ಜೇವರ್ಗಿ ಪಟ್ಟಣದಲ್ಲಿ ಕೆ.ಕೆ. ಆರ್. ಡಿ. ಬಿ ಯೋಜನೆ ಅಡಿಯಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಸುಮಾರು 1 ಕೋಟಿ 50 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ತರಕಾರಿ ಮಾರುಕಟ್ಟೆ ಕಟ್ಟಡದ ಶಾಸಕರು ವಿಧಾನ ಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಡಾ. ಅಜಯಸಿಂಗ್ ಉದ್ಘಾಟನೆ ಮಾಡಿದರು.
ನಂತರ ಮಾತನಾಡಿದ ಅವರು ರಸ್ತೆ ಬದಿ ಕುಳಿತು ತರಕಾರಿ ಹಾಗೂ ಹಣ್ಣು ಮಾರಾಟ ಮಾಡುವ ವ್ಯಾಪಾರಿಗಳಿಗೆ ಸುಸಜ್ಜಿತ ಕಟ್ಟಡ ನಿರ್ಮಿಸಿಕೊಟ್ಟಿರುವದು ನನಗೆ ತುಂಬಾ ಸಂತೋಷವಾಗಿದೆ ಇನ್ನು ಮುಂದೆ ಯಾರು ಕೂಡ ಬಿಸಿಲಿನಲ್ಲಿ ಮಳೆಯಲ್ಲಿ ಕುಳಿತು ಸಂಕಟ ಪಡುವ ಅಗತ್ಯಯಿಲ್ಲ. ಇಂಥ ಭವ್ಯವಾದ ಕಟ್ಟಡ ನನ್ನ ಕ್ಷೇತ್ರ ದಲ್ಲಿ ನಿರ್ಮಾಣಗೊಂಡಿರುವದಕ್ಕೆ ನನಗೆ ಖುಷಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಾಲೂಕಿನ ಅಧಿಕಾರಿಗಳು, ಪಟ್ಟಣ ಪಂಚಾಯಿತಿ ಸದಸ್ಯರು, ಪಕ್ಷದ ಹಿರಿಯ ಮುಖಂಡರು ರಾಜಶೇಖರ್ ಸೀರಿ,ಕಾಸಿರಾಯಗೌಡ ಯಲಗೋಡ,ಚಂದ್ರಶೇಖರ ಹರನಾಳ,ಸೌಕತ ಅಲಿ,ಶಿವಕುಮಾರ್ ಕಲ್ಲಾ, ನೀಲಕಂಠ ಸಾಹು ಅವಂಟಿ,ಅಜ್ಜು ಲಖ್ಪತಿ ಸಲೀಮ್ ಕಣ್ಣಿ,ರೂಕುಂತೊಲಾ, ಮರೆಪ್ಪ ಸರಡಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Be the first to comment