ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ವಿಧಾನ ಸಭೆ (S.T) ಮೀಸಲಾತಿ ಕ್ಷೇತ್ರವಾದ ಸುರಪುರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಡಾ|| ರಾಜಾ ವೆಂಕಟಪ್ಪ ನಾಯಕ ಇಂದು ನಾಮಪತ್ರ ಸಲ್ಲಿಕೆ ಮಾಡಿ ಮೊದಲ ಗ್ರಾಮವಾಗಿ ಶ್ರೀ ಜಗದ್ಗುರು ಮೌನೇಶ್ವರ ಹುಟ್ಟಿದ ಸ್ಥಳವಾದ ದೇವರ ಗೋನಾಲಕ್ಕೆ ಭೇಟಿ ನೀಡಿ ಶ್ರೀ ಮೌನೇಶ್ವರ ದೇವಸ್ಥಾನ ಹಾಗೂ ಶ್ರೀ ಹಯ್ಯಾಳ ಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜ್ಯರಿಂದ ಆಶೀರ್ವಾದವನ್ನು ಪಡೆದುಕೊಂಡು, ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕರಾದ ಡಾ||ರಾಜ ವೆಂಕಟಪ್ಪ ನಾಯಕ್ ಬಿಜೆಪಿ ಪಕ್ಷವು ಅಧಿಕಾರಕ್ಕೆ ಬಂದು ಯಾವುದೇ ಕೆಲಸವು ಹೇಳಿಕೊಳ್ಳುವಂತೆ ಮಾಡದೆ ಸರ್ಕಾರವು ರೈತರಿಗೆ ಸುಳ್ಳಿನ ಭರವಸೆಯನ್ನು ನೀಡುತ್ತಾ ಬಂದಿದೆ.
ರಾಜ ವೆಂಕಟಪ್ಪ ನಾಯಕರು ಶಾಸಕರಾದ ಅವಧಿಯಲ್ಲಿ ದೇವರಗೋನಾಲ ಗ್ರಾಮಕ್ಕೆ ಶಾಲೆ, ಪಶು ಆಸ್ಪತ್ರೆ, ರಸ್ತೆ ಹೀಗೆ ಗ್ರಾಮಕ್ಕೆ ಬೇಕಾದ ಮೂಲಭೂತ ಸೌಕರ್ಯವನ್ನು ಒದಗಿಸಿ ಅನೇಕ ಕಾಮಗಾರಿಗಳು ಅವರ ಅವಧಿಯಲ್ಲಿ ಆಗಿವೆ. ಈಗ ಮತ್ತೊಮ್ಮೆ 2023 ಕ್ಕೆ ಜನರ ಸೇವೆಯನ್ನು ಮಾಡಲು ನಾನು ಉತ್ಸಾಹಕನಾಗಿದ್ದು, ನನ್ನನ್ನು ಮತ್ತೆ ಬಹುಮತದಿಂದ ಆರಿಸಿ ಶಾಸಕರನ್ನಾಗಿ ಮಾಡುತ್ತೀರಿ ಎಂಬ ಭರವಸೆ ನನಗೆ ಇದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಊರಿನ ಗ್ರಾಮಸ್ಥರು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು ಹಾಗೂ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಾದ ಗ್ಯಾರಂಟಿ ಕಾರ್ಡ್ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ರಾಜ ಕೃಷ್ಣಪ್ಪ ನಾಯಕ ಸುರಪುರ ಸಂಸ್ಥಾನದ ರಾಜರು, ರವಿ ಸಾಹುಕಾರ್ ನಿಂಗಣ್ಣ ಬಾಚಿಮಟ್ಟಿ, ವೆಂಕಟೇಶ್ ಬೇಟೆಗಾರ, ಮಾರ್ತಾಂಡಪ್ಪ ದೊರೆ,ನಾಗಪ್ಪ ಕನ್ನಳ್ಳಿ ಭೀಮಣ್ಣ ದೀವಳ ಗುಡ್ಡ,ಬಸವರಾಜ್ ಹೂಗಾರ್, ಬಸವರಾಜ್ ದೀವಳಗುಡ್ಡ,ನಬಿಲಾಲ್ ಹಾಗೂ ಊರಿನ ಹಿರಿಯರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಹಾಗೂ ಮಹಿಳೆಯರು ಭಾಗಿಯಾಗಿದ್ದರು.
Be the first to comment