ಮೂರು ದಿವಸಗಳ ಕಾಲ ಮಂಗಳೂರು ಪುರಭವನದಲ್ಲಿ ನಡೆದ ಬ್ಯಾರಿ ಮೇಳ ಯಶಸ್ವಿ

ಮೂರು ದಿವಸಗಳ ಕಾಲ ಮಂಗಳೂರು ಪುರಭವನದಲ್ಲಿ ನಡೆದ ಬ್ಯಾರಿ ಮೇಳ ಬಹಳ ಯಶಸ್ವಿಯಾಗಿ ನಡೆಯಿತು.ಮೂರು ದಿವಸಗಳಲ್ಲಿ ನಾನು ಒಬ್ಬ ಸಮಾಜದ ಬಂಧುವಾಗಿ ಈ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಬಾಗವಹಿಸಿದ್ದೇನೆ.ಮೊದಲ ದಿನ ಉದ್ಘಾಟನಾ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ,ಗಣ್ಯ ವ್ಯಕ್ತಿಗಳ ಕಿರುಪರಿಚಯ ನಡೆಯಿತು.

ಇದು ಎಲ್ಲಾ ಕಾರ್ಯಕ್ರಮಗಳಲ್ಲಿ ನಡೆಯುವ ವಿಷಯ.ಆದರೆ ಎರಡನೇ ದಿವಸ ನಡೆದ ಕಾರ್ಯಕ್ರಮದಲ್ಲಿ ಬ್ಯಾರಿ ಮಹಿಳಾ ಸಾಧಕರಿಗೆ ವೇದಿಕೆ ಕಲ್ಪಿಸಿ ಕೊಟ್ಟು ಅವರಿಂದ ಈ ಸಮಾಜಕ್ಕೆ ಒಳಿತಾಗುವ ಸಂದೇಶ ಮತ್ತು ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮ ಬಹಳ ಅರ್ಥಪೂರ್ಣ ಕಾರ್ಯಕ್ರಮ.ಹಾಗಯೇ ಕೊನೆಯ ದಿನ ಯುವ ಪ್ರತಿಭೆಗಳಿಗೆ ಉದ್ಯೋಗ ಮೇಳ ದ ಮೂಲಕ ಉದ್ಯೋಗ ದೊರಕಿಸಿ ಕೊಡುವ ಮೂಲಕ ಕ್ರಾಂತಿಕಾರಕ ಹೆಜ್ಜೆಯನ್ನಿ ರಿಸಿದಕ್ಕೆ ವಿಶೇಷವಾದ ಅಭಿನಂದನೆಗಳು ಸಲ್ಲಿಸುತ್ತಿದ್ದೇನೆ.ಇನ್ನೂ ಅನೇಕ ಪ್ರಮುಖ ಕಂಪೆನಿಗಳು ಭಾಗವಹಿಸುವಂತೆ ಆಗಬೇಕಿದೆ.

ಐನೂರಕ್ಕೂ ಅಧಿಕ ಉದ್ಯೋಗಾಂಕ್ಷಿಗಳು ಈ ಮೇಳದಲ್ಲಿ ಭಾಗವಹಿಸುವ ಮೂಲಕ ಯಶಸ್ವಿಯಾಗಿ ಸಿದ್ದಾರೆ.ಮುಂದೆ ಇನ್ನೂ ಅಧಿಕ ಕಂಪೆನಿಗಳು ಭಾಗವಹಿಸುವಂತೆ ಮಾಡಬೇಕಿದೆ ಖಂಡಿತಾ ಮುಂದೆ ಆಗಬಹುದು.ಮತ್ತೆ ವಿಶಿಷ್ಟ ಖಾದ್ಯಗಳನ್ನು ಒಳಗೊಂಡ ಫುಡ್ ಕೋರ್ಟ್,ಅಂಗಡಿಗಳು, ಹೋಂ ಮೇಡ್ ಪ್ರೊಡಕ್ಷನ್ಸ್ ಇವು ಜನರನ್ನು ಹೆಚ್ಚು ಆಕರ್ಷಿಸಿದೆ.ಹಾಗೆಯೇ ಬ್ಯಾರಿ ಯುವ ಪ್ರತಿಭೆಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ವೇದಿಕೆ ಕಲ್ಪಿಸಿ ಕೊಟ್ಟು ಪ್ರೋತ್ಸಾಹ ನೀಡಿದ್ದು ಅಭಿನಂದನಾರ್ಹ ವಿಷಯ.ಮುಂದಕ್ಕೆ ಬಿಸಿಸಿಐ ವತಿಯಿಂದ ಒಂದು ಸ್ಟಾಟ್ ಆಪ್ ಕಂಪೆನಿ ಸ್ಥಾಪನೆ ಮಾಡಬೇಕು ಅದರಿಂದ ಸಮಾಜದ ಯುವ ಪೀಳಿಗೆಗೆ ಬಹಳ ಪ್ರಯೋಜನಕಾರಿ ಇದೆ. ಹಾಗೆಯೇ ಉದ್ಯಮಿಗಳಾದ ತಮಗೂ ಯಶಸ್ಸು ಇದೆ.

ಹಾಗೆಯೇ ಒಂದು ಪ್ಯಾರಾ ಮೆಡಿಕಲ್ ಕಾಲೇಜು ಮತ್ತು ತಾಂತ್ರಿಕ ಕಾಲೇಜು ಬಿಸಿಸಿಐ ನೇತೃತ್ವದಲ್ಲಿ ಈ ಜಿಲ್ಲೆಯಲ್ಲಿ ಸ್ಥಾಪನೆ ಮಾಡಬೇಕಾಗಿ ವಿನಂತಿ.ಇದರಿಂದ ಸಮುದಾಯದ ವಿದ್ಯಾರ್ಥಿಗಳಿಗೆ,ಯುವ ಪ್ರತಿಭೆಗಳಿಗೆ ಅವಕಾಶ ಲಬಿಸಿದಂತೆ ಆಗುತ್ತದೆ.ಹಾಗೆಯೇ ಒಂದು ಉನ್ನತ ಶಿಕ್ಷಣ ನೀಡುವ ಮಹಿಳಾ ಪದವಿ ಕಾಲೇಜು ಸ್ಥಾಪನೆ ಮಾಡಬೇಕಾಗಿ ವಿನಂತಿ ಮಾಡುತ್ತಿದ್ದೇನೆ.ಹೀಗೆ ಎಲ್ಲಾ ಕೋನಗಳಿಂದ ನೋಡಿದರೂ ಈ ಬಾರಿಯ ಬ್ಯಾರಿ ಮೇಳ ಬಹಳ ಅರ್ಥಪೂರ್ಣ ಯಶಸ್ವಿ ಕಾರ್ಯಕ್ರಮವಾಗಿ ಮೂಡಿಬಂದಿದೆ.ಇದಕ್ಕಾಗಿ ಬಿಸಿಸಿಐ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ವಿಶೇಷವಾದ ಅಭಿನಂದನೆಗಳು ಸಲ್ಲಿಸುತ್ತಿದ್ದೇನೆ. ಇನ್ನು ಮುಂದೆಯೂ ಸಮಾಜಕ್ಕೆ,ಈ ದೇಶಕ್ಕೆ ಒಳಿತಾಗುವ ಕೆಲಸ ಬಿಸಿಸಿಐ ನೇತೃತ್ವದಲ್ಲಿ ನಡೆಯಲಿ ಎಂಬುದೇ ನನ್ನ ಹಾರೈಕೆ.

Be the first to comment

Leave a Reply

Your email address will not be published.


*