ಆಪತ್ತುಗಳನ್ನು ಆಹ್ವಾನಿಸುತ್ತಿರುವ ಅರೆಬರೆ ಕಾಮಗಾರಿ- ನಿದ್ರಿಸುತ್ತಿರುವ ಇಲಾಖಾಧಿಕಾರಿಗಳು.

ವರದಿ: ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಖಾನಾಹೊಸಹಳ್ಳಿ ಗ್ರಾಮದಲ್ಲಿ 2ನೇವಾಡ೯ ಹಾಗೂ ಎಸ್ಸಿ ಕಾಲೋನಿಯಲ್ಲಿ,ಸುಸ್ಥಿತಿಯಲ್ಲಿದ್ದ ಚರಂಡಿಯನ್ನು ತೆರವುಗೊಳಿಸಿ ಹೊಸಚರಂಡಿ ನಿಮಾ೯ಣಕ್ಕಾಗಿ ನೆಲ ಹಗೆದು ವಷ೯ವಾಗಿದೆ.ಈ ವರೆಗೂ ಕಾಮಗಾರಿ ಪೂಣ೯ಗೊಳಿಸಿಲ್ಲ ಇದು ಗ್ರಾಮಸ್ಥರಿಗೆ ತಲೆನೋವಾಗಿ ಪರಿಣಮಿಸಿದೆ.

ಮಕ್ಕಳು,ವೃದ್ಧರು,ವಿಕಲಚೇತನರು ನಡೆದಾಡುವುದು ಅಸಾಧ್ಯವಾಗದೆ,ತ್ಯಾಜ್ಯ ನೀರು ಕಸ ಮಿಶ್ರಣಗೊಂಡು ಕೊಳೆತು ನಾರುತ್ತಿವೆ, ಸಾಂಕ್ರಾಮಿಕ ರೋಗಗಳನ್ನು ಆಹ್ವಾನಿಸುತ್ತಿವೆ ಅರೆಬರೆ ಕಾಮಗಾರಿಗಳು.ಅನಾಹುತಗಳನ್ನು ಆಹ್ವಾನಿಸುತ್ತಿವೆ ಸಾಕಷ್ಟು ಬಾರಿ ಸಂಬಂಧಿಸಿದಂತೆ ಇಲಾಖಾಧಿಕಾರಿಗಳ ಗಮನಕ್ಕೆ ತರಲಾಗಿದೆ,ಯಾವುದೇ ಪ್ರಯೋಜವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಶೀಘ್ರವೇ ಈ ದುರಾವಸ್ಥೆಗೆ ಕಾರಣರಾದವರು ಚರಂಡಿ ನಿಮಾ೯ಣ ಕಾಮಗಾರಿ ಪೂಣ೯ಗೊಳಿಸಬೇಕು,ನಿಲ೯ಕ್ಷಿಸಿದ್ದಲ್ಲಿ ಅವರ ವಿರುದ್ಧ ಜಿಲ್ಲಾಧಿಕಾರಿಗಳಲ್ಲಿ ದೂರು ನೀಡಲಾಗುವುದು.ಸಂಬಂಧಿಸಿದಂತೆ ತಾಲೂಕು ಪಂಚಾಯ್ತಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಗುವುದು,ಎಂದು ಖಾನಾಹೊಸಳ್ಳಿ ಗ್ರಾಮದ ಎಸ್ಸಿ ಕಾಲೋನಿಯ ಜನತೆ ಮತ್ತು ಗ್ರಾಮಸ್ಥರು ಹೇಳಿಕೆ ನೀಡಿದ್ದಾರೆ.

Be the first to comment

Leave a Reply

Your email address will not be published.


*