ವಲಯ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮ ಸಡಗರ ಸಂಭ್ರಮದಿಂದ ಜರುಗಿತು

ಮಸ್ಕಿ, ಫೆಬ್ರವರಿ 03 : ತಾಲೂಕಿನ ಮೆದಿಕಿನಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಯರಮರಸ್ ರಾಯಚೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಲಿಂಗಸ್ಗೂರು ಇವರ ಸಂಯೋಜನೆಯಲ್ಲಿ ಮೆದಿಕಿನಾಳ ವಲಯ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಕಲಿಕಾ ಹಬ್ಬ ಕಾರ್ಯಕ್ರಮ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

 

 

ಕರ್ನಾಟಕ ಸರಕಾರದ ಆದೇಶದಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಯರಮರಸ್ ರಾಯಚೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಲಿಂಗಸ್ಗೂರು ಇವರ ಸಂಯೋಜನೆಯಲ್ಲಿ ಮೆದಿಕಿನಾಳ ವಲಯ ಮಟ್ಟದ ನೇತೃತ್ವದಲ್ಲಿ ಕಲಿಕಾ ಹಬ್ಬ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಮೆದಿಕಿನಾಳ ವಲಯ ಮಟ್ಟದ ಸಕಲ ವಿದ್ಯಾರ್ಥಿಗಳು ವೇಷಭೂಷಣದಿಂದ ನೋಡುಗರ ಕಣ್ಮನ ಸೆಳೆಯುತ್ತಾ ಕುಣಿದು ಕುಪ್ಪಳಿಸುತ್ತಾ ಅಂಬೇಡ್ಕರ್ ವೃತ್ತದಿಂದ ಭುವನೇಶ್ವರಿ ಭಾವಚಿತ್ರದೊಂದಿಗೆ ಮೆರವಣಿಗೆ ಮೂಲಕ ಹಳ್ಳ,ಬಸವೇಶ್ವರ ದೇವಸ್ಥಾನ,ಗ್ರಾಮ ಪಂಚಾಯಿತಿ ಕಟ್ಟೆ, ಅರಳಿ ಕಟ್ಟೆ, ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಆಸ್ಪತ್ರೆ ಮಾರ್ಗವಾಗಿ ಕೊನೆಗೆ ಸರಕಾರ ಪ್ರೌಢ ಶಾಲಾ ಆವರಣವನ್ನು ತಲುಪಿದರು.

 

ಕಾರ್ಯಕ್ರಮದ ಮೊದಲಿಗೆ ಕಲಿಸು ಗುರುವೇ ಕಲಿಸು ಎಂಬ ಪ್ರಾರ್ಥನಾ ಗೀತೆ, GHP ಬೈಲ ಗುಡ್ಡ ಶಾಲಾ ವಿದ್ಯಾರ್ಥಿಗಳಿಂದ ಸ್ವಾಗತ ಗೀತೆಯ ಮೂಲಕ ವೇದಿಕೆಯ ಮೇಲೆ ಆಸೀನರಾಗಿದ್ದ ಗಣ್ಯರನ್ನು ಸ್ವಾಗತ ಕೋರಲಾಯಿತು.

 

ಪ್ರಾಸ್ತಾವಿಕ ಭಾಷಣ ಬಸವರಾಜ್ ಮುಖ್ಯ ಗುರುಗಳು ಸರಕಾರಿ ಪ್ರೌಢಶಾಲೆ ಮೆದಿಕಿನಾಳ ಶಾಲೆಯಲ್ಲಿ ಗಣಿತ,ವಿಜ್ಞಾನ, ವೃತ್ತಿ ಶಿಕ್ಷಣ,ಹಾಡು ಮತ್ತು ಹಾಡು, ನಾಲ್ಕು ಕೋಣೆ ಮೀಸಲು ,13 ಶಾಲೆಯ 130 ವಿದ್ಯಾರ್ಥಿಗಳು ಹಾಗೂ ಸರ್ವ ಮೆದಿಕಿನಾಳ ವಲಯದ ಮುಖಂಡರು ಭಾಗಿಯಾಗುವರು ಎಂದು ಹೇಳಿದರು. ಪ್ರಾಸ್ತಾವಿಕ ಭಾಷಣದಂತೆ ಭಾಗಿಯಾಗಿದ್ದರು.

 

ನಂತರ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು ಶಭನಾ ಬೇಗಂ ರವರು ಕಲಿಕಾ ಹಬ್ಬದ ಹಾಡು ಹಾಡಿದರು.ಹುಸೇನ್ ಮಾಡಗಿರಿ ರವರು ಒಳಿತು ಮಾಡು ಮನುಷ್ಯ ಎಂಬ ಹಾಡನ್ನು ತುಂಬಾ ಸೊಗಸಾಗಿ ಹಾಡಿದರು.

ಇಂದಿನ ಕಾರ್ಯಕ್ರಮಕ್ಕೆ ಕಾರಣೀಭೂತರಾದ ಕಿರಿಯ ಪ್ರಾಥಮಿಕ ಶಾಲೆ,ಹಿರಿಯ ಪ್ರಾಥಮಿಕ ಶಾಲೆ, ಪ್ರೌಢ ಶಾಲೆಯ ಒಬ್ಬರಂತೆ ಸನ್ಮಾನಿಸಲಾಯಿತು.

 

ಕಾರ್ಯಕ್ರಮದ ಕುರಿತು ಮಾತನಾಡುತ್ತಾನಿಜವಾದ ವಿದ್ಯೆ ಯಾರಲ್ಲಿ ಇರುತ್ತದೆಯೋ ಅಲ್ಲಿ ನಿಜವಾದ ವಿದ್ಯೆ ಇರುತ್ತೇ. ಹಿಂದೆ ಗುರು ಇರಬೇಕು ಮುಂದೆ ಗುರಿ ಇರಬೇಕು ಎಂದು ರಾಜಣ್ಣ ಪರಡ್ಡಿ ಹೇಳಿದರು.

 

ಕಾರ್ಯಕ್ರಮದ ಕುರಿತು ಉದಯ ಕುಮಾರ್ ನಿಲಯ ಪಾಲಕರು, ಎ.ಎಲ್ ಪಾಟೀಲ್ ,ಭೀಮ ಶಂಕರ್ BRP ಮಸ್ಕಿ ವಲಯ ಸೇರಿದಂತೆ ಇನ್ನಿತರರು ಮಾತನಾಡಿದರು.

ನಂತರ ಕಾರ್ಯಕ್ರಮಕ್ಕೆ ದೇಣಿಗೆ ನೀಡಿ ಸಹಕರಿಸಿದ ಗಣ್ಯರನ್ನು ಮತ್ತು ಮಾದ್ಯಮ ಮಿತ್ರರನ್ನು ಸನ್ಮಾನಿಸಿದರು.

 

ಕೊನೆಗೆ ಅಧ್ಯಕ್ಷೀಯ ಭಾಷಣವನ್ನು ಯಲ್ಲಪ್ಪ ಕೋಸಗಿ ಎಸ್ ಡಿ ಎಂ ಸಿ ಅಧ್ಯಕ್ಷರು ಪ್ರೌಢಶಾಲೆ ಮೆದಿಕಿನಾಳ ರವರು ತುಂಬಾ ಅಚ್ಚುಕಟ್ಟಾಗಿ ನೆರವೇರಿಸಿದರು. ಕಾರ್ಯಕ್ರಮವು ಇಂದು ಮತ್ತು ನಾಳೆ ಎರಡು ದಿನವೂ ಜರುಗುವುದು ಎಂದು ಕಲಿಕಾ ಹಬ್ಬ ಕಾರ್ಯಕ್ರಮ ಆಯೋಜನಾ ಮೂಲಗಳು ತಿಳಿಸಿವೆ.ಕೊಟ್ರೇಶ್ ಶಿಕ್ಷಕರು ನಿರೂಪಿಸಿದರೆ, ಶ್ರೀಕಾಂತಮ್ಮ ಶಿಕ್ಷಕಿ ವಂದಿಸಿದರು.

 

 

 

ಇದೇ ಸಂದರ್ಭದಲ್ಲಿಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯಲ್ಲಪ್ಪ ಕೋಸಗಿ, ಉದ್ಘಾಟಕರಾದ ಮಲ್ಲಪ್ಪ ಗುರಿಕಾರ ಗ್ರಾಮ ಪಂಚಾಯಿತಿ ಸದಸ್ಯರು, ಮುಖ್ಯ ಅಥಿತಿಗಳಾದ ರಾಜಣ್ಣ ಪರಡ್ಡಿ,ಈರಪ್ಪ ಗುರಿಕಾರ, ಎ.ಎಲ್ ಪಾಟೀಲ,ಮಲ್ಲಪ್ಪ ಚಲುವಾದಿ, ಉದಯ ಕುಮಾರ್ BCM ವಸತಿ ನಿಲಯ ಪಾಲಕರು, CRP ರಾಜು,ದೇವಪ್ಪ ಪ್ರಭಾರಿ ಮುಖ್ಯ ಗುರುಗಳು,ಅಮರೇಶ್ ಗ್ರಾ. ಪಂ ಕಾರ್ಯದರ್ಶಿ ಮೆದಿಕಿನಾಳ, ಡಾಕ್ಟರ ಅಭಿಲಾಶ್ PHC ಮೆದಿಕಿನಾಳ, ಶಭನಾ ಬೇಗಂ ಶಿಕ್ಷಕರ ಸಂಘದ ನಿರ್ದೇಶಕರು, ಗುಂಡೂರಾವ್ ದೇಸಾಯಿ, ರವಿರಾಜ್ ಮುಖ್ಯ ಗುರುಗಳು,ಹಾಗೂ ನೌಕರರ ಸಂಘದ ಅಧ್ಯಕ್ಷರುಗಳು, ಮೆದಿಕಿನಾಳ ವಲಯ ಮಟ್ಟದ ಶಿಕ್ಷಕ – ಶಿಕ್ಷಕಿಯರು ಸೇರಿದಂತೆ ಗ್ರಾಮದ ಪ್ರಮುಖ ಮುಖಂಡರು ಹಾಜರಿದ್ದರು.

 

 

 

.

Be the first to comment

Leave a Reply

Your email address will not be published.


*