ಉನ್ನತ ಶಿಕ್ಷಣ ಸಚಿವ ಅಶ್ವಥ ನಾರಾಯಣ ಮೇಲೆ ಕಾನೂನು ಕ್ರಮ ಕೈಗೊಳ್ಳಲು. ಆರ್.ರುದ್ರಯ್ಯ ಕಾಂಗ್ರೆಸ್ ಮುಖಂಡರಿಂದ ಬೃಹತ್ ಪ್ರತಿಭಟನೆ.

ಆರ್.ರುದ್ರಯ್ಯ ಕಾಂಗ್ರೆಸ್ ಪಕ್ಷದ ಮುಖಂಡರಿಂದ ಲಿಂಗಸುಗೂರ ಪಟ್ಟಣದಲ್ಲಿ ಪ್ರಮುಖ ರಸ್ತೆಗಳ ಮೂಲಕ ಕಾಂಗ್ರೆಸ್ ಕಾರ್ಯಕರ್ತರಿಂದ ಬೃಹತ್ ಪ್ರತಿಭಟನೆ.ಮಾಡುವ ಮೂಲಕ ರಾಜ್ಯಪಾಲರು, ಕರ್ನಾಟಕ ಸರಕಾರ -ಇವರಿಗೆ.

ಸಹಾಯಕ ಆಯುಕ್ತರು ಉಪ ವಿಭಾಗ ಲಿಂಗಸಗೂರು – ಇವರ ಮುಖಾಂತರ ಮನವಿಯನ್ನು ಸಲ್ಲಿಸಿದರು ಬಿಜೆಪಿಯ ಸಚಿವರಾದ ಅಶ್ವಥ ನಾರಾಯಣ ಇವರು ಮಾಜಿ ಮುಖ್ಯ ಮಂತ್ರಿಗಳು, ಬಹಿರಂಗ ಸಬೆಯಲ್ಲಿ ಕರ್ನಾಟಕ ಸರಕಾರದ ವಿರೋಧ ಪಕ್ಷದ ನಾಯಕರು ಹಾಗೂ ಸಂವಿಧಾನಿಕ ಹುದ್ದೆ ಹೊಂದಿರುವ ಸಿದ್ದರಾಮಯ್ಯ ಇವರನ್ನು ಟಿಪ್ಪು ಸುಲ್ತಾನನನ್ನು ಹೊಡೆದು ಕೊಂದ ರೀತಿಯಲ್ಲಿ ಸಾಯಿಸಬೇಕೆಂದು ಬಹಿರಂಗ ಹೇಳಿಕೆ ನೀಡಿದ್ದು, ಪ್ರಚೋದನಾತ್ಮಕ ಹೇಳಿಕೆಯು ಇಡೀ ಕರ್ನಾಟಕ ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿದಂತಾಗಿದ್ದು ಅಕ್ಷಮ್ಯ ಅಪರಾಧ, ಸಂಪುಟ ದರ್ಜೆ ಸಚಿವರಾಗಿ ಈ ರೀ ಹೇಳಿಕೆ ನೀಡಿರುವದು ಶೋಭೆ ತರುವಂಥದ್ದಲ್ಲ, ತಕ್ಷಣವೇ ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಇವರು ಸಂಪುಟ ದರ್ಜೆ ಸಚಿವರಾದ ಅಶ್ವಥ ನಾರಾಯಣ ಇವರನ್ನು ಕೂಡಲೇ ಸಂಪುಟದಿಂದ ವಜಾ ಮಾಡಬೇಕು

ಬೆಂಗಳೂರು ಪೋಲಿಸ್ ಮಹಾ ನಿರ್ದೇಶಕರು ಇವರು ಸ್ವಯಂ ಪ್ರೇರಿತ ಸುಮೋಟೋ ಕೇಸು ದಾಖಲಿಸಿ ತಕ್ಷಣವೇ ಸಂಪುಟ ದರ್ಜೆ ಸಚಿವರಾದ ಅಶ್ವಥ ನಾರಾಯಣರವರನ್ನು ಬಂಧಿಸ ಬೇಕು ಎಂದು ರಾಜ್ಯಪಾಲರು ಆದೇಶಿಸಬೇಕೆಂದು ಮನವಿಯನ್ನು ಆರ್.ರುದ್ರಯ್ಯ ಕಾಂಗ್ರೆಸ್ ಮುಖಂಡರು ಮನವಿ ಸಲ್ಲಿಸಿದರು ಈ ಸಂದರ್ಭದಲ್ಲಿ. ಕಾಂಗ್ರೆಸ್ ಮುಖಂಡರಾದ ಆರ್.ಎಸ್.ನಾಡ್ ಗೌಡ್ರು.ಕಾಳಾಪುರ್. ನಾಗನಗೌಡ ತುರುಡಗಿ. ಸಂಗಣ್ಣ ಬಯ್ಯಾಪುರ್. ಆರ್.ಎಸ್.ರಸೊಲ್. ಹೊನ್ನಪ್ಪ ಮೇಟಿ. ಶರಣಪ್ಪ ಮೇಟಿ. ಜಂಬನಗೌಡ. ಮಾದವ ನೆಲೋ ಗಿ. ಬಸನ ಗೌಡ. ನಿಂಗಪ್ಪ ಪರಂಗಿ. ಪ್ರಭು ಹವಾಲ್ದಾರ. ರಮೇಶ ಗೋಸ್ಲೆ. ಚನ್ನಬಸವ ಶಾಂತ ಹಣಗಿ. ನಿಲಮ್ಮ್ ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*