ಪತ್ರಕರ್ತರ ಮೇಲೆ ಹಲ್ಲೆಗೈದ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಜಯ ಕರ್ನಾಟಕ ಒತ್ತಾಯ

ಮಸ್ಕಿ, ಮಾರ್ಚ್ 11 : ಪಟ್ಟಣದ ಬಸವೇಶ್ವರ ನಗರದ ತಹಶೀಲ್ದಾರ್ ಕಛೇರಿ ಮುಂಭಾಗ ಲಿಂಗಸ್ಗೂರು ತಾಲೂಕಿನ ಪತ್ರಕರ್ತರ ಮೇಲಿನ ಹಲ್ಲೆ ಖಂಡಿಸಿ ಪತ್ರಕರ್ತರ ಮೇಲೆ ಹಲ್ಲೆಗೈದ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಜಯ ಕರ್ನಾಟಕ ಸಂಘಟನೆಯ ತಾಲೂಕ ಸಮಿತಿಯ ವತಿಯಿಂದ ತಹಶೀಲ್ದಾರ್ ಶಣ್ಮುಖಪ್ಪ ಮಾನವಿ ಇವರ ಮುಖಾಂತರ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

 

ಕಳೆದ ವರ್ಷ ಉಪ್ಪಾರ ನಂದಿಹಾಳ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಯನ್ನು ಶಾಸಕರ ಹಿಂಬಾಲಕರು ಥಳಿಸಿದ್ದರು ಈ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ. ಅದಕ್ಕೂ ಮುಂಚೆ ಮೂರ್ನಾಲ್ಕು ತಿಂಗಳ ಹಿಂದೆ ಹೂನೂರು ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಯ ಮೇಲೆ ಸಾರ್ವಜನಿಕವಾಗಿ ಶಾಸಕರ ಹಿಂಬಾಲಕರು ಹಲ್ಲೆ ಮಾಡುವ ಮೂಲಕ ದರ್ಪ ತೋರಿದ್ದರು ಕ್ಷೇತ್ರದ ಮತದಾರ ಜನಸಾಮಾನ್ಯರು ಹಾಗೂ ಅಧಿಕಾರಿಗಳು ಅಷ್ಟೇ ಅಲ್ಲದೇ ಇದೀಗ ಸಂವಿಧಾನದ ನಾಲ್ಕನೆಯ ಅಂಗವಾಗಿರುವ ಪತ್ರಕರ್ತರ ಮೇಲೆ ಪ್ರಸ್ತುತ ಶಾಸಕ ಡಿ. ಎಸ್ ಹೂಲಿಗೇರಿ ರವರ ಕುಮ್ಮಕ್ಕಿನ ಮೇರೆಗೆ ಅವರ ಹಿಂಬಾಲಕರು ಪತ್ರಕರ್ತರ ಮೊಬೈಲ್ ಕಸೀದುಕೊಂಡು ಹಲ್ಲೆ ಮಾಡುವ ಮಟ್ಟಕ್ಕೆ ಬೆಳೆದಿದ್ದಾರೆ. ಈ ಹಲ್ಲೆಯು ಶಾಸಕ ಡಿ. ಎಸ್ ಹೂಲಿಗೇರಿ ರವರ ಅಧಿಕಾರ ಅವಧಿಯ ಮೂರನೇ ಸಾರ್ವಜನಿಕ ಹಲ್ಲೆಯಾಗಿರುತ್ತದೆ.

 

ಘಟನೆ ಸಾರಾಂಶ : ಲಿಂಗಸುಗೂರು ತಾಲೂಕಿನ ಉಪ್ಪಾರ ನಂದಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನ್ನಾಪೂರಹಟ್ಟಿ ಗ್ರಾಮದಲ್ಲಿ ಮಾರ್ಚ್ 6 ರಂದು ನಡೆದಿದ್ಧ ವಸತಿ ಯೋಜನೆಯ ಫಲಾನುಭವಿಗಳ ಆಯ್ಕೆ ಸಭೆಯ ವರದಿಗೆ ತೆರಳಿದ್ದ ಮುದಗಲ್‌ ಹೋಬಳಿಯ ವಿಜಯವಾಣಿ ದಿನಪತ್ರಿಕೆ ವರದಿಗಾರ ಶರಣಯ್ಯ ಓಡೆಯರ್ ಹಾಗೂ ದಿ ಡೈಲಿ ನ್ಯೂಸ್ ಪತ್ರಿಕೆಯ ವರದಿಗಾರ ಶಿವಶಂಕ್ರಯ್ಯ ಒಡೆಯರ್ ಇವರುಗಳ ಮೇಲೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಕುಂತಲಾ, ಪರಮೇಶ, ಪರಮತ, ಸಂಗಪ್ಪ, ಅಮರೇಶ ಮಹಾಂತಪ್ಪ, ಹನುಮಮ್ಮ ಅಮರೇಶ ಸೇರಿದಂತೆ ಇತರರು ಹಲ್ಲೆ ಮಾಡಿರುವದು ಖಂಡನೀಯ.

ಸಂವಿಧಾನದ ನಾಲ್ಕನೇ ಅಂಗವೆಂದೇ ಕರೆಯಲ್ಪಡುವ ಮಾಧ್ಯಮ ರಂಗದ ವರದಿಗಾರರ ಮೇಲೆ ಆಗಾಗ್ಗೆ ಹಲ್ಲೆಗಳು ನಡೆಯುತ್ತಿರುವುದು ಪತ್ರಕರ್ತರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ಪರಿಣಾಮ ಪತ್ರಕರ್ತರು : ನಿರ್ಭೀತಿಯಿಂದ ವರದಿ ಮಾಡಲು ಸಾಧ್ಯವಾಗುತ್ತಿಲ್ಲ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ, ಉಭಯ ವರದಿಗಾರರ ಮೇಲೆ ಹಲ್ಲೆ ಮಾಡಿದ್ದಲ್ಲದೇ ದುಷ್ಕರ್ಮಿಗಳು ಜೀವ ಬೆದರಿಕ ಹಾಕಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ.

 

ಸಾರ್ವಜನಿಕವಾಗಿ ಪತ್ರಕರ್ಕದ ಮೇಲೆ ಹಲ್ಲೆ ಮಾಡಿದ ಆರೋಪಿಗಳ ವಿರುದ್ಧ ಐದು ವರ್ಷ ಕಾರಾಗೃಹ ಶಿಕ್ಷೆ ಹಾಗೂ 50 ಸಾವಿರ ರೂಪಾಯಿ ದಂಡವನ್ನು ತಧಿಸಬೇಕೆಂದು ಇತ್ತೀಚೆಗೆ ಸರ್ವೋಚ್ಚಿ ನ್ಯಾಯಾಲಯ ತೀರ್ಮ ನೀಡುವ ಮುಖೇನ ಮಾಧ್ಯಮ ರಂಗದ ರಕ್ಷಣೆಗೆ ಧಾವಿಸಿದೆ. ಆದರೆ, ಘಟನೆ ಜರುಗಿ ಮೂರು ದಿನಗಳು ಕಳೆದರೂ ಇದುವರೆಗೂ ಘಟ ಸ್ಥಳಕ್ಕೆ ಯಾವುದೇ ಪೋಲಿಸ್ ಅಧಿಕಾರಿ ಭೇಟಿ ನೀಡದೇ ಇರುವುದು ಪೋಲಿಸ್ ಇಲಾಖೆಯ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಜೊತೆಗೆ ಸಾರ್ವಜನಿಕ ಸ್ಥಳದಲ್ಲಿ ಹಲ್ಲಿಗೀಡಾದ ಪತ್ರಕರ್ತರ ಮೇಲೆ ಪ್ರತಿದೂರು ದಾಖಲಿಸಿರುವುದು ಅನ್ಯಾಯದ ಪರಮಾವಧಿಯಾಗಿದೆ.

 

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮಾಧ್ಯಮ ಸಮಿತಿಯ ಅಧ್ಯಕ್ಷರೂ ಆಗಿರುವ ತಾವುಗಳು ಕೂಡಲೇ ಪತ್ರಕರ್ತರ ಸಭೆ ಕರೆದು ರಕ್ಷಣೆಗೆ ಮುಂದಾಗಬೇಕು, ಹಲ್ಲೆಗೈದ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು, ಪತ್ರಕರ್ತರ ಮೇಲೆ ದಾಖಲಾಗಿರುವ ಪ್ರತಿದೂರನ್ನು ಹಿಂಪಡೆಯಬೇಕು. ತಪ್ಪಿದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ರಾಜ್ಯಾದ್ಯಂತ ಹೋರಾಟ ವಿಸ್ತರಿಸಲಾಗುವುದೆಂದು ಈ ಮೂಲಕ ತಿಳಿಸುತ್ತಿದ್ದೇವೆ ಎಂದು ಜಯ ಕರ್ನಾಟಕ ಸಂಘಟನೆ ತಾಲೂಕ ಸಮಿತಿ ವತಿಯಿಂದ ಮಸ್ಕಿ ತಾಲೂಕ ಅಧ್ಯಕ್ಷ ಕಿರಣ್ ವಿ ಮುರಾರಿ ರವರ ನೇತೃತ್ವದಲ್ಲಿ

ಗ್ರೇಡ್ 2 ತಹಶೀಲ್ದಾರ್ ಶಣ್ಮುಖಪ್ಪ ಮಾನವಿ ಇವರ ಮುಖಾಂತರ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

 

ಈ ಸಂದರ್ಭದಲ್ಲಿ ಯಮನಪ್ಪ ಮುದ್ಗಲ್ ಗೌರವ ಅಧ್ಯಕ್ಷರು, ಖಲೀಲ್ ಶೇಡ್ಮಿ ಅ. ಸಂ. ಅಧ್ಯಕ್ಷ, ಬಸವರಾಜ ಗೋಗಿ, ಪ್ರಧಾನ ಕಾರ್ಯದರ್ಶಿ, ಸಂದೀಪ್ ಕೊಡೇಕಲ್ ನಗರ ಘಟಕ ಉಪಾಧ್ಯಕ್ಷ, ರವಿ ಜಿ ಚೌಡಕಿ ನಗರ ಘಟಕ ಕಾರ್ಯಾಧ್ಯಕ್ಷರು,ದುರುಗಪ್ಪ ಆಟೋ ಚಾಲಕರ ಘಟಕದ ಅಧ್ಯಕ್ಷ, ಶಿವು ಜಾಕಿ ನಗರ ಘಟಕ ಅಧ್ಯಕ್ಷ,ಅಮರೇಶ್ ಜಾಧತ್ ಉಪಾಧ್ಯಕ್ಷರು ಮಸ್ಕಿ ತಾಲೂಕು, ಅಶೋಕ ವೆಂಕಟಾಪುರ,ಮಲ್ಲಪ್ಪ ಮುರಾರಿ ಉಪಾಧ್ಯಕ್ಷರು ಸೇರಿದಂತೆ ಇನ್ನಿತರರು ಇದ್ದರು.

Be the first to comment

Leave a Reply

Your email address will not be published.


*