ಲಿಂಗಸುಗೂರು: ಪಟ್ಟಣದಲ್ಲಿ ಕುಡಿಯುವ ನೀರು ಅದರಲ್ಲಿ ವಿಶೇಷವಾಗಿ ಈ ಊರಿಗೆ ಬೇಸಿಗೆಯಲ್ಲಿ ನೀರಿನ ಅವಶ್ಯಕತೆ ಬಹಳ ಇದ್ದು, ಪ್ರಸ್ತುತ ದಿನಮಾನಗಳಲ್ಲಿ ನಮ್ಮ ಲಿಂಗಸೂಗೂರಿನ ಪುರಸಭೆ ವ್ಯಾಪ್ತಿಯಲ್ಲಿ ಅನೇಕ ವರ್ಷಗಳಿಂದ 4-5 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿರುವುದು
ಪುರಸಭೆ ಮುಖ್ಯಾಧಿಕಾರಿಗಳಾದ ತಾವುಗಳು ಜವಾಬ್ದಾರಿ ಇದರ ಬಗ್ಗೆ ಗಮನ ಹರಿಸದೇ ಇರುವುದು ನಿಮ್ಮ ಸ್ಥಾನಕ್ಕೆ ಶೋಭೆ ತರುವಂತದ್ದಲ್ಲ. ಇದರ ಬಗ್ಗೆ ಜನಗಳು ಮೌಖಿಕವಾಗಿ ಹಲವಾರು ಬಾರಿ ತಮಗೂ ಹಾಗೂ ತಮ್ಮ ಪುರಸಭೆ ಅಧ್ಯಕ್ಷರಿಗೂ ತಿಳಿಸಿರುತ್ತಾರೆಂದು ಸಾರ್ವಜನಿಕರು ನಮ್ಮ ಗಮನಕ್ಕೆ ತಂದಿಡುತ್ತಾರೆ: ಲಿಂಗಸುಗೂರು ಪಟ್ಟಣದಲ್ಲಿ ಬೆಳ್ಳಿ, ಚುಕ್ಕಿಯಂತೆ ಬೃಹತ್ ಕೆರೆ ಇದ್ದರೂ ಕೂಡ ನಗರದಲ್ಲಿ ನೀರಿನ ಸಮಸ್ಯೆ ಇದೆ ಎಂದರೆ ನಿಜಕ್ಕೂ ನಾಚಿಕೆಯ ಸಂಗತಿ ತಾವುಗಳು ಸರಕಾರದ ಕೆಲಸ ದೇವರ ಕೆಲಸ ಎಂದು ಕಾರ್ಯನಿರ್ವಹಿಸುತ್ತಿದ್ದೀರಿ ಎಂದು ಭಾವಿಸುತ್ತಾ, ದಯವಿಟ್ಟು ನಮ್ಮಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಲಿಂಗಸುಗೂರು ಪುರಸಭೆಯ ಎಲ್ಲಾ ವಾರ್ಡಗಳಿಗೂ ಪ್ರತಿದಿನವೂ ಕುಡಿಯುವ ನೀರನ್ನು ಪೂರೈಸಬೇಕೆಂದು ಒಂದು ವೇಳೆ ಈ ನಮ್ಮ ಮನವಿಯ ಬಗ್ಗೆ ತಾವುಗಳು ಹಾಗೂ ತಮ್ಮ ಆಡಳಿತ ಮಂಡಳಿಯವರು, ನಿರ್ಲಕ್ಷ್ಯ, ತೊರಿಸಿದ್ದೇ ಆದರೆ, ಮುಂದಿನ ದಿನಮಾನದಲ್ಲಿ ಪುರಸಭೆ ಕಾರ್ಯಾಲಯದ ಮುಂದೆ ನಗರದ ಎಲ್ಲಾ ವಾರ್ಡ್ ಗಳ ಸಾರ್ವಜನಿಕರ ಉಪಸ್ಥಿತಿಯಲ್ಲಿ ಹೋರಾಟವನ್ನು ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸುತ್ತದೆ
ಕರುನಾಡ ವಿಜಯ ಸೇನೆ ತಾಲೂಕ ಘಟಕ ಲಿಂಗಸುಗೂರು ಪುರಸಭೆ ಮುಖ್ಯಾಧಿಕಾರಿ ಅಧಿಕಾರಿಗೆ ಮನವಿ ಸಲ್ಲಿಸಿದರು.
ಈಸಂದರ್ಭದಲ್ಲಿ ಹನುಮಂತ ಬಡೀಗೇರ, ಮಂಜುನಾಥ, ಚಂದ್ರು, ಪರಶುರಾಮ, ಮೌನೇಶ್, ಮಲ್ಲಪ್ಪ,ಲಿಂಗಪ್ಪ , ಜಾಫರ್ ಸಾಬ, ಸೇರಿದಂತೆ ಉಪಸ್ಥಿತರಿದ್ದರು.
Be the first to comment