀಡಬೇಕಾದ ಪೈಪ್‌ಗಳನ್ನು ಸ್ಥಳೀಯ ಎ.ಎ.ಓ ಅಧಿಕಾರಿ ಅಶೋಕ ಇಟಿಗಿ ಅವರು ಸಂಗಪ್ಪ ಹುಗ್ಗಿ ಎಂಬವರ ಮೂಲಕ ಗ್ರಾಮದಲ್ಲಿ 30ಕ್ಕೂ ಹೆಚ್ಚು ಜನರಿಗೆ ಪೈಪ್‌ಗಳನ್ನು ನೀಡಿದ್ದಾರೆ ಎಂದು ತಂಗಡಗಿ ಹಾಗೂ ಕೋಳೂರ ಪಂಚಾಯತಿ ಗ್ರಾಮಸ್ಥರು ಆರೋಪಿಸಿದ್ದಾರೆ.



ಮುದ್ದೇಬಿಹಾಳ ತಾಲೂಕಾ ಕೃಷಿ ಇಲಾಖೆಯಿಂದ ರೈತರಿಗಾಗಿ ಬಂದ ಸಬ್ಸಿಡಿ ಪೈಪ್‌ಗಳನ್ನು ಗ್ರಾಮೀಣ ಪ್ರದೇಶದ ಓರ್ವ ವ್ಯಕ್ತಿಯ ಜಮೀನಿನಲ್ಲಿಟ್ಟು ತಮ್ಮ ಅನುಕೂಲಕರ ರೈತರಿಗೆ ಹಂಚಿಕೆ ಮಾಡಲು ಇಟ್ಟ ಪೈಪ್‌ಗಳು.

ಗಾಳಿಗೆ ತೂರಿದ ಎಡಿ ಆದೇಶ:
ಮುದ್ದೇಬಿಹಾಳ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರೇವಣಪ್ಪ ಮನಗೂಳಿ ಅವರು ಈಗಾಗಲೇ ಇಲಾಖೆ ಆವರಣದಲ್ಲಿಯೇ ಸಾಕಷ್ಟು ಜಾಗವಿದ್ದು ರೈತರಿಗೆ ನೀಡುವ ಪೈಪ್‌ಗಳನ್ನು ಕೃಷಿ ಇಲಾಖೆಯಿಂದಲೇ ಒದಗಿಸಬೇಕೆಂದು ಮೌಖಿವಾಗಿ ಆದೇಶ ಮಾಡಿದ್ದರೂ ಎಓ ಇಟಗಿ ಅವರು ಮೇಲಾಧಿಕಾರಿಗಳ ಆದೇಶವನ್ನು ಗಾಳಿಗೆ ತೂರಿದ್ದಾರೆ.


ಪಂಚಾಯತಿ ಅಧಿಕಾರಿಗಳಿಂದ ಹಂಚಿಕೆಯಾಗಲಿ:
ರೈತರಿಗಾಗಿ ಸರಕಾರದಿಂದ ಬರುವ ಸಬ್ಸಿಡಿ ಪೈಪ್‌ಗಳ, ಸಿಂಪರಣೆ ಹಾಗೂ ನೋಜಲ್‌ಗಳನ್ನು ಕೃಷಿ ಇಲಾಖೆಯ ಕೇಂದ್ರ ಸ್ಥಾನದಿಂದ ಒದಗಿಸಬೇಕಾಗುತ್ತದೆ. ಆದರೆ ಕೆಲ ರೈತರ ಅನುಕೂಲಕ್ಕಾಗಿ ಆಯಾ ಗ್ರಾಮಕ್ಕೆ ತೆರಲಿ ಪೈಪ್‌ಗಳನ್ನು ಹಂಚುವ ಕಾರ್ಯವನ್ನು ಮಾಡಲಾಗುತ್ತದೆ. ಆದರೆ ಪೈಪ್ ಹಂಚುವ ವೇಳೆಯಲ್ಲಿ ಮೊದಲಿಗೆ ಆರ್‌ಟಿಜಿಎಸ್ ಮಾಡಿದ ರೈತರನ್ನು ಬಿಟ್ಟು ಹೊಸದಾಗಿ ಆರ್‌ಟಿಜಿಎಸ್ ಮಾಡಿದ ರೈತರಿಗೆ ಪೈಪ್‌ಗಳನ್ನು ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿದ್ದು ಕೂಡಲೇ ಪೈಪ್ ಹಂಚಿಕೆಯ ಜವಾಬ್ದಾರಿಯನ್ನು ಆಯಾ ಪಂಚಾಯತ ಅಧಿಕಾರಿಗಳ ಮೂಲಕ ರೈತರಿಗೆ ಹಂಚಿಕೆಯಾಗುವAತೆ ಮಾಡಬೇಕು ಎಂದು ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಜಗದೇವರಾವ್ ಚಲವಾದಿ ಆಗ್ರಹಿಸಿದ್ದಾರೆ.


ಅಧಿಕಾರಿಗಳ ವಿರುದ್ಧ ಕಠೀಣ ಕ್ರಮಕ್ಕೆ ಆಗ್ರಹ:
ಸರಕಾರದಿಂದ ರೈತರಿಗಾಗಿ ಬರುವ ಪೈಪ್‌ಗಳನ್ನು ಕೇಂದ್ರ ಸ್ಥಾನದಲ್ಲಿ ಹಂಚಿಕೆ ಮಾಡದೇ ಅಕ್ರಮವಾಗಿ ಬೇರೆ ಸ್ಥಳದಲ್ಲಿಟ್ಟು ತಮಗೆ ಬೇಕಾಗುವ ರೈತರಿಗೆ ಹಂಚಿಕೆ ಮಾಡುತ್ತಿರುವ ಇಲಾಖೆ ಅಧಿಕಾರಿಗಳ ವಿರುದ್ಧ ಕಠೀಣ ಕ್ರಮ ಕೈಗೊಂಡು ನಿಜ ಫಲಾನುಭವಿ ರೈತರಿಗೆ ಸಬ್ಸಿಡಿ ಪೈಪ್ ಸೇರಿದಂತೆ ಇನ್ನಿತರ ವಸ್ತಗಳನ್ನು ಹಂಚಿಕೆ ಮಾಡಬೇಕು ಎಂದು ಪ್ರಗತಿಪರ ರೈತ ಹೋರಾಟಗಾರರು ಆಗ್ರಹಿಸಿದ್ದಾರೆ.

 

Be the first to comment

Leave a Reply

Your email address will not be published.


*