ಜೇವರ್ಗಿ : ಇಡೀ ತಾಲೂಕಿನಲ್ಲಿ 40 ಸಾವಿರ ಕೋಲಿ ಸಮಾಜದ ಮತದಾರರಿದ್ದಾರೆ,ಅದರೆ ಯಾವ ರಾಜಕೀಯ ಪಕ್ಷವು ಪರಿಗಣಿಸಿ ಜನಸಂಖ್ಯೆ ಆಧಾರದ ಮೇಲೆ ರಾಜಕೀಯವಾಗಿ ಪ್ರಾತಿನಿದ್ಯ ನೀಡಿಲ್ಲಾ. ಅಲ್ಲದೇ ಎಲ್ಲಾ ರಾಜಕೀಯ ಪಕ್ಷಗಳು ಸಮಾಜವನ್ನು ವಂಚಿನೆ ಮಾಡುತ್ತಾ ಬಂದಿವೆ.
ಮುಂದೇ ಬರುವ 2023 ರ ಸಾರ್ವತ್ರಿಕ ಚುನಾವಣೆಯಲ್ಲಿ ಜೇವರ್ಗಿ ವಿಧಾನಸಭಾ ಕ್ಷೇತ್ರದಿಂದ ನಮ್ಮ ಸಮಾಜದ ಮುಖಂಡರಿಗೆ ಯಾವ ಪಕ್ಷ ಟಿಕೆಟ್ ನೀಡುತ್ತದೆಯೋ ಆ ಪಕ್ಷಕ್ಕೆ ಸಮಾಜದ ಬೆಂಬಲಿಸಲಿದೆ.ಇಲ್ಲಾ ನಮ್ಮ ಯುವ ಮುಖಂಡರು ಚುನಾವಣೆ ಬಹಿಷ್ಕಾರ ಹಾಕಲಾಗುತ್ತದೆ, ಈ ಬಗ್ಗೆ ವಿವಿಧ ಪಕ್ಷಗಳು ಸೂಕ್ಷ್ಮವಾಗಿ ವಿಚಾರ ಮಾಡಬೇಕು. ಎಂದು ಕೋಲಿ ಸಮಾಜದ ಮುಖಂಡರು ಇಂದು ಜೇವರ್ಗಿ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಮಾಜದ ಯುವ ಧುರಿಣರಾದ ದೇವಿಂದ್ರ ಈ ತಳವಾರ, ಚಂದ್ರು ತಳವಾರ, ಸಿದ್ದು ಕಾಮನಕೇರಿ, ಬಸವರಾಜ್ ಜಂಬೆರಾಳ, ದೇವು ಪೂಜಾರಿ, ಸಾಯಿಬಣ್ಣ ತಳವಾರ, ಗೊಲ್ಲಾಳಪ್ಪ ತಳವಾರ, ರಾಮಣ್ಣ ಚನ್ನುರ ಉಪಸ್ಥಿತರಿದ್ದರು.
Be the first to comment