ನಾಲತವಾಡ. ನಾಗಪಂಚಮಿ ಹಾಲೆರೆಯುವ ಒಂದು ದಿನ ಮುಂಚೆಯೇ ಸೋಮವಾರ ಸಂಜೆ ಮಾಜಿ ಸಚಿವೆ ದಿ.ಜೆ.ಎಸ್.ದೇಶಮುಖ ಸಂಭಂದಿ ಶಂಕರರಾವ್ ದೇಶಮುಖ ಅವರ ಮನೆಯಲ್ಲಿ ಕರಿ ನಾಗರಹಾವು ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ.
ಆ.೨ ಮಂಗಳವಾರ ನಾಗನಿಗೆ ಹಾಲೆರುವ ಸಿದ್ದತೆಯನ್ನು ಸಾಮಾನ್ಯವಾಗಿ ಎಲ್ಲರೂ ಮಾಡಿಕೊಳ್ಳುತ್ತಿರುವ ಸಂದರ್ಭ, ಆದರೆ ಮನೆಯಲ್ಲಿ ನಿಜವಾಗಿಯೂ ನಾಗರಹಾವು ಕಾಣಿಸಿಕೊಂಡಿದ್ದು ನಾಗಪಂಚಮಿಗೆ ಮತ್ತಷ್ಟು ಅರ್ಥ ಮೂಡಿಸಿದಂತಾಗಿದೆ ಎಂದು ಸ್ಥಳದಲ್ಲಿದ್ದ ಜನ ಮಾತನಾಡಿಕೊಳ್ಳುತ್ತಿದ್ದುದು ಕಂಡು ಬಂದಿತು.
ನಂತರ ನಾಗರಹಾವನ್ನು ಉರಗ ತಜ್ಞ ಮಾರುತಿ ಗುರಿಕಾರ ಎಂಬ ಯುವಕ ಜಮೀನೊಂದರಲ್ಲಿ ಬಿಟ್ಟಿದ್ದಾರೆ. ವರದಿ ಕಾಶಿನಾಥ ಬಿರಾದಾರ ನಾಲತವಾಡ
Be the first to comment