ಮಸ್ಕಿ, ಫೆಬ್ರುವರಿ 18 : ಗಾಂಧಿನಗರದ ಪ್ರವಾಸಿಮಂದಿರದಲ್ಲಿ ಶನಿವಾರ ಜಯ ಕರ್ನಾಟಕ ಸಂಘಟನೆಯ ವತಿಯಿಂದ ತಾಲ್ಲೂಕ ನಗರ ಘಟಕ, ಕಾರ್ಮಿಕ ಘಟಕ,ಸಾಂಸ್ಕೃತಿಕ ಘಟಕ, ಆಟೋಚಾಲಕರ ಘಟಕ ಮುಂತಾದ ಘಟಕಗಳ ಪದಾಧಿಕಾರಿಗಳನ್ನ ನೇಮಕಾತಿ ಮಾಡಿ ಜಿಲ್ಲಾಧ್ಯಕ್ಷರಾದ ಎಸ್ ಶಿವಕುಮಾರ್ ಯಾದವ್ ರವರ ಸೂಚನೆಯ ಮೇರೆಗೆ ಮಸ್ಕಿ ತಾಲ್ಲೂಕ ಅಧ್ಯಕ್ಷರಾದ ಕಿರಣ್ ವಿ ಮುರಾರಿಯವರ ಉಪಸ್ಥಿತಿಯಲ್ಲಿ ವಿವಿಧ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಜಯ ಕರ್ನಾಟಕ ಜಿಲ್ಲಾಧ್ಯಕ್ಷರಾದ ಎಸ್ ಶಿವಕುಮಾರ್ ಯಾದವ್ ರವರ ಸೂಚನೆಯ ಮೇರೆಗೆ ತಾಲ್ಲೂಕ ಅಧ್ಯಕ್ಷರಾದ ಕಿರಣ್ ವಿ ಮುರಾರಿ ರವರು ಮಸ್ಕಿ ತಾಲ್ಲೂಕ ಗೌರವಾಧ್ಯಕ್ಷರು ಯಮನಪ್ಪ ಮುದ್ಗಲ್, ತಾಲೂಕ ಕಾರ್ಯಾಧ್ಯಕ್ಷರನ್ನಾಗಿ ಮಲ್ಲಿಕಾರ್ಜುನ ನಂದಿಹಾಳ್, ತಾಲ್ಲೂಕ ಉಪಾಧ್ಯಕ್ಷರನ್ನಾಗಿ ಮಲ್ಲಪ್ಪ ಮುರಾರಿ ಮಸ್ಕಿ, ಅಮರೇಶ್ ಜಾಧವ್ ಮಸ್ಕಿ ತಾಂಡಾ, ನಗರ ಆಟೋ ಚಾಲಕರ ಘಟಕ ಅಧ್ಯಕ್ಷ ದುರಗಪ್ಪ ಮಸ್ಕಿ, ಗೋನಾಳ್ ಆಟೋ ಮಾರ್ಗದ ಅಧ್ಯಕ್ಷ ದುರ್ಗಾಸಿಂಗ್ ಗೋನಾಳ್, ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಬಸವರಾಜ್ ಯದ್ದಲದಿನ್ನಿ, ಸಹಕಾರ್ಯದರ್ಶಿ ಹುಲಿಗೇಶ್ ಡಿ ಚೌಡ್ಕಿ, ಪ್ರಧಾನಕಾರ್ಯದರ್ಶಿ ಬಸವರಾಜ್ ಗೋಗಿ, ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಖಲೀಲ್ ಶೇಡ್ಮಿ, ನಗರ ಘಟಕ ಅಧ್ಯಕ್ಷ ಶಿವು ಜಾಕಿ, ನಗರ ಘಟಕ ಕಾರ್ಯಾಧ್ಯಕ್ಷ ರವಿ ಜಿ ಚೌಡ್ಕಿ, ಉಪಾಧ್ಯಕ್ಷ ಸಂದೀಪ್ ಕೊಡೇಕಲ್,ಮಸ್ಕಿ ನಗರ ಘಟಕ ಗೌರವಾಧ್ಯಕ್ಷರು ಮಂಜುನಾಥ್ ಬುಳ್ಳಾ ಮಸ್ಕಿ,ಕಾರ್ಮಿಕ ಘಟಕ ಅಧ್ಯಕ್ಷರು ಅಶೋಕ್ ವೆಂಕಟಾಪುರ ರವರನ್ನು ಅಯ್ಕೆ ಮಾಡಿ ನೇಮಕ ಪತ್ರವನ್ನು ನೀಡಲಾಯಿತು.
ನಂತರ ಜಯ ಕರ್ನಾಟಕ ಸಂಘಟನೆಯ ಮಸ್ಕಿ ತಾಲೂಕಿನ ಅಧ್ಯಕ್ಷರಾದ ಕಿರಣ್ ವಿ ಮುರಾರಿ ಮತ್ತು ದಲಿತ ಸಮುದಾಯದ ಮುಖಂಡರಾದ ಶರಣಪ್ಪ ಗಡ್ಡದ,ದೊಡ್ಡಪ್ಪ ಮುರಾರಿ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಮಟ್ಟದ ಹಾಗೂ ತಾಲೂಕ ಮಟ್ಟದ ಅಧ್ಯಕ್ಷರುಗಳು ಸೇರಿದಂತೆ ಇನ್ನಿತರೇ ಪದಾಧಿಕಾರಿಗಳು ಹಾಜರಿದ್ದರು.
Be the first to comment