ರಾಂಪೂರ ಏತ ನೀರಾವರಿ ಕಾಲುವೆ ಮತ್ತು ಬಲದಂಡೆ ಕಾಲುವೆಗೆ ಏಪ್ರೀಲ್ 30ರ ವರೆಗೆ ನೀರು ಹರಿಸಲು
ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕ ಸಮಿತಿ ಲಿಂಗಸಗೂರು ಒತ್ತಾಯಿಸಿ ಲಿಂಗಸುಗೂರ ಸಹಾಯಕ ಆಯುಕ್ತರ ಮೂಲಕ ಮನವಿ ಸಲ್ಲಿಸಿದರು.
ಮುಂಗಾರು ಹಂಗಾಮಿನಲ್ಲಿ ಅತೀ ಹೆಚ್ಚು ಮಳೆಯಿಂದ ಇಳುವರಿ ಸಂಪೂರ್ಣ ನೆಲಕಚ್ಚಿ ಅಲ್ಪ ಸ್ವಲ್ಪ ಬೆಳ ಬಂದಿದ್ದು ಇದರಿಂದ ರೈತರು ಆತಂಕಕ್ಕೆ ಈಡಾಗಿದ್ದಾರೆ. ಹಿಂಗಾರು ಹಂಗಾಮಿನಲ್ಲಿ ನೀರಾವರಿ ಇಲಾಖೆಯವರು ಐ.ಸಿ.ಸಿ, ಸಲಹಾ ಸಮಿತಿ ಮಾರ್ಚ-30ರ ವರೆಗೆ ನಾಲನೆಗೆ ನೀರು ಹರಿಸುವುದಾಗಿ ತೀರ್ಮಾನ ಕೈಗೊಂಡಿರುತ್ತಾರೆ. ಇದರಿಂದ ರೈತರ ಜಮೀನಿನಲ್ಲಿ ಬೆಳೆಗಳು ತೆನೆಬಿಚ್ಚಿದ ಹಂತದಲ್ಲಿದ್ದು ಮತ್ತು ಶೆಂಗಾ ಕಾಳು ತುಂಬುವ ಹಂತದಲ್ಲಿದ್ದು, ಮಾರ್ಚ-30 ಕ್ಕೆ ಕಾಲುವೆ ನೀರು ಹರಿಸುವದು ನಿಲ್ಲಿಸಿದರೆ ಸಂಪೂರ್ಣ ಬೆಳೆ ಹಾಳಾಗುತ್ತದೆ. ಮತ್ತು ಇದರ ಮಧ್ಯದಲ್ಲಿ ವಿದ್ಯುತ್ ಇಲಾಖೆಯು ಕೃಷಿ ಪಂಪಸೆಟ್‌ಗೆ ಸಂಬಂಧಪಟ್ಟಂತೆ ವಿದ್ಯುತ್ ಸಂಪರ್ಕ ಸರಿಯಾಗಿ ನೀಡದೆ. ಬೆಳಿಗ್ಗೆ 9.00ಗಂಟೆಯಿಂದ ಸಾಯಂಕಾಲ 4,ಗಂಟೆಯವರೆಗೆ 7 ತಾಸು ಕೊಡುವ ಬದಲು ಬೆಳಗಿನ ಜಾವ 3.ಗಂಟೆಗೆ ರಾತ್ರಿ 12.00ಗಂಟೆಗೆ ನೀಡುವದರಿಂದ. ರೈತರು ಬೆಳೆಗಳಿಗೆ ಸರಿಯಾಗಿ ನೀರು ಕಟ್ಟಲು ಸಾಧ್ಯವಾಗುತ್ತಿಲ್ಲ. ಸಮಯವನ್ನು ತಮಗೆ ಮನಸೋ ಇಚ್ಚೆಯಂತೆ ವಿದ್ಯುತ್ ನೀಡಿ ತಮ್ಮ ಜವಾಬ್ದಾರಿಯಿಂದ ಕೈ ಚಲ್ಲಿ ಕುಳಿತುಕೊಳ್ಳುತ್ತಾರೆ, ಸಮಯವನ್ನು ಉಲ್ಲಂಘನೆ ಮಾಡುವ ಬದಲಾಗಿ ಬೆಳಿಗ್ಗೆ 9.00ಗಂಟೆಯಿಂದ 4.00ಗಂಟೆಯವರೆಗೆ ವಿದ್ಯುತ್ ಪಂಪಸೆಟ್‌ಗಳಿಗೆ ವಿದ್ಯುತ್ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ
ಒತ್ತಾಯಿಸುತ್ತೇದೆ. ಈ ಸಂದರ್ಭದಲ್ಲಿ ಶಿವಪುತ್ರ ಗೌಡ ಕುಪ್ಪಣ್ಣ ವಕೀಲರು. ಬಸನಗೌಡ .ರಾಮಣ್ಣ .ದೇವಪ್ಪ.ಧರ್ಮಪ್ಪ. ಕ.ರಾ.ರೈ.ಸಂ.ಹಾಗೂ ಹಸಿರು.ಸೇನೆ ಮುಖಂಡರು ಉಪಸ್ಥಿತರಿದ್ದರು.
Be the first to comment