ಜಿಲ್ಲಾ ಸುದ್ದಿಗಳು
ಬಾಗಲಕೋಟೆ:ಬಾದಾಮಿ ತಹಶಿಲ್ದಾರರಾದ ಶ್ರೀ ಸುಹಾಸ ಇಂಗಳೆ ರವರ ಹಲ್ಲೆಯನ್ನು ಖಂಡಿಸಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ತಾಲ್ಲೂಕು ಶಾಖೆ ಇಳಕಲ್ ದ ಪದಾಧಿಕಾರಿಗಳು ಮಾನ್ಯ ತಹಶಿಲ್ದಾರರ ಇಳಕಲ್ ರವರಿಗೆ ಮನವಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಪರಶುರಾಮ ಪಮ್ಮಾರ ರವರು ,ಮಾನ್ಯ ಬಾದಾಮಿ ತಹಶಿಲ್ದಾರರ ರವರ ಮೇಲಾದ ದೈಹಿಕ ಹಲ್ಲೆಯು ಅತ್ಯಂತ ಖಂಡನೀಯ ಕೃತ್ಯವಾಗಿದೆ.ಅಧಿಕಾರಿಗಳ ಮೇಲಿನ ಇಂತಹ ಹಲ್ಲೆಗಳಿಂದ ಎಲ್ಲಾ ನೌಕರರ ಬಾಂಧವರು ಧೃತಿಗೆಡುವ ಸಂದರ್ಭ ಬಂದಿದ್ದು,ಹಲ್ಲೆ ಮಾಡಿದವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಂಡು ಅಧಿಕಾರಿಗಳು, ನೌಕರರು ತಮ್ಮ ಸೇವೆಯನ್ನು ಮಾಡಲು ಬಿಡಬೇಕು ಎಂದು ಹೇಳಿದರು.
ಮನವಿಯನ್ನು ಸ್ವೀಕರಿಸಿದ ಇಳಕಲ್ ತಹಶಿಲ್ದಾರರಾದ ವೇದವ್ಯಾಸ ಮುತಾಲಿಕ್ ರವರು, ಈ ಕೃತ್ಯವು ಖಂಡನೆಗೆ ಅರ್ಹವಾಗಿದ್ದು ನಿಮ್ಮ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸುವ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಪರಿಷತ್ ಸದಸ್ಯರಾದ ಈಶ್ವರ ಗಡ್ಡಿ, ಖಜಾಂಚಿ ಮಹಾಂತಗೌಡ ಗೌಡರ, ಪದಾಧಿಕಾರಿಗಳಾದ ನವೀನ ಬಲಕುಂದಿ, ಮಹಾಂತೇಶ ಕಲ್ಮಠ, ಗ್ರಾಮ ಲೆಕ್ಕಾಧಿಕಾರಿ ಸಂಘದ ಅಧ್ಯಕ್ಷರಾದ ಶ್ರೀಧರ ವಿಶ್ವಕರ್ಮ, ಸಿ ಎಸ್ ಕೊಣ್ಣೂರ, ಬಿ ಎಂ ಪಾಟೀಲ,ಎಂ ಎಸ್ ಬೀಳಗಿ,ಯಮನಪ್ಪ ವಡ್ಡರ ರವರು ಉಪಸ್ಥಿತರಿದ್ದರು.
Be the first to comment