ದಿನಾಂಕ 13 /2/2023 ರಂದು ಸೋಮವಾರ ದೇವಲ ಗಾಣಗಾಪುರದಿಂದ 9 ಕಿಲೋಮೀಟರ್ ದೂರದಲ್ಲಿರುವ ಶರಣ ಮುತ್ಯಾ ಅವರ ದಿವ್ಯ ಪುಣ್ಯಕ್ಷೇತ್ರ ಹೊಳೆ ಹಂಚಿನಾಳ ಶ್ರೀ ಶರಣ ಮುತ್ಯಾ ಮಹಾರಾಜರ 28ನೇ ಜಾತ್ರಾ ಮಹೋತ್ಸವ ಹಾಗೂ ಶರಣ ಮುತ್ಯಾ ರವರ ಭವ್ಯ ರಥೋತ್ಸವ ಜರಗಿತು.
ಕಲ್ಬುರ್ಗಿ ಜಿಲ್ಲೆಯ ಎಲ್ಲಾ ಪ್ರದೇಶಗಳಿಂದ ಅಲ್ಲದೆ ಮಹಾರಾಷ್ಟ್ರ ಮುಂಬೈ ಪುಣೆ ಹೈದರಾಬಾದ್ ಮುಂತಾದ ಪ್ರದೇಶಗಳಿಂದ ಆಗಮಿಸಿದ ಭಕ್ತರ ಸಮ್ಮುಖದಲ್ಲಿ ಶ್ರೀ ಶರಣ ಮುತ್ಯಾ ಮಹಾರಾಜರ ರಥೋತ್ಸವದಲ್ಲಿ ಭಾಗವಹಿಸಿದ ಭಕ್ತ ಜನ ಸಾಗರ ಶ್ರೀ ಶರಣರ ದರ್ಶನ ಪಡೆದು ಪುನೀತರಾದರು. ಇದೇ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಶರಣ ಮುತ್ಯಾಅವರ ಸಮಕಾಲಿನರಾದ ಯಾದಗಿರಿ ತಾಲೂಕಿನ ಅಲ್ಲಿಪುರ ಗ್ರಾಮದ ದಿವಂಗತ ಶ್ರೀ ನಾಗಪ್ಪ ಮಾಸ್ತರ ಅವರು ಕಲಬುರ್ಗಿಯಲ್ಲಿ ಹಳ್ಳಿ ಹಳ್ಳಿಗೆ ತಿರುಗಿ ಆಗಿನ ಸಮಕಾಲಿನ ಸಮಾಜದ ಹಿರಿಯ ಬಂದುಗಳಾದ ದಿವಂಗತ ದತ್ತಪ್ಪ ಕಣ್ಣಿ ,ವಕೀಲರಾದ ದಿ. ಮಲ್ಲೇಶಪ್ಪ ಮಿಣಜಗಿ, ದಿವಂಗತ ಲಕ್ಷ್ಮಣ್ ರಾವ್ ಬೆನಕ್ನಳ್ಳಿ ದಿವಂಗತ ಪರಮೇಶ್ವರಪ್ಪ ಕಟ್ಟಿ, ದಿವಂಗತ ಶರಣಪ್ಪ ಮಾಸ್ಟರ್ ಸ್ವಂತ , ದಿವಂಗತ ಮಲ್ಲಪ್ಪ ಸಾವು ಆಲೂರು ಅಲ್ಲದೆ ಇನ್ನೂ ಅನೇಕ ಸಮಾಜ ಬಂಧುಗಳನ್ನು ಸೇರಿ ಸಮಾಜವನ್ನು ಸಂಘಟಿಸುತ್ತಾ ಮುಂದಿನ ದಿನಗಳಲ್ಲಿ ಕೋಲಿ ಸಮಾಜದ ಬಡ ಮಕ್ಕಳಿಗಾಗಿ ಕಲಬುರ್ಗಿಯ ಚೌಡೇಶ್ವರ ಕಾಲೋನಿಯಲ್ಲಿ ಉಚಿತ ಹಾಸ್ಟೆಲ್ ತೆರೆದು ಸಾವಿರಾರು ಬಡ ಮಕ್ಕಳಿಗೆ ದಾರಿ ದೀಪವಾದರು.ಈ ಎಲ್ಲಾ ಸಮಾಜ ಸಂಘಟನೆಯಲ್ಲಿ ದಿವಂಗತ ಶ್ರೀ ನಾಗಪ್ಪ ಮಾಸ್ತರ್ ರವರು ಸರಕಾರಿ ಶಾಲೆಯಲ್ಲಿ ಮಾಸ್ಟರ್ ಆಗಿದ್ದುಕೊಂದು ತಮ್ಮ ಕೈಲಾದ ಮಟ್ಟಗೆ ಸಮಾಜ ಸೇವೆ ಮಾಡುತ್ತಿದ್ದರು.
ಆಗಿನ ಸಮಾಜ ಸೇವೆಯ ಕಂಡ ಅನುಭವಗಳನ್ನು ಆಗಿನ ದಿನಗಳಲ್ಲಿ ಯೇ ಅಂದರೆ 1959ರಲ್ಲಿಯೇ ಹೈದರಾಬಾದ್ ಕರ್ನಾಟಕ ಕೋಲಿ ಸಮಾಜ ಸಂಸ್ಥೆ ಚರಿತ್ರೆ ಎನ್ನುವ ಅಪರೂಪದ ಹೊತ್ತಿಗೆ ಆಗ ಪ್ರಕಟಿಸಿದ್ದರು ಅದರ ಬೆಲೆ ಆಗ ಕೇವಲ ಒಂದು ರೂಪಾಯಿ ಆಗಿತ್ತು .ಅಂತ ಒಂದು ಕಿರು ಹೊತ್ತಿಗೆ ಜೀರ್ಣ ಸ್ಥಿತಿಯಲ್ಲಿ ಒಂದು ಪ್ರತಿ ಸಿಕ್ಕಾಗ ಶ್ರೀ ಶಿವಲಿಂಗಪ್ಪ ಕಿನ್ನೂರರವರು ಶ್ರೀ ಶಿವಶರಣಪ್ಪ ಜಮಾದಾರ್ ಶಿಕ್ಷಕರ ಜೊತೆ ಚರ್ಚಿಸುತ್ತ ಆ ಗ್ರಂಥ ತೋರಿಸಿದರು. ಶ್ರೀ ಶಿವಲಿಂಗಪ್ಪ ಕಿನ್ನೂರ್ ಅವರು ಕೂಡ ದಿವಂಗತ ನಾಗಪ್ಪ ಮಾಸ್ತರರು ನಡೆಸುತ್ತಿದ್ದ ಕೋಲಿ ಸಮಾಜ ಹಾಸ್ಟೆಲ್ ನಲ್ಲಿ ಇದ್ದುಕೊಂಡು ಅಭ್ಯಾಸ ಮಾಡಿರುವುದನ್ನು ನೆನೆಸಿಕೊಳ್ಳುತ್ತಾ ನನ್ನಂತಹ ನೂರಾರು ಜನರಿಗೆ ವಿದ್ಯೆ ಕಲಿಸಿದ ಆ ಹಾಸ್ಟೆಲ್ ಹಾಗೂ ಹಿರಿಯ ಜೀವಿ ದಿವಂಗತ ನಾಗಪ್ಪ ಮಾಸ್ಟರ್ ಹಾಗೂ ಅವರ ಜೊತೆ ಹೆಗಲಿಗೆ ಹೆಗಲು ಕೊಟ್ಟು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಆ ಮಹನೀಯರನ್ನು ನೆನೆಸಿಕೊಳ್ಳುತ್ತಾ ಜೀರ್ಣವಾದ ಆ ಗ್ರಂಥವನ್ನು ಮತ್ತೊಮ್ಮೆ ಮುದ್ರಿಸಿ ಸಮಾಜ ಬಂಧುಗಳಿಗೆ ಓದಲು ನಾನು ಒದಗಿಸುತ್ತೇನೆ ಎಂದು ಆ ಪುಸ್ತಕದ ಎರಡನೇ ಮುದ್ರಣದ ಜವಾಬ್ದಾರಿ ಯನ್ನು ಶಿವಶರಣಪ್ಪ ಜಮಾದಾರ್ ಅವರಿಗೆ ವಹಿಸಿದರು. ಯಾದಗಿರಿಯ ಶ್ರೀ ಸಿಎಂ ಪ ಪಟೇದಾರ್ ಅವರ ಸಲಹೆ ಸಹಕಾರದಿಂದ ಸಮಾಜದಲ್ಲಿರುವ ಅನೇಕ ಹಿರಿಯರ ಮಾರ್ಗದರ್ಶನದಲ್ಲಿ ಈ ಕಿರು ಹೊತ್ತಿಗೆಯಲ್ಲಿ ಉಲ್ಲೇಖಿತ ಪ್ರಮುಖ ಸಮಾಜ ಬಂಧುಗಳ ಕುಟುಂಬಸ್ಥರ ಸಲಹೆ ಮೇರೆಗೆ ಕಿರುಹೊತ್ತಿಗೆಯ 2ನೇ ಮುದ್ರಣ ಕಾರ್ಯ ಕೈಗೊತ್ತಿಕೊಂಡು ಶ್ರೀ ಶಿವಶರಣಪ್ಪ ಜಮಾದಾರ್ ಅವರು ವರ್ಷ ಆರು ತಿಂಗಳಲ್ಲಿ ಓದುಗರ ಕೈಗೆ ಈ ಕಿರು ಹೊತ್ತಿಗೆ ಸಿಗುವ ಹಾಗೆ ಮಾಡಿದರು.
ದಿವಂಗತ ನಾಗಪ್ಪ ಮಾಸ್ಟರ್ ರವರು ಬರೆದ”. “ಹೈದರಾಬಾದ್ ಕರ್ನಾಟಕ ಕೋಲಿಸಮಾಜದ ಸಂಸ್ಥೆಯ ಚರಿತ್ರೆ” ಗ್ರಂಥವನ್ನು ದಿನಾಂಕ 13/02/2023 ರಂದು ದೇವಲ ಗಾಣಗಾಪುರ ಸಮೀಪ ಇರುವ ಜೇವರ್ಗಿ ತಾಲೂಕಿನ ಹೊಳೆ ಹಂಚಿನಾಳ ಗ್ರಾಮದ ಶರಣ ಸಂತ ತ್ರಿಕಾಲ ಜ್ಞಾನ ಪರಮಪೂಜ್ಯ ಶ್ರೀ ಶರಣ ಮುಖ್ಯ ಮಹಾರಾಜರ ಸನ್ನಿಧಾನದಲ್ಲಿ ಅವರ ಜಾತ್ರೆ ಹಾಗೂ ರಥೋತ್ಸವದ ದಿನದಂದು ಶರಣ ಮಹಾರಾಜರ ಮಂದಿರದಲ್ಲಿ ಈ ಕಿರು ಪುಸ್ತಕ ಬಿಡುಗಡೆ ಮಾಡಲಾಯಿತು. ಈ ಕಿರು ಹೊತ್ತಿಗೆ ಬಿಡುಗಡೆ ಸಮಾರಂಭದ ಸಾನಿಧ್ಯವನ್ನು ಮಂದಿರದ ಹಿರಿಯ ಅರ್ಚಕರಾದ ಶ್ರೀ ಚಂದ್ರಕಾಂತ್ ಮುತ್ಯಾರವರು ವಹಿಸಿಕೊಂಡಿದ್ದರು. ಶ್ರೀ ಶಿವಲಿಂಗಪ್ಪ ಕೆನ್ನೂರ್ ಅವರು ಸಭೆಯ ಅಧ್ಯಕ್ಷತೆ ವಹಿಸಿಕೊಂಡು ಪುಸ್ತಕದ ಬಗ್ಗೆ ಮಾತನಾಡಿದರು. ವೇದಿಕೆಯ ಮೇಲೆ ಶರಣು ಮುತ್ಯ ಮಹಾರಾಜರ ಜಾತ್ರಾ ಸಮಿತಿಯ ಪ್ರಮುಖರಾದ ದೇವಲ ಗಾಣಗಾಪುರದ ಶ್ರೀ ಭಗವಂತಪ್ಪ ಹೇರೂರು, ಗುರುಶಾಂತಪ್ಪ ಮುದುಕನ್, ಮುಂಬೈನ ಮುಂಬೈನ ಜೆಸ್ಕಾಂನ ಅಧಿಕಾರಿಗಳಾದ ಶ್ರೀ ಸುನಿಲ್ ಕಿನ್ನೂರ್, ಮಲಕಣ್ಣ ಕೈನೂರ್, ಶ್ರೀ ಶಿವಶರಣಪ್ಪ ಜಮಾದಾರ್ ಹಾ ವನೂರ್, ಡಾ. ಸರ್ದಾರ್ ರಾಯಪ್ಪ, ಶ್ರೀ ಪುಂಡಲಿಕ ಬಿರಾದಾರ್, ಶ್ರೀ ಅಶೋಕ್ ಕಂಕಿ, ಭೀಮರಾಯ ತಳವಾರ್ ಬೇಲೂರ್, ಶಿವು ಪಟೇದ ನೆಲೋಗಿ, ರಾಜಶೇಖರ್ ಸೊಪ್ಪಿ, ಅಮ್ಮಣ್ಣ ಸೋಪ್ಪಿ, ಹಾಗೂ ಅನೇಕ ಗಣ್ಯರು ವೇದಿಕೆ ಮೇಲೆ ಉಪಸ್ಥಿತರಿದ್ದರು. ದಿವಂಗತ ಶ್ರೀ ನಾಗಪ್ಪ ಮಾಸ್ತರ ಹಾಗೂ ಸಮಾಜದ ಸಂಘಟನೆ ಬಗ್ಗೆ ಶ್ರೀ ಶಿವಲಿಂಗಪ್ಪ ಕಿನ್ನೂರ್ ರವರು ಮಾತನಾಡಿದರು. ಜಿಲ್ಲಾ ಕೋಲಿ ಸಾಂಸ್ಕೃತಿಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಶಿವಶರಣಪ್ಪ ಜಮಾದಾರ್ ಅವರು ಪುಸ್ತಕದ ಬಗ್ಗೆ ಮಾತನಾಡಿದರು. ಶ್ರೀ ಬಿಎಂ ರಾವೂರ್ ರವರು ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿದರು. ಡಾಕ್ಟರ್ ಸರ್ದಾರ್ ರಾಯಪ್ಪ ಸೊಪ್ಪಿ ಅವರು ಸಭೆಯಲ್ಲಿರುವ ಎಲ್ಲರನ್ನೂ ಅಭಿನಂದಿಸಿ ವಂದನಾರ್ಪಣೆ ಮಾಡಿದರು.
Be the first to comment