ಅಪರಿಚಿತರು ಮೋಸತನದಿಂದ ಒಂದೂವರೆ ತೊಲೆ ಬಂಗಾರ ಕಳ್ಳತನ : ಮಸ್ಕಿ ಠಾಣೆಯಲ್ಲಿ ಪ್ರಕರಣ ದಾಖಲು 

ಮಸ್ಕಿ, ಫೆಬ್ರುವರಿ 13 : ಪಟ್ಟಣದಲ್ಲಿ ತಮ್ಮ ಕೆಲಸವನ್ನು ಮುಗಿಸಿಕೊಂಡು ತಮ್ಮ ಸಂಬಂಧಿ ಮದುವೆಗೆಂದು ಮಸ್ಕಿ ಯಿಂದ ಮುದಬಾಳ ಗ್ರಾಮಕ್ಕೆ ತೆರಳುವ ಸಂದರ್ಭ ಮಾರ್ಗ ಮಧ್ಯೆ ಅಪರಿಚಿತ ವ್ಯಕ್ತಿಗಳು ಬಸನಗೌಡ ತಂದೆ ದೊಡ್ಡನ ಗೌಡ ರಾಂಪೂರ ಎಂಬುವವರ ಒಂದೂವರೆ ತೊಲೆ ಬಂಗಾರ ಮೋಸದಿಂದ ದೋಚಿಕೊಂಡು ಹೋದ ಘಟನೆ ಮಸ್ಕಿ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

 

 

ಶನಿವಾರದಂದು (11-02-2023) ಬಸನಗೌಡ ತಂದೆ ದೊಡ್ಡನ ಗೌಡ ರಾಂಪೂರ ಎಂಬ 58 ವರ್ಷದ ವ್ಯಕ್ತಿಯು ಮಸ್ಕಿ ತಾಲೂಕಿನ ಮುದಬಾಳ ಗ್ರಾಮದಲ್ಲಿ ಇದ್ದ ತಮ್ಮ ಸಂಬಂಧಿಕರ ಮದುವೆಗೆಂದು ಮಸ್ಕಿ ಯಿಂದ ಮುದಬಾಳ ಕಡೇ ತೆರಳುವ ಮಾರ್ಗ ಮಧ್ಯೆ ಸಮಯ 3:30 ರಿಂದ 3:45 ರ ಮದ್ಯಾಹ್ನದ ಸಮಯದಲ್ಲಿ ಜಾಣತನದಿಂದನೋ.. ಮೋಸತನದಿಂದನೋ. ಎಂಬಂತೆ ಅಪರಿಚಿತ ವ್ಯಕ್ತಿ ಇಬ್ಬರು ಬೈಕ್ ಮೇಲೆ ಬಂದು ನಿಲ್ಲಿಸಿ. ಬಸನಗೌಡ ರನ್ನು ನೋಡಿ ಯಜಮಾನರೇ

ನೀವು ಈ ರೀತಿಯಲ್ಲಿ ಕೊರಳಲ್ಲಿ ಬಂಗಾರದ ಚೈನ ಕೈಯಲ್ಲಿ ಉಂಗುರು ಹಾಕಿಕೊಂಡಿರಿಯಲ್ಲ, ಕಾಲ ಸರಿ ಇಲ್ಲಾ. ರಸ್ತೆಯ ಮೇಲೆ ನೀವು ಓಡಾಡಬಾರದು ಅವುಗಳನ್ನು ಬಿಚ್ಚಿ ಜೇಬಲ್ಲಿ ಹಾಕಿಕೊಳ್ಳಿ ಅಂತ ಹೇಳಿದಾಗ ಕೈಯಲ್ಲಿದ್ದ ಎರಡು ಉಂಗುರಗಳನ್ನು ಬಿಚ್ಚಿ ಅಂಗಿ ಜೇಬಿನಲ್ಲಿ ಹಾಕಿಕೊಂಡು ಕೊರಳಲ್ಲಿದ್ದ ಚೇನನ್ನು ಬಿಚ್ಚಲು ಹೋದಾಗ ಕನ್ನಡಕಕ್ಕೆ ತೊಡುರು ಬಿದ್ದಾಗ ಕಳ್ಳರು ಬೈಕ್ ಇಳಿದು ಬಂದು ಯಜಮಾನ್ರೆ ತಡೀರಿ ಅವಸರ ಮಾಡಬೇಡಿ ನಾವು ಬಿಚ್ಚುತ್ತೇವೆ ಅಂತ ಕೊರಳಲ್ಲಿನ ಚೈನನ್ನು ಬಿಚ್ಚಿ ಅವರೇ ಜೇಬಿನಲ್ಲಿ ಹಾಕಿದಂತೆ ನೆಪ ಮಾಡಿ ಮೋಸ ತನದಿಂದ ಒಂದುವರೆ ತೊಲೆಯ ಬಂಗಾರದ ಚೈನು ಅಂದಾಜು 75,000 ರೂ. ಬೆಲೆ ಬಾಳುವುದನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಕಳ್ಳರ ಪತ್ತೆಗೆ ಹಾಗೂ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಮಸ್ಕಿ ಪೋಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ ಎಂದು ಮಸ್ಕಿ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಿದ್ದರಾಮ ಬಿದರಾಣಿ ರವರು ಪತ್ರಿಕೆಗೆ ತಿಳಿಸಿದ್ದಾರೆ.

 

Be the first to comment

Leave a Reply

Your email address will not be published.


*