ಮಾಜಿ ಶಾಸಕರ ಬೇಡಿಕೆ ಪತ್ರಕ್ಕೆ ಸ್ಪಷ್ಟನೆ ನೀಡಿದ ಆರ್. ಸಿದ್ಧನಗೌಡ 

ಮಸ್ಕಿ, ಫೆಬ್ರುವರಿ 16 : ಚುನಾವಣೆ ಸಂಧರ್ಭದಲ್ಲಿ ಇರುವ ಮತದಾರರ ಮೇಲಿನ ಹಾಗೂ ಕ್ಷೇತ್ರದ ಮೇಲಿನ ಪ್ರೀತಿ 12 ವರ್ಷ ಅಧಿಕಾರದಲ್ಲಿರುವಾಗ ಯಾಕೆ ಇರಲಿಲ್ಲ. ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲರು ಮನವಿ ಪತ್ರದ ಮೂಲಕ ನೀಡಿದ ಬಹು ಬೇಡಿಕೆಗಳನ್ನು ನಾವು ಆಯ್ಕೆ ಅದಾಗಿನಿಂದಲು ಈ ಎಲ್ಲಾ ಬೇಡಿಕೆಗಳನ್ನು ಸಂಭಂದಪಟ್ಟ ಇಲಾಖೆಗಳಿಗೆ ಪತ್ರ ಬರೆದು ಹಾಗೂ ಅಧಿವೇಶನದಲ್ಲಿ ಘಂಟಾ ಕೋಶವಾಗಿ ಧ್ವನಿ ಕೂಡ ಎತ್ತಿದ ಕ್ಷೇತ್ರದ ಶಾಸಕ ಬಸನ ಗೌಡ ತುರುವಿಹಾಳ ಎಂದು ಕೆಪಿಸಿಸಿ ಎಸ್ಟಿ ಘಟಕದ ಪ್ರಧಾನ ಕಾರ್ಯದರ್ಶಿ ಆರ್.ಸಿದ್ದನಗೌಡ ಪತ್ರಿಕಾ ಹೇಳಿಕೆ ಮೂಲಕ ಸ್ಪಷ್ಟನೆ ನೀಡಿದ್ದಾರೆ.

 

ಮಾಜಿ ಶಾಸಕ ರಾದ ಪ್ರತಾಪ್ ಗೌಡ ಪಾಟೀಲರು ಚುನಾವಣೆಗೆ ಸಮೀಪಿಸುತ್ತಿದ್ದಂತೆಯೇ ಹಲವಾರು ಯೋಜನೆಗೆ ಅನುದಾನ ಕೋರಿ ಸರ್ಕಾರಕ್ಕೆ ಪತ್ರ ಬರೆದಿರುವುದು ನನ್ನ ಗಮನಕ್ಕೆ ಬಂದಿರುತ್ತದೆ. ಇವರು ಅನ್ನದಾನ ಕೋರಿ ಪತ್ರ ಬರೆದಿರುವ ಯೋಜನೆಗಳ ಪೈಕಿ ಬಹುತೇಕ ಯೋಜನೆಗಳಿಗೆ ನಮ್ಮ ಶಾಸಕರಾದ ಬಸನಗೌಡ ತುರುವಿಹಾಳ ಅವರು ಅಧಿಕಾರಕ್ಕೆ ಬಂದ ದಿನದಿಂದಲೂ ಸತತವಾಗಿ ಪರಿಶ್ರಮಿಸುತ್ತಿದ್ದಾರೆ. ಹಾಗೂ ಸಂಬಂಧಿಸಿದ ಇಲಾಖೆಗಳೊಂದಿಗೆ ಪತ್ರ ವ್ಯವಹಾರ ನಡೆಸುವುದರ ಜೊತೆಗೆ ವಿಧಾನಸಭಾ ಅಧಿವೇಶನದಲ್ಲಿಯೂ ಗಂಭೀರವಾಗಿ ಧ್ವನಿಯೆತ್ತಿದ್ದಾರೆ.

 

ಆದರೆ ಚುನಾವಣೆ ಸಮೀಪಿಸುತ್ತಿದ್ದಂತೆ ಮಾಜಿ ಶಾಸಕರು ಜನರ ಕಣ್ಣೊರೆಸುವ ತಂತ್ರದ ಭಾಗವಾಗಿ ಸದರಿ ಯೋಜನೆಗಳಿಗೆ ಅನುದಾನ ಕೋರಿ ಬರೆದ ಪತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುವ ಮೂಲಕ ಸಾರ್ವಜನಿಕರ ಓಲೈಕೆಗೆ ಪ್ರಯತ್ನಿಸುತ್ತಿದ್ದಾರೆ. ಮಸ್ಕಿ ಮತದಾರರು ಇವರ ನಾಟಕೀಯ ರಾಜಕಾರಣವನ್ನು ಒಪ್ಪುವುದಿಲ್ಲ. ಈಗಾಗಲೇ ಉಪಚುನಾವಣೆಯಲ್ಲಿ ಹೇಳಿದ ಹಲವಾರು ಸುಳ್ಳು ಆಶ್ವಾಸನೆಗಳಿಗೆ ಇಲ್ಲಿಯವರೆಗೂ ಸರ್ಕಾರದಿಂದಾಗಲಿ ಅಥವಾ ಮಾಜಿ ಶಾಸಕರಿಂದಾಗಲಿ ಉತ್ತರಗಳು ಲಭ್ಯವಿಲ್ಲ. ಆ ಸಂದರ್ಭದಲ್ಲಿ ಮಸ್ಕಿ ಕ್ಷೇತ್ರಕ್ಕೆ 7000 ಸಾವಿರ ಆಶ್ರಯ ಮನೆಗಳನ್ನು ನಿರ್ಮಿಸಿ ಕೊಡುತ್ತೇವೆ ಎಂದು ಡಂಗೂರ ಸಾರಿ ಹೋಗಿದ್ದರು. ಮೊದಲು ಇಂತಹ ಆಶ್ವಾಸನೆಗಳನ್ನು ಈಡೇರಿಸಿ ಸಾರ್ವಜನಿಕರ ಮುಂದೆ ಚುನಾವಣೆಗೆ ಬರಲಿ ಅದು ಬಿಟ್ಟು 12 ವರ್ಷಗಳವರೆಗೆ ಅಧಿಕಾರ ಅನುಭವಿಸಿದ ನಿಮಗೆ ಕ್ಷೇತ್ರದ ಈ ಎಲ್ಲಾ ಸಮಸ್ಯೆಗಳು ಕಣ್ಣಿಗೆ ಕಾಣಿಸಲಿಲ್ಲವೇ ಮಾನ್ಯ ಮಾಜಿ ಶಾಸಕರೇ ನಿಮ್ಮಿಂದ ಅಧಿಕಾರ ಇರುವಾಗ ಆಗದೆ ಇರುವ ಕೆಲಸ ಕಾರ್ಯಗಳಿಗೆ ಚುನಾವಣೆ ಹೊಸ್ತಿಲಲ್ಲಿ ಈ ರೀತಿ ಪತ್ರ ಬರೆದು ಅನುದಾನ ಕೋರಿರುವುದು ಹಾಸ್ಯಾಸ್ಪದ ಸಂಗತಿ.

 

12 ವರ್ಷ ಅಧಿಕಾರ ಅನುಭವಿಸಿದ ಇವರು ಮತದಾರರ ಮತಗಳೊಂದಿಗೆ ಆಟ ಆಡಿರುವುದು ಬಿಟ್ಟರೆ ಕೇವಲ ಪಕ್ಷಾಂತರಕ್ಕೆ ಮಾತ್ರ ಪ್ರಖ್ಯಾತಿ ಹೊಂದಿದ್ದಾರೆ ವಿನಹ ಯಾವುದೇ ರೀತಿಯ ಮಹತ್ವಕಾಂಕ್ಷಿ ಯೋಜನೆಗಳನ್ನು ತರುವಲ್ಲಿ ವಿಫಲರಾಗಿದ್ದಾರೆ. ಬಹು ವರ್ಷಗಳ ತರುವಾಯ ಪ್ರಬಲ ಮತ್ತು ಸದೃಢ ಎದುರಾಳಿ ಒಬ್ಬರು ಕ್ಷೇತ್ರದಲ್ಲಿ ಸೃಷ್ಟಿಯಾಗಿರುವುದು ಮಾಜಿ ಶಾಸಕರ ನಿದ್ದೆಗೆಡಿಸಿರುವುದರ ಜೊತೆಗೆ ಜಿಗುಪ್ಸೆ ಹುಟ್ಟಿಸಿದೆ.

 

12 ವರ್ಷ ಅನಾವಶ್ಯಕವಾಗಿ ಸುಳ್ಳು ಆಶ್ವಾಸನೆಗಳ ಮೂಲಕ ಮತದಾರರಿಂದ ಮತ ಪಡೆದು ಗೆಲ್ಲುವುದರ ಮೂಲಕ ಕೇವಲ ಹಣದಾಸೆಗೆ ಪ್ರತಿ ಚುನಾವಣೆಗೊಮ್ಮೆ ಪಕ್ಷಾಂತರ ಮಾಡುತ್ತಾ ಕೊನೆಗೆ ತಮ್ಮನ್ನು ತಾವು ಮಾರಿಕೊಳ್ಳುವ ಮುಖೇನ ಕ್ಷೇತ್ರಕ್ಕೆ ಅನ್ಯಾಯವೆಸಗುವ ಕಾರ್ಯದಲ್ಲಿ ನಿರತರಾಗಿದ್ದೀರಿ ಹೊರೆತು ಕ್ಷೇತ್ರದ ಜ್ವಲಂತ ಸಮಸ್ಯೆಗಳ ಕುರಿತು ಯೋಚಿಸಲು ಮಾಜಿ ಶಾಸಕರಿಗೆ ಸಮಯವೇ ಇರಲಿಲ್ಲ. ಎಂದು ಪತ್ರಿಕಾ ಹೇಳಿಕೆ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Be the first to comment

Leave a Reply

Your email address will not be published.


*