ಕಾಂಗ್ರೇಸ್ ನತ್ತ ಹರಿದು ಬಂತು ಮಹಿಳೆಯರ ಪ್ರವಾಹ*

 

ಚಿಂಚೋಳಿ :ಸ್ತ್ರೀಶಕ್ತಿ ಸಂಘದ ತಾಲೂಕಾಧ್ಯಕ್ಷೆ ನರಸಮ್ಮ ಅವುಟಿ ಅಪಾರ ಬೆಂಬಲಿಗರೊಂದಿಗೆ ಕಾಂಗ್ರೇಸ್ ಸೇರ್ಪಡೆ*

 

ಹೌದು ಬಿಜೆಪಿ ಪಕ್ಷವನ್ನು ತೊರೆದ ಸಾವಿರಾರು ಮಹಿಳೆಯರು ಸಾಮಾಜಿಕ ಕಾರ್ಯಕರ್ತೆ ಹಾಗೂ ತಾಲೂಕಾ ಸ್ತ್ರೀಶಕ್ತಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ನರಸಮ್ಮ ಅವುಟಿ ಅವರ ನೇತೃತ್ವದಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಗೊಂಡರು

 

ನರಸಮ್ಮ ಅವುಟಿ ಅವರು ಅಪಾರ ಬೆಂಬಲಿಗರೊಂದಿಗೆ ತಮ್ಮ ಮನೆಯಿಂದ ವಾದ್ಯ ಮೇಳದೊಂದಿಗೆ ಕಾಂಗ್ರೇಸ್ ಕಛೇರಿಯವರೆಗೆ ಭರ್ಜರಿಯಾಗಿ ಪಾದಯಾತ್ರೆ ಮಾಡುವುದರ ಮೂಲಕ ಕಾಂಗ್ರೇಸ್ ಸೇರಿ ಪಕ್ಷದ ಬಲ ಹೆಚ್ಚಿಸಿದರು

 

ಪುರಸಭಾ ವ್ಯಾಪ್ತಿಯ ಚಂದಾಪೂರ ಪಟ್ಟಣದ ಬ್ಲಾಕ್ ಕಾಂಗ್ರೇಸ್ ಕಾರ್ಯಾಲಯದಲ್ಲಿ ಏರ್ಪಡಿಸಿದ ಸೇರ್ಪಡೆ ಸಮಾರಂಭದಲ್ಲಿ ನರಸಮ್ಮ ಅವುಟಿ ಲಕ್ಷ್ಮಿ ಫತ್ತೇಪೂರ ರೇಣುಕಾ ಕೋಡ್ಲಿ ಕವಿತಾ ನರನಾಳ ಮಲ್ಲಮ್ಮ ಸಣ್ಣಳ್ಳಿ ರತ್ನಮ್ಮ ಪಾಟೀಲ ವಿಜಯಲಕ್ಷ್ಮಿ ಪೋಲಕಪಳ್ಳಿ ವಿಜಯಮ್ಮ ಮಿರಿಯಾಣ ಸ್ವರೂಪ ಭೈರಂಪಳ್ಳಿ ರತ್ನಮ್ಮ ಚೆನ್ನೂರ ಸೇರಿದಂತೆ ಸಾವಿರಾರು ಮಹಿಳೆಯರ ಕೈಯಲ್ಲಿ ಅಭ್ಯರ್ಥಿ ಸುಭಾಶ ರಾಠೋಡ ಪಕ್ಷದ ಧ್ವಜ ನೀಡಿ ಕಾಂಗ್ರೇಸ್ ಗೆ ಬರಮಾಡಿಕೊಂಡರು

 

ಕಾಂಗ್ರೇಸ್ ಸೇರ್ಪಡೆಗೊಂಡು ಮಾತನಾಡಿದ ನರಸಮ್ಮ ಅವುಟಿ ಬಿಜೆಪಿ ಪಕ್ಷವು ಸ್ತ್ರೀಶಕ್ತಿಗಳ ಕಲ್ಯಾಣ ಮಾಡುವುದಾಗಿ ಹೇಳಿ ತನ್ನ ಭರವಸೆ ಹುಸಿಗೊಳಿಸಿಕೊಂಡಿದೆ ಚಿಂಚೋಳಿ ಹಾಗೂ ಸೇಡಂ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಗೆಲುವಿಗಾಗಿ ಸ್ತ್ರೀಶಕ್ತಿ ಸಂಘಗಳು ಹಗಲಿರಳೆನ್ನದೇ ಪ್ರಮಾಣಿಕವಾಗಿ ಕೆಲಸ ಮಾಡಿವೆ ಆದರೆ ಈ ಎರಡು ಕ್ಷೇತ್ರಗಳಲ್ಲಿ ವಿಜಯ ಶಾಲಿಯಾದ ಅಭ್ಯರ್ಥಿಗಳು ನಮ್ಮ ಸಂಘಗಳ ಉದ್ಧಾರಕ್ಕಾಗಿ ಒಂದು ನಯಾ ಪೈಸೆ ಕೂಡ ನೀಡಿಲ್ಲವೆಂದು ಆರೋಪಿಸಿದರು

 

ಚಿಂಚೋಳಿ ಕಾಳಗಿ ಹಾಗೂ ಸೇಡಂ ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ನಮ್ಮ ಸ್ತ್ರೀಶಕ್ತಿ ಸಂಘಗಳು ಜನಪರ ಕಾರ್ಯದಲ್ಲಿ ತೊಡಗಿವೆ ಕಾಂಗ್ರೇಸ್ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಣೆಯಾದಂತೆ ಮನೆಯ ಒಡತಿಗೆ ಎರಡು ಸಾವಿರ ರೂ.ಗಳು ಎನ್ನುವ ಗ್ಯಾರಂಟಿ ಭರವಸೆಯನ್ನು ಗಮನಿಸಿ ಇಂದು ಸಾವಿರಾರು ಮಹಿಳಾ ಮಣಿಗಳು ಕಾಂಗ್ರೇಸ್ ಸೇರ್ಪಡೆಯಾಗಿದ್ದೇವೆ ಎಂದರು

 

ನಮ್ಮ ಸಂಘಗಳು ಹಳ್ಳಿಗಳಲ್ಲಿ ಪ್ರಮಾಣಿಕವಾಗಿ ಸಾಮಾಜಿಕ ಸೇವೆ ಸಲ್ಲಿಸುತ್ತಿವೆ ನಾವು ಇಲ್ಲಿಯವರೆಗೆ ಯಾವುದೇ ಪಕ್ಷದ ಆಮಿಷಗಳಿಗೆ ಬಲಿಯಾಗಿಲ್ಲ ಮುಂದೆ ಕೂಡ ಆಗುವುದಿಲ್ಲ ಈ ಬಾರಿ ಯಾವುದೇ ಸಹಾಯವಿಲ್ಲದೆ ಕಾಂಗ್ರೇಸ್ ಅಭ್ಯರ್ಥಿಗಳಾದ ಸುಭಾಶ ರಾಠೋಡ ಹಾಗೂ ಡಾಃಶರಣಪ್ರಕಾಶ ಪಾಟೀಲ ಅವರ ಗೆಲುವಿಗಾಗಿ ಪ್ರಯತ್ನಿಸುತ್ತೇವೆ ಎಂದು ನರಸಮ್ಮ ಭರವಸೆ ನೀಡಿದರು

 

ನಾನು ಮತ್ತು ನಮ್ಮ ಮಹಿಳಾ ಮುಖಂಡರು ಸೇರಿ ಚಿಂಚೋಳಿ ಕಾಳಗಿ ಹಾಗೂ ಸೇಡಂ ತಾಲೂಕಿನ ಹಳ್ಳಿಗಳಲ್ಲಿರುವ ಪ್ರತಿಯೊಂದು ಸ್ತ್ರೀಶಕ್ತಿ ಸಂಘದ ಸದಸ್ಯರಲ್ಲಿ ವಿನಮೃವಾಗಿ ಮನವಿ ಮಾಡಿ ಈ ಬಾರಿ ಕಾಂಗ್ರೇಸ್ ಪಕ್ಷದ ಹುರಿಯಾಳುಗಳಿಗೆ ಮತ ಮತ ನೀಡಿ ಆಶೀರ್ವದಿಸುವಂತೆ ಮನವಿ ಮಾಡಲಾಗುವುದೆಂದು ನರಸಮ್ಮ ತಿಳಿಸಿದರು

 

ಈ ಸಂದರ್ಭದಲ್ಲಿ ಪಕ್ಷದ ಬ್ಲಾಕ್ ಅಧ್ಯಕ್ಷ ಬಸವರಾಜ ಮಲಿ ಪ್ರಚಾರ ಸಮಿತಿ ಅಧ್ಯಕ್ಷ ಲಕ್ಷ್ಮಣ ಅವುಟಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಮೂದ ಪಟೇಲ ಸಾಸರಗಾಂವ್ ಮುಖಂಡರಾದ ಬಸ್ಸಯ್ಯಾ ಗುತ್ತೇದಾರ ಶರಣು ಮೋತಕಪಳ್ಳಿ ಅಬ್ದುಲ್ ಬಾಸೀತ ಅಜೀತ ಪಾಟೀಲ ಸೈಯದ ಶಬ್ಬೀರ ಕವಿತಾ ಪಾಟೀಲ ಲಕ್ಷ್ಮಿದೇವಿ ಕೊರವಿ ಈರಮ್ಮ ಸಂಗಯ್ಯಾ ಸ್ವಾಮಿ ಅಂಕಿತಾ ಕಮಲಾಕರ್ ಸುರೇಶ ಭಂಟಾ ನಾಗೇಶ ಗುಣಾಜಿ ಸಂತೋಷ ಗುತ್ತೇದಾರ ಮಲ್ಲಪ್ಪಾ ಕೋಟಪಳ್ಳಿ ಜಗನ್ನಾಥ ಕಟ್ಟಿ ವಿಜಯಕುಮಾರ ಘಾಟಗೆ ಬಸವರಾಜ ವಾಡಿ ಜಗದೇವ ಗೌತಮ ರವಿ ಪೂಜಾರಿ ಮಹ್ಮದ ಹುಸೇನ್ ನಾಯ್ಕೊಡಿ ಡಾಃತುಕಾರಾಮ ಪವಾರ ರಾಮಶೆಟ್ಟಿ ಪವಾರ ಸುಭಾಶ ಗುತ್ತೇದಾರ ಸೇರಿದಂತೆ ಸಾವಿರಾರು ಮುಖಂಡರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*