ಕೆಲೂರ: ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ಯಶಸ್ವಿ:ಜನರ ಸಮಸ್ಯೆಗಳಿಗೆ ಸ್ಪಂಧಿಸಿದ ತಾಲೂಕಾ ಆಡಳಿತ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಜಿಲ್ಲಾಡಳಿತವನ್ನು ಹಳ್ಳಿ ಜನರ ಮನೆ ಬಾಗಿಲಿಗೆ ಕೊಂಡೊಯ್ಯುವ ‘ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆ’ ಕಾರ್ಯಕ್ರಮ ಪ್ರತಿ ತಿಂಗಳ ತಿಂಗಳ ಮೂರನೇ ಶನಿವಾರ ಜಿಲ್ಲಾಧಿಕಾರಿಗಳ ತಂಡ ಗ್ರಾಮಗಳಿಗೆ ಭೇಟಿ ನೀಡಿ ಕುಂದು ಕೊರತೆ ಆಲಿಸಿ ಅಲ್ಲಿಯೇ ಪರಿಹಾರ ಸೂಚಿಸುವುದು ಈ ಕಾರ್ಯಕ್ರಮದ ವೈಶಿಷ್ಟ್ಯವಾಗಿದೆ.

ಬಾಗಲಕೋಟೆ:ಇಲಕಲ್ಲ ತಾಲೂಕಿನ ಕೆಲೂರ ಗ್ರಾಮದ ಶ್ರೀ ವಿಜಯಮಹಾಂತೇಶ ಮಂದಿರದ ಸಭಾ ಭವನದಲ್ಲಿ ಶನಿವಾರ ಜಿಲ್ಲಾಧಿಕಾರಿಗಳ ನಡೆ, ಹಳ್ಳಿಯ ಕಡೆ ಕಾರ್ಯಕ್ರಮವು ಜರುಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜನಪ್ರೀಯ ಶಾಸಕರಾದ ದೊಡ್ಡನಗೌಡ.ಜಿ. ಪಾಟೀಲರು ನೋಟು ಅಮಾನ್ಯ,ಜಿಎಸ್‌ಟಿ ಜಾರಿ,ಮೇಕ್‌ ಇನ್‌ ಇಂಡಿಯಾ,ಡಿಜಿಟಲ್‌ ಇಂಡಿಯಾ,ಜನಧನದ ಹೊಸ ಹಾದಿ,ಉಜ್ವಲ ಯೋಜನೆ,ಆರೋಗ್ಯ ಯೋಜನೆ,ಮನ್‌ ಕಿ ಬಾತ್‌,ಸ್ವಚ್ಛ ಭಾರತ ಮಿಷನ್‌,ರಸ್ತೆ ವಿದ್ಯುತ್‌ ಸಂಪರ್ಕ,ಮುದ್ರಾ ಯೋಜನೆ,ಜಲ ಜೀವನ ಮಿಷನ್ ಹೀಗೆ ಹಲವಾರು ಯೋಜನೆಗಳನ್ನು ಜಾರಿ ಮಾಡಿದ ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿಯವರ ಸಾಧನೆಯನ್ನು ಸ್ಮರಿಸಲೆಬೇಕಾಗಿದೆ ಎಂದರು.ಜನರ ಹಾಗೂ ಗ್ರಾಮದ ಹಲವಾರು ಸಮಸ್ಯೆಗಳಿಗೆ ಒಳ್ಳೆಯ ಸ್ಪಂದನೆ ನೀಡಿದರು.

ಕಾರ್ಯಕ್ರಮಕ್ಕೆ ತಾಲೂಕಿನ ದಂಡಾಧಿಕಾರಿ ಬಸವರಾಜ ಮೆಳವಂಕಿ ಪ್ರಾಸ್ಥಾವಿಕವಾಗಿ ಮಾತನಾಡಿ ಗ್ರಾಮೀಣ ಪ್ರದೇಶದ ಜನರು ಸರ್ಕಾರದ ಯೋಜನೆಗಳನ್ನು ಪಡೆಯಲು ಕಚೇರಿ- ಕಚೇರಿ ಅಲೆಯುವುದರನ್ನ ತಪ್ಪಿಸಲು ಸರ್ಕಾರ ಈ ಕಾರ್ಯಕ್ರಮ ಆಯೋಜನೆ ಮಾಡಿದೆ. ಗ್ರಾಮಗಳಲ್ಲಿ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಪಡೆದುಕೊಳ್ಳಲು ಸರ್ಕಾರಿ ಕಚೇರಿಗೆ ಅಲೆದಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿರುವ ಜಿಲ್ಲಾಧಿಕಾರಿಗಳ ನಡೆ, ಹಳ್ಳಿಯ ಕಡೆ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಜನರಿಗೆ ಕರೆ ನೀಡಿದ್ರು.

ತಾಲ್ಲೂಕು ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳ ಉಪಸ್ಥಿತಿಯಲ್ಲಿ ಹಲವು ಯೋಜನೆಗಳ ಬಗ್ಗೆ ಮತ್ತು ಇಲಾಖೆಗಳಿಂದ ದೊರೆಯುವ ಸವಲತ್ತುಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.

ಕೆಲೂರ ಗ್ರಾಮದಲ್ಲಿ ಮುಖ್ಯವಾಗಿ ಹೊಲದ ರಸ್ತೆ,ನಿರಂತರವಾಗಿ ಹರಿಯುತ್ತಿರುವ ಹೊಂಡದ ನೀರಿನ ಸಮಸ್ಯೆ,ಆಸ್ಪತ್ರೆ ಇಲ್ಲದಿರುವುದು,ಶಿಕ್ಷಕರ ಕೊರತೆ,ಮನೆಯ ಮೇಲಿನ ವಿದ್ಯುತ್ ತಂತಿ ಸ್ಥಳಾಂತರ,ನಿರಂತರ ವಿದ್ಯುತ್ ಕಡಿತ ಹೀಗೆ ಹತ್ತು ಹಲವಾರು ಸಮಸ್ಯೆಗಳ ಪರಿಹಾರಕ್ಕಾಗಿ ಸಾರ್ವಜನಿಕರು ಅರ್ಜಿಸಲ್ಲಿಸಿದ್ದರು.

ಸಲ್ಲಿಸ್ಥಳದಲ್ಲೇ ಅರ್ಜಿಗಳ ಇತ್ಯರ್ಥ:
ಜಿಲ್ಲಾಧಿಕಾರಿ ‌ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಕೆಲೂರ ಗ್ರಾಮಸ್ಥರು ಹಾಗೂ ವಿವಿಧ ಗ್ರಾಮಗಳಿಂದ ಬಂದ ಗ್ರಾಮಸ್ಥರು ಅಹವಾಲು ಅರ್ಜಿಗಳನ್ನು ಸಲ್ಲಿಕೆ ‌ಮಾಡಿದ್ರು.ಕಂದಾಯ,ಗ್ರಾಮ ಪಂಚಾಯತ್, ಆಹಾರ,ಲೋಕೋಪಯೋಗಿ,ಭೂ ಮಾಪನ,ಕೃಷಿ, ತೋಟಗಾರಿಕೆ,ಶಿಕ್ಷಣ,ಪಶುಸಂಗೋಪನೆ,ಹೆಸ್ಕಾಂ ಸೇರಿದಂತೆ ಹಲವು ಇಲಾಖೆಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಯಾದ ಪಿ.ಬಿ.ಮುಳ್ಳೂರ ಓದಿಹೇಳಿದರು.

ಶಾಸಕರು ಸೇರಿದಂತೆ ವಿವಿಧ ಇಲಾಖೆಗಳಿಂದ ಆಗಮಿಸಿದ ಅಧಿಕಾರಿಗಳು ಸ್ಥಳದಲ್ಲೇ ಅರ್ಜಿಗಳನ್ನು ಇತ್ಯರ್ಥ ಪಡಿಸಲಾಗಿದ್ದು,ಉಳಿದ ಅರ್ಜಿಗಳನ್ನು ಸಂಬಂಧಿಸಿದ ಇಲಾಖೆಗಳಿಗೆ ಕಳಿಸಿಲಾಗಿದೆ ಎಂದು ತಹಸೀಲ್ದಾರರು ಮಾಹಿತಿ ‌ನೀಡಿದ್ರು.

ಕೆಲೂರ ಗ್ರಾಮ ಸೇರಿದಂತೆ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಟ್ಟ ಗ್ರಾಮಗಳಾದ ತಳ್ಳಿಕೇರಿ, ಕುಣಿಬೆಂಚಿ ಹಳ್ಳಿಗಳ ಜನರು ನಾನಾ ಅಹವಾಲುಗಳನ್ನು ಹೊತ್ತು ಕೆಲೂರ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಆಗಮಿಸಿ ತಹಶಿಲ್ದಾರರ ಎದುರು ತಮ್ಮೂರಿನ ಸಮಸ್ಯೆಗಳನ್ನು ಒಂದೊಂದಾಗಿ ಬಿಚ್ಚಿಟ್ಟರು.

ಗ್ರಾಮ ಪಂಚಾಯತ ಅಧ್ಯಕ್ಷರಾದ ಮಹಾಲಿಂಗೇಶ ನಾಡಗೌಡರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆಯ ನರೆಗಾ ಯೋಜನೆಯ ಸಹಾಯಕ ನಿರ್ದೇಶಕರು ಜಿ.ಎಸ್. ಶಿರಗುಪ್ಪಿ,ಡಾ.ರಾಘವೇಂದ್ರ ಸವದತ್ತಿ ಪ್ರಾಥಮಿಕ ಆರೋಗ್ಯ ಕೇಂದ್ರ ಐಹೊಳೆ,ಗ್ರಾಮದ ಹಿರಿಯರಾದ ಅಪ್ಪಾಸಾಹೇಬ ನಾಡಗೌಡರ,ಡಾ.ವಿಶ್ವನಾಥ ಹಿರೆಮಠ,ನಿವೃತ್ತ ಶಿಕ್ಷಕರಾದ ಎಸ್.ಎಮ್.ಬೆಲ್ಲದ, ನಿವೃತ್ತ ಪಿಡಿಓ ಶಂಕ್ರಪ್ಪ ಮಾದನಶೆಟ್ಟಿ,ಮಾಜಿ ಸೈನಿಕರಾದ ರಾಮನಗೌಡ ನಾಡಗೌಡರ,ಗ್ರಾಮ ಪಂಚಾಯತ್ ಸದಸ್ಯರಾದ ಹನಮಂತ ವಡ್ಡರ, ನೀಲಪ್ಪ ಅಂಗಡಿ,ಪಿಕೆಪಿಎಸ್ ಸದಸ್ಯರಾದ ಮೈಲಾರಪ್ಪ ಆಸಂಗಿ,ವಜಿರಪ್ಪ ಪೂಜಾರ,ಮಾಜಿ ಗ್ರಾಮ ಪಂಚಾಯತ ಸದಸ್ಯರಾದ ಸಂಗಣ್ಣ ನಾಡಗೌಡರ,ಮುತ್ತಣ್ಣ ನಾಡಗೌಡರ,ವಿರೇಶ ಕಮತರ,ಬಾಬು ಸಿಮಿಕೇರಿ,ಬಸವರಾಜ ಮಾದರ,ಕರಿಯಪ್ಪ ತೋಟಗೇರ ಕೃಷಿ ಅಧಿಕಾರಿ ಜಾಧವ,ರೇಷ್ಮೆ ಇಲಾಖೆ ಅಧಿಕಾರಿ ಎಸ್.ಹೆಚ್. ಮುಕ್ಕಣ್ಣವರ,ಹೆಸ್ಕಾಂ ಅಧಿಕಾರಿ, ಲೋಕೋಪಯೋಗಿ ಇಲಾಖೆಯ ಎಇಇ ರಮೇಶ ಪಾಟೀಲ್,ಪಶು ವೈಧ್ಯಾಧಿಕಾರಿ ಎಸ್.ಪಿ.ಬೇನಾಳ, ವಲಯ ಅರಣ್ಯಾಧಿಕಾರಿ,ಗ್ರಾಮ ಲೆಕ್ಕಾಧಿಕಾರಿ ಪಾರ್ವತಿಮಠ,ಅಮಗನವಾಡಿ ಮೇಲ್ವಿಚಾರಕರು ಮತ್ತು ಇತರೆ ಇಲಾಖೆಯ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*