ನಾಳೆ ಶ್ರೀ ವಿಶ್ವಾರಾಧ್ಯರ ಪುರಾಣ ಪ್ರಾರಂಭ:ಫೆ.25ಕ್ಕೆ ರಥೋತ್ಸವ

ಯಾದಗಿರಿ: ಫೆ.1:ತಾಲೂಕಿನ ಸುಕ್ಷೇತ್ರ ಅಬ್ಬೆತುಮಕೂರಿನ ಶ್ರೀ ವಿಶ್ವಾರಾಧ್ಯರ ರಥೋತ್ಸವವು ಫೆ. 25ರಂದು ನಡೆಯಲಿದ್ದು ಮಠದ ಪೀಠಾಧಿಪತಿ ಡಾ. ಗಂಗಾಧರ ಮಹಾಸ್ವಾಮಿಗಳ ನೇತೃತ್ವದಲ್ಲಿ ಜಾತ್ರಾಮಹೋತ್ಸವದ ಸಿದ್ಧತೆಗಳು ಭರದಿಂದ ಸಾಗಿವೆ. ಎಂದು ಡಾ. ಸುಭಾಶ್ಚಂದ್ರ ಕೌಲಗಿ ತಿಳಿಸಿದ್ದಾರೆ.

 

ಫೆ.14ರಂದು ಮಂಗಳವಾರ ಸಂಜೆ ಶ್ರೀ ಈ ವಿಶ್ವಾರಾಧ್ಯರ ಪುರಾಣ ಪ್ರಾರಂಭೋತ್ಸವ ಮಾಡುವುದರ ಮೂಲಕ ಜಾತ್ರಾಮಹೋತ್ಸವಕ್ಕೆ ಚಾಲನೆ ನೀಡಲಾಗುವುದು. ಮಲ್ಲಿಕಾರ್ಜುನ ಶಾಸ್ತ್ರಿ ಐನಾಪೂರವರ ಸಾಹಿತ್ಯ

 

ಸಂಗೀತದೊಂದಿಗೆ ವಿಶ್ವಾ- ರಾಧ್ಯರ ಪುರಾಣವನ್ನು 11 ದಿನಗಳ ಕಾಲ ನಡೆಸಿಕೊಂಡು ಹೋಗಲಾಗುವದು.ಶ್ರೀ ಮಠದ ಜಾತ್ರೆಗಾಗಿ ಬೃಹತ ಪೆಂಡಾಲ ಹಾಕುವ ಕಾರ್ಯವನ್ನು ಆರಂಭಿಸಲಾಗುತ್ತಿದೆ. ಶ್ರೀ ಮಠದ ಭಕ್ತರು ಜಾತ್ರೆಯ ಪೂರ್ವಸಿದ್ಧತೆಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.

 

ಪ್ರತಿ ದಿನ ರಾತ್ರಿ 8 ಗಂಟೆಗೆ ಶ್ರೀ ವಿಶ್ವಾರಾಧ್ಯರ ಪುರಾಣ ಪ್ರವಚನನಿರಂತರ11ದಿನಗಳ ಕಾಲ ನಡೆದುಕೊಂಡು ಹೋಗುವುದು. ಫೆ.18ರಂದು ಮಹಾಶಿವರಾತ್ರಿ ಹಾಗೂ ಫೆ.20 ರಂದು ಮಹಾಶಿವರಾತ್ರಿ ಅಮವಾಸೆಯ ಕಾರ್ಯಕ್ರಮಗಳು ನಡೆಯಲಿವೆ.

 

ಫೆ. 24 ರಂದು ಪುರಾಣ ಮಹಾಮಂಗಲಗೊಳ್ಳುವುದು. ಫೆ.25ರ ಸಂಜೆ 6.30 ಗಂಟೆಗೆ ಶ್ರೀ ವಿಶ್ವಾರಾಧ್ಯರ ಭವ್ಯವಾದ ರಥೋತ್ಸವ ಸಡಗರದಿಂದ ನಡೆಯಲಿದೆ. ನಂತರ ರಾತ್ರಿ 8ಗಂಟೆಗೆ ಮಾನವಧರ್ಮ ಸಮಾವೇಶ ಜರುಗಲಿದೆ. ಈ ಸಮಾವೇಶದಲ್ಲಿ ನಾಡಿನ ಹರಗುರುಚರ ಮೂರ್ತಿಗಳು, ರಾಜಕೀಯ ಮುತ್ಸದ್ದಿಗಳು,ಕವಿ ಸಾಹಿತಿಗಳು ಭಾಗವಹಿಸುವರು. ಖ್ಯಾತ ಚಲನಚಿತ್ರ ನಟ- ನಟಿಯರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*