ಜಿಲ್ಲಾ ಸುದ್ದಿಗಳು
ಬಾಗಲಕೋಟೆ:
ಹೊಸೂರ ಗ್ರಾಮದ ಹತ್ತಿರ ಸೀತಿಮನಿ ತಾಂಡಾದಿಂದ ನಾಗಸಂಪಿಗೆ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ತ್ರಿಚಕ್ರ (ಆಟೋ) ವಾಹನದಲ್ಲಿ ಸಾಗಿಸುತ್ತಿದ್ದ 13 ಲೀಟರ್ ಕಳ್ಳಬಟ್ಟಿ ಸಾರಾಯಿಯನ್ನು ಅಬಕಾರಿ ಇಲಾಖೆ ತಂಡ ಗುರುವಾರ ದಾಳಿ ಮಾಡಿ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.
ಬೆಳಗಾವಿ ವಿಭಾಗದ ಅಬಕಾರಿ ಜಂಟಿ ಆಯುಕ್ತರ ನಿರ್ದೇಶನದ ಮೇರೆಗೆ ಅಬಕಾರಿ ಉಪ ಆಯುಕ್ತರಾದ ರಮೇಶಕುಮಾರ ಎಚ್. ಅವರ ಆದೇಶದ ಮೇರೆಗೆ ಅಬಕಾರಿ ಉಪ ಅಧೀಕ್ಷಕ ಎಸ್.ಎಸ್.ಹಿರೇಮಠ ಅವರ ನೇತೃತ್ವದ ತಂಡ ಪತ್ತೆ ಹಚ್ಚಿ ಗುರುವಾರ ಬೆಳಗಿನ ಜಾವ ದಾಳಿ ನಡಿಸಿತು. ದಾಳಿಯಲ್ಲಿ ಅಬಕಾರಿ ಉಪ ನಿರೀಕ್ಷಕ ಮಂಜುನಾಥ ಸಿಂಗರೆಡ್ಡಿ ಹಾಗೂ ಸಿಬ್ಬಂದಿಗಳಾದ ಬಸವರಾಜ ಬಾಳಶೆಟ್ಟಿ, ಸುರೇಶ ಕುರಣಿ, ಶಿವಾನಂದ ತಳವಾರ, ರಾಜು ಬಳ್ಳಬಟ್ಟಿ ಇದ್ದರು.
ಜಿಲ್ಲೆಯಲ್ಲಿ ಜೂನ್ ಮತ್ತು ಜುಲೈ-2020 ಮಾಹೆಯಲ್ಲಿ 327 ದಾಳಿ ಮಾಡಿ 16 ಘೋರ ಪ್ರಕರಣ, 16 ಜನ ಆರೋಪಿಗಳು, 2 ತ್ರಿಚಕ್ರ ವಾಹನ, 6 ದ್ವಿಚಕ್ರ ವಾಹನ, 147 ಲೀಟರ್ ಕಳ್ಳಬಟ್ಟಿ ಸಾರಾಯಿ ಜಪ್ತು ಮಾಡಲಾಗಿದೆ. ಇಂತಹ ಯಾವುದೇ ತರಹದ ಕಳ್ಳಬಟ್ಟಿ, ನಕಲಿ ಮದ್ಯ, ಅಬಕಾರಿ ಅಕ್ರಮಗಳಿಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ಈ ಕೆಳಗಿನ ಅಧಿಕಾರಿಗಳ ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದು ಬಾಗಲಕೋಟೆ ಅಬಕಾರಿ ಉಪ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಬಕಾರಿ ಇಲಾಖೆಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಹೆಸರು ಮತ್ತು ದೂರವಾಣಿ ಸಂಖ್ಯೆ ಇಂತಿದೆ. ಅಬಕಾರಿ ಉಪ ಆಯುಕ್ತ ರಮೇಶಕುಮಾರ ಎಚ್. (9449597078), ಅಬಕಾರಿ ಉಪ ಅಧೀಕ್ಷಕರ ಎಸ್.ಎಸ್.ಹಿರೇಮಠ, (9449597081), ಅಬಕಾರಿ ಉಪ ಅಧೀಕ್ಷಕ ಆರ್.ಮುದ್ದಿಗೌಡರ (9449597079), ಅಬಕಾರಿ ನಿರೀಕ್ಷಕರಾದ ಪಿ.ಎಂ.ಪಾಟೀಲ (9449597080), ಅಬಕಾರಿ ನಿರೀಕ್ಷಕ ವಿಠಲ ಪೀರಗಣ್ಣವರ (9449597082), ಮಲ್ಲನಗೌಡ ಪಾಟೀಲ (9663280426), ಸಂಗಮೇಶ ಮುರನಾಳ (8073463300), ಅನೀಲ ನಂದಿಕೇಶ್ವರ (9632828977), ಪಿ.ಎಂ.ಪಾಟೀಲ (9449597080).
Be the first to comment