೩೫ ರಿಂದ ೪೦ ಸಾವಿರ ಅಂತರ ದಲ್ಲಿ ಮಸ್ಕಿಯಲ್ಲಿ ಪ್ರತಾಪ್ ಗೌಡ ಪಾಟೀಲ್ ಗೆಲುವು ನಿಶ್ಚಿತ : ಬಿ. ಎಸ್ ಯಡಿಯೂರಪ್ಪ 

ಮಸ್ಕಿ, ಮಾರ್ಚ್ 12 : ಪಟ್ಟಣದ ಪೋಲಿಸ್ ಠಾಣೆ ಪಕ್ಕದ ಆವರಣದಲ್ಲಿ ಆಯೋಜಿಸಲಾಗಿದ್ದ ಜನ ಅಂಕಲ್ಪ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಶತ ಸಿದ್ಧಸಿದ್ಧ ಹಾಗೂ ೩೫ರಿಂದ ೪೦ ಸಾವಿರ ಅಂತರದಲ್ಲಿ ಮಸ್ಕಿಯಲ್ಲಿ ಪ್ರತಾಪ್ ಗೌಡ ಪಾಟೀಲ್ ಗೆಲುವು ನಿಶ್ಚಿತ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

 

ಮಸ್ಕಿ ಪಟ್ಟಣದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಡ ಹೆಣ್ಣು ಮಕ್ಕಳಿಗೆ ಪ್ರತಿ ತಿಂಗಳು ೧೦೦೦ ಸಾವಿರ ರೂಪಾಯಿಗಳ ಸಹಾಯಧನ, ರೈತರ ಅನೂಕೂಲಕ್ಕಾಗಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಬೀಜಕ್ಕಾಗಿ ೧೦೦೦೦ ಸಾವಿರ ರೂಗಳ ನೆರವು. ಅಲ್ಲದೇ ರೈತರಿಗೆ ಮೊದಲ ಬಾರಿಗೆ ಜೀವ ವಿಮೆ ಜಾರಿಗೆ ತರಲಾಗಿದೆ. ೧೮೦ ಕೋಟಿ ರೂ. ಹಣವನ್ನು ಸರ್ಕಾರ ಭರಿಸುತ್ತಿದೆ. ರೈತ ಮರಣ ಹೊಂದಿದರೆ ೨ ಲಕ್ಷ ರೂ. ಪರಿಹಾರ, ಎಸ್ಸಿ, ಎಸ್ಟಿ ಜನಾಂಗಕ್ಕೆ ಮೀಸಲಾತಿ ನೀಡಲಾಗಿದೆ. ಲಂಬಾಣಿ, ಗೊಲ್ಲರಹಟ್ಟಿ, ಕುರುಬರ ಹಟ್ಟಿ ೫೦ಸಾವಿರ ಕುಟುಂಬಕ್ಕೆ ಹಕ್ಕು ಪತ್ರ ನೀಡಲಾಗುತ್ತಿದೆ. ಮನೆ-ಮನೆಗೂ ತೆರಳಿ ಹೇಳಿ ಸಾಮಾಜಿಕ ಭದ್ರತಾ ಯೋಜನೆಗಳ ಹಣ ಹೆಚ್ಚು ಮಾಡಲಾಗಿದೆ. ಭಾಗ್ಯಲಕ್ಷ್ಮೀ ಬಾಂಡ್ ಯೋಜನೆ, ಹೆಣ್ಣು ಮಕ್ಕಳಿಗೆ ಸೈಕಲ್, ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ರೈತರ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ಕೊಟ್ಟಿದ್ದು ಯಡಿಯೂರಪ್ಪ ಎಂದು ಹೇಳಿ ಎಂದರು. ನಮ್ಮ ಬಿಜೆಪಿ ಸರ್ಕಾರ ಅಭಿವೃದ್ಧಿ ಕೆಲಸಗಳನ್ನು ನಿರೀಕ್ಷೆ ಮೀರಿ ಮಾಡುತ್ತಿದೆ. ತುಂಗಭದ್ರಾ ಎಡದಂಡೆ ನಾಲೆಯಿಂದ ಕೊನೆ ಭಾಗದ ರೈತರಿಗೆ ಏಪ್ರಿಲ್ ೧೦ರವರೆಗೆ ನೀರು ಒದಗಿಸಲು ಸಿಎಂ, ಸಚಿವರಿಗೆ ಸೂಚನೆ ನೀಡಲಾಗಿದೆ ಮಸ್ಕಿ ಅಭಿವೃದ್ಧಿಗಾಗಿ ನಂದವಾಡಗಿ ಮೂರು ಹಂತದಲ್ಲಿ ಯೋಜನೆ ಜಾರಿ, ಮಸ್ಕಿ ನಾಲಾ ಯೋಜನೆಯ ೭ಸಾವಿರ ಹೆಕ್ಟರ್ ಪ್ರದೇಶ ಹೊಂದಿದ ೫೨ ಕೋಟಿ ರೂ ಕಾಮಗಾರಿ ಮಾಡಲಾಗುತ್ತಿದೆ. ಕೆರೆ ತುಂಬಿಸುವ ಯೋಜನೆ ೪೭೦ ಕೋಟಿ ಕಾಮಗಾರಿ ಟೆಂಡರ್ ಪ್ರಗತಿಯಲ್ಲಿದೆ ವಟಗಲ್ ಬಸವೇಶ್ವರ ನೀರಾವರಿ ಯೋಜನೆ ೧೪೨೧ ಕೋಟಿ ರೂ. ತಾಂತ್ರಿಕ ಮಂಜೂರು ಆಗಿದೆ. ಈ ಕ್ಷೇತ್ರದ ಇನ್ನಷ್ಟು ಅಭಿವೃದ್ಧಿಗಾಗಿ ಪ್ರತಾಪಗೌಡ ಪಾಟೀಲ್, ದೊಡ್ಡ ಅಂತರದಿಂದ ಗೆಲ್ಲಿಸಬೇಕು. ಇಷ್ಟು ಜನ ಸೇರಿರೋದೆ ಅವರ ಗೆಲುವು ಸಾಧ್ಯ ಎನ್ನುವುದಕ್ಕೆ ಸಾಕ್ಷಿ. ಇಡೀ ಜಗತ್ತು ಮೋದಿ ಅವರನ್ನು ಕೊಂಡಾಡುತ್ತಿದೆ. ಮೋದಿ, ಅಮಿತ್ ಶಾ ನೇತೃತ್ವದಲ್ಲಿ ೧೪೦ ಕ್ಷೇತ್ರದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಪ್ರತಾಪಗೌಡ ಪಾಟೀಲರನ್ನು ೩೫-೪೦ಸಾವಿರ ಅಂತರದಿಂದ ಗೆಲ್ಲಿಸಬೇಕು. ಇಲ್ಲಿ ನಿರೀಕ್ಷೆ ಮೀರಿ ತಾಯಂದಿರು ಸೇರಿದ್ದಾರೆ. ಮಹಿಳೆಯರಿಗೆ ಅಸಾಧ್ಯವಾದುದು ಯಾವುದು ಇಲ್ಲ. ಆದ್ದರಿಂದ ಪ್ರತಾಪಗೌಡ ಪಾಟೀಲ್‌ರನ್ನು ನಾನು ಭಾವಿ ಶಾಸಕರೆಂದು ಕರೆಯುತ್ತೇನೆ ಎಂದರು.

 

 

ನಂತರ ಸಚಿವ ಶ್ರೀರಾಮುಲು ಮಾತನಾಡಿ ಕಾಂಗ್ರೆಸ್‌ನವರು ಸುಳ್ಳು ಆಶ್ವಾಸನೆ ನೀಡಿ ಏತ ನೀರಾವರಿ, ೫ ಕಾಲುವೆ ಜಾರಿ ಮಾಡುವುದಾಗಿ ಹೇಳಿರಿ, ಕಾಂಗ್ರೆಸನವರು ಉಚಿತ ಯೋಜನೆಗಳ ಗ್ಯಾರಂಟಿ ಪತ್ರ ಕೊಟ್ಟಿದ್ದಾರೆ. ಆದರೆ ಗ್ಯಾರೆಂಟಿ ವಾರೆಂಟಿ ಏನೂ ನಡೆಯಲ್ಲ. ಎಲ್ಲ ಬರೀ ಸುಳ್ಳು, ೨೦೨೩ರ ಚುನಾವಣೆಯಲ್ಲಿ ಪ್ರತಾಪಗೌಡ ಪಾಟೀಲ್‌ರನ್ನ ಗೆಲ್ಲಿಸ್ತಾರೆ. ಸಮಗ್ರ ಅಭಿವೃದ್ಧಿ ಆಗಬೇಕಾದರೆ ಬಿಜೆಪಿಗೆ ವೋಟ್ ಕೊಡಿ. ಡಬಲ್ ಇಂಜಿನ್ ಸರ್ಕಾರ, ಮೋದಿ, ಬೊಮ್ಮಾಯಿ ಸರ್ಕಾರ ಜನಪರ ಆಡಳಿತ ನೀಡುತ್ತಿದೆ. ಪ್ರತಾಪಗೌಡ ಪಾಟೀಲ್‌ರಿಗೆ ಉಜ್ವಲವಾದ ಭವಿಷ್ಯವಿದೆ ಆದ್ದರಿಂದ ಮತ್ತೋಮ್ಮೆ ಗೆಲ್ಲಿಸಿ ಎಂದು ಮನವಿ ಮಾಡಿದರು.

 

ನಂತರ ಸಂಸದ ಸಂಗಣ್ಣ ಕರಡಿ ಹಾಗೂ ಪ್ರತಾಪಗೌಡ ಪಾಟೀಲ್ ಮಾತನಾಡಿದರು.

 

ಈ ಸಂದರ್ಭದಲ್ಲಿ ಕೆ.ವಿರೂಪಾಕ್ಷಪ್ಪ, ಜಿಲ್ಲಾಧ್ಯಕ್ಷ ರಮಾನಂದ ಯಾದವ್, ಸಿದ್ದೇಶ ಯಾದವ್, ಅಮರನಾಥ ಪಾಟೀಲ್, ಗಂಗಾಧರ ನಾಯಕ, ಕೆ.ವೀರನಗೌಡ ಕಾರಲಕುಂಟಿ, ಮಹಾದೇವಪ್ಪಗೌಡ ಪೊಲೀಸ್ ಪಾಟೀಲ್, ಮಸ್ಕಿ ನಾಗರಾಜ್ ವಕೀಲರು, ಮಂಡಲ ಅಧ್ಯಕ್ಷ ಶಿವಪುತ್ರಪ್ಪಅರಳಳ್ಳಿ, ರವಿ ಗೌಡ ಪಾಟೀಲ್, ಸೇರಿದಂತೆ ಇತರರು ಇದ್ದರು.

Be the first to comment

Leave a Reply

Your email address will not be published.


*