ವಿಜಯಪುರ : ಹಾಸ್ಯ ನಟ ಹುಲಿ ಕಾರ್ತಿಕ ಅವನು ವಡ್ಡ ಎಂಬ ಮಾತಿನ ನಿಂದನೆಯಿಂದ ಭೋವಿ ಜನಾಂಗದ ಸಮುದಾಯಕ್ಕೆ ಮುಜುಗರ ತಂದಿರುವ ಹುಲಿ ಕಾರ್ತಿಕ್ ಅವರನ್ನು ಕೂಡಲೇ ಬಂದಿಸಿ ಕ್ರಮ ಜರುಗಿಸುವಂತೆ ಭೋವಿ ಸಾಮಾಜದ ಯುವ ಮುಖಂಡರಾದ ಡಾ. ಅರ್ಜುನ ಬಂಡಿ ಒತ್ತಾಯಿಸಿದರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ. 23 ರಂದು ಕಲರ್ಸ್ ಕನ್ನಡ ವಾಹಿನಿ ಅನುಬಂದ ಅವಾರ್ಡ್ – 2024 ಕಾರ್ಯ ಕ್ರಮದಲ್ಲಿ ಹುಲಿ ಕಾರ್ತಿಕ್ ಯಾವುದೋ ರೋಡ್ ನಲ್ಲಿ ಬೀದಿರುವ ವಡ್ಡ ಇದ್ದಂಗೆ ಎಂದು ಭೋವಿ ಜಾತಿಯನ್ನು ನಿಂದನೆ ಮಾಡಿದ್ದಾರೆ. ಈ ರೀತಿಯ ನಿಂದನೆಯಿಂದ ನಮ್ಮ ( ಜನಾಂಗಕ್ಕೆ) ಸಮಾಜಕ್ಕೆ ಮುಜುಗರವಾಗಿದೆ. ಆದ್ದರಿಂದ ಅದನ್ನು ನಿಂದನೆ ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಂಡು ಜಾತಿ ನಿಂದನೆ ಪ್ರಕರಣ ದಾಖಲು ಮಾಡಿ ಈ ಕೂಡಲೇ ಬಂದಿಸಬೇಕೆಂದು ಪತ್ರಿಕೆ ಮೂಲಕ ರಾಜ್ಯ ಕಾನೂನು ಸಚಿವರಲ್ಲಿ ರಾಜ್ಯದ ಭೋವಿ ಸಾಮಾಜದ ಪರವಾಗಿ ಮನವಿ ಮಾಡಿದ್ದಾರೆ.
Be the first to comment