ಜೀಲ್ಲಾ ಸುದ್ದಿಗಳು
ಜಾಹೀರಾತು
2020-21 ಒಂದೇ ಸಾಲಿನ ಆಯವ್ಯಯದ ವಿಶೇಷ ಅಭಿವೃದ್ಧಿ ಯೋಜನೆಗಳ ಬಜೆಟ್ಟನ್ನು ದಾವಣಗೆರೆ ಜಿಲ್ಲಾಧಿಕಾರಿ ಹಾಗೂ ಹರಿಹರ ನಗರಸಭೆಯ ಆಡಳಿತ ಅಧಿಕಾರಿಯಾಗಿರುವ ಮಾಂತೇಶ್ ಬಿಳಗಿ ಇಂದು ಹರಿಹರದ ಹರಿಹರ ನಗರಸಭೆಯ ಸಭಾಂಗಣದಲ್ಲಿ ಮಂಡನೆ ಮಾಡಿದರು .
ನಗರದ ಜನತೆಗೆ ಅನುಕೂಲಕರವಾಗುವ ಬಜೆಟ್ಟನ್ನು ನಗರಸಭೆಯ ಆಡಳಿತಾಧಿಕಾರಿಯಾಗಿ ಇಂದು ಮಂಡಿಸುತ್ತಿದ್ದೇನೆ .ಬಜೆಟ್ಟಿನಲ್ಲಿ ನಗರ ಜನತೆಗೆ ಅಗತ್ಯ ಮೂಲಭೂತ ಸೌಲಭ್ಯ ನೀಡುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಲಾಗಿದೆ ಸರ್ಕಾರದಿಂದ ಬರಬಹುದಾದ ಅನುದಾನಗಳ ವಿವರವನ್ನು ಸಹ ವಿವರಿಸಿ ಹೇಳಿದರು .
2020-21 ನೇ ಸಾಲಿಗೆ ನಗರಸಭೆಗೆ ವಿವಿಧ ಮೂಲಗಳಿಂದ ನಿರೀಕ್ಷಿತ ಆದಾಯದ ವಿವರಗಳಾದ ಮನೆ ಕಂದಾಯ, ನೀರಿನ ತೆರಿಗೆ, ಟ್ರೇಡ್ ಲೈಸನ್ಸ್, ಜಾಹೀರಾತು ಶುಲ್,ಕ ನಗರಸಭೆ ಮಳಿಗೆ ಬಾಡಿಗೆ ,ಕಟ್ಟಡ ಪರವಾನಿಗೆ , ಹೀಗೆ ಅನೇಕ ವಿಚಾರಗಳ ಒಳಗೊಂಡ ಬಜೆಟ್ಟನ್ನು ಸಾರ್ವಜನಿಕರ ಮುಂದೆ ಮಂಡಿಸಿದರು .
ಜಾಹೀರಾತು
ನಂತರ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ ಯಾವುದೇ ರೀತಿಯ ಕರೋನಾ ವೈರಸ್ ಪತ್ತೆಯಾಗಿಲ್ಲ ,ಜಿಲ್ಲಾಡಳಿತ ಮುಂಜಾಗೃತ ಕ್ರಮವಾಗಿ ರೋಗಿಗಳಿಗೆ ಚಿಕಿತ್ಸೆ ನೀಡಲು ಎಲ್ಲಾ ರೀತಿಯ ಸಿದ್ಧಗೊಂಡಿದ್ದು ಸಂಬಂಧಿಸಿದ ಸಾರ್ವಜನಿಕ ಆಸ್ಪತ್ರೆಗೆ ಬೇಕಾದ ಎಲ್ಲ ಸೌಲಭ್ಯವನ್ನು ಒದಗಿಸಲಾಗಿದೆ .ಸಾರ್ವಜನಿಕರು ಯಾವುದೇ ರೀತಿಯಲ್ಲಿ ಭಯ ಬೀಳುವ ಅವಶ್ಯಕತೆಯಿಲ್ಲ ಜನರು ಶುಚಿತ್ವದ ಕಡೆ ಹೆಚ್ಚಿನ ಒತ್ತು ನೀಡಿ ಆರೋಗ್ಯವನ್ನು ಕಾಪಾಡಿಕೊಂಡು ಕರೋನಾ ವೈರಸ್ ಹರಡದಂತೆ ಅಗತ್ಯ ಮುಂಜಾಗೃತಾ ಕ್ರಮ ತಮ್ಮ ಮನೆಯಲ್ಲೇ ತೆಗೆದುಕೊಳ್ಳೋದು ಅವಶ್ಯಕ ಎಂದು ಹೇಳಿದರು .
ರಾಜ್ಯ ಸರ್ಕಾರವೂ ಸಹ ಕರೋನಾ ವೈರಸ್ ಹರಡದಂತೆ ಮುಂಜಾಗೃತ ಕ್ರಮವಾಗಿ ಸಭೆ ಸಮಾರಂಭ ಜಾತ್ರೆಗಳನ್ನು ನಿಷೇಧಿಸಿದ್ದು .ಶಾಲಾ ಕಾಲೇಜುಗಳಿಗೆ ಈಗಾಗಲೇ ರಜೆ ಘೋಷಿಸಲಾಗಿದೆ ಎಂದು ಹೇಳಿದರು ಈ ಬಜೆಟ್ ಮಂಡನೆಯ ಸಂದರ್ಭದಲ್ಲಿ .ಹರಿಹರದ ಶಾಸಕ ಯಶ ರಾಮಪ್ಪ, ನಗರಸಭೆ ಆಯುಕ್ತೆ ಎಸ್ ಲಕ್ಷ್ಮಿ ,ನಗರಸಭೆಯ ಎಲ್ಲ ಚುನಾಯಿತ ಪ್ರತಿನಿಧಿಗಳು ಸ್ವಾಭಿಮಾನಿ ಕರ್ನಾಟಕ ಸಂಘಟನೆಯ ತಾಲ್ಲೂಕು ಅಧ್ಯಕ್ಷರು ಸಂಘಟಕರು ಹಾಗೂ ,ಸಮಾಜವಾದಿ ಬಹುಜನ ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ಹನುಮಂತಪ್ಪನವರು, ಹಾಗೂ ಡಿಎಸ್ಎಸ್ ನ ಮುಖಂಡರು, ಸಾರ್ವಜನಿಕರು ಈ ಬಜೆಟ್ ಮಂಡನೆಯ ಚಂದ್ರ ಬದಲು ಉಪಸ್ಥಿತರಿದ್ದರು .
Be the first to comment