ಜಿಲ್ಲಾ ಸುದ್ದಿಗಳು
ಬಾಗಲಕೋಟೆ:ಸರಕಾರಿ ಪ್ರೌಡ ಶಾಲೆ ಮುಧೋಳದಲ್ಲಿ ಬಾಗಲಕೋಟ ಜಿಲ್ಲಾ ಮಕ್ಕಳ ಸಹಾಯವಾಣಿ-1098, ರೀಚ್ ಸಂಸ್ಥೆ ತೆರೆದ ಮನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಪ್ರಾಸ್ಥಾವಿಕ ನುಡಿಗಳನ್ನು ವೇದಶ್ರೀ ನಾಯಕ ಸಂಯೋಜಕರು ಮಕ್ಕಳ ಸಹಾಯವಾಣಿ-1098 ಇವರು ಮಾತನಾಡುತ್ತಾ ಮಕ್ಕಳ ಸಹಾಯವಾಣಿ-1098 ಮಕ್ಕಳ ಹಕ್ಕುಗಳಿಗಾಗಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದೆ. ಇಂದು ತಮ್ಮ ಶಾಲೆಯಲ್ಲಿ ತೆರೆದ ಮನೆ ಕಾರ್ಯಕ್ರಮವನ್ನು ಮಾಡುವ ಉದ್ದೇಶವೇನೆಂದರೆ ಈ ಶಾಲೆಯಲ್ಲಿ ಮಕ್ಕಳಿಗೆ ಹಲವು ಸಮಸ್ಯೆಗಳಿವೆ ಎಂದು ತಿಳಿಯಿತು.ಈ ಎಲ್ಲ ಸಮಸ್ಯೆಗಳಿಗೆ ಅಧಿಕಾರಿಗಳ ಮೂಲಕ ಪರಿಹಾರ ದೊರಕಿಸುವ ಪ್ರಯತ್ನವೆ ಈ ಕಾರ್ಯಕ್ರಮದ ಉದ್ದೇಶ ಎಂದರು.ಎಲ್ಲಿ ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗಳು ಕಂಡು ಬರುತ್ತವೆಯೋ ಅಲ್ಲಿ “ತೆರೆದ ಮನೆ” ಕಾರ್ಯಕ್ರಮದ ಮೂಲಕ ಸಮುದಾಯದ ಜನರು,ಅಧಿಕಾರಿಗಳನ್ನು ಸೇರಿಕೊಂಡು ಸಭೆಯ ಮೂಲಕ ಚರ್ಚಿಸಿ ಅದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನು “ತೆರೆದ ಮನೆ” ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದರು.ಎಲ್ಲಿ ಮಕ್ಕಳಿಗೆ ಸಮಸ್ಯೆಗಳು ಎದುರಾಗುತ್ತವೆಯೋ ಅಲ್ಲಿ 1098 ಕರೆ ಮಾಡಿ ಎಂದು ತಿಳಿಸಿದರು.
ಭಾಗ್ಯಶ್ರೀ ತೊಣಸಿಹಾಳ್ 10ನೇ ತರಗತಿ ವಿದ್ಯಾರ್ಥಿನಿ ನಮ್ಮ ಶಾಲೆಯಲ್ಲಿ ತುಂಬಾ ಸಮಸ್ಯೆಗಳು ಇವೆ ನಮಗೆ ಸರಿಯಾದ ಶೌಚಾಲಯ ವ್ಯವಸ್ಥೆ ಇಲ್ಲ ಮತ್ತು ಶಾಲೆಯಲ್ಲಿ ಪ್ರಾರ್ಥನೆ ಮಾಡಲು ಯೋಗಾಸನ ಮಾಡಲು ಸರಿಯಾದ ಜಾಗವಿಲ್ಲ ಮತ್ತು ನಮ್ಮ ಶಾಲೆಗೆ ಯಾವುದೇ ರೀತಿಯ ಕಾಂಪೌಂಡ್ ವ್ಯವಸ್ಥೆ ಇಲ್ಲ ಇದರಿಂದ ಎಲ್ಲಾ ಯುವಕರು ನಮ್ಮ ಶಾಲೆಯ ಮುಂದೆ ಬಂದು ಕುಳಿತುಕೊಳ್ಳುತ್ತಾರೆ ಇದರಿಂದ ನಮಗೆ ತುಂಬಾ ಮುಜುಗರ ಉಂಟಾಗುತ್ತದೆ, ಮತ್ತು ನಮ್ಮ ಶಾಲೆ ಮುಂದೆಯೇ ಸಂತೆ ಮಾರ್ಕೆಟ್ ಮಾಡುವುದರಿಂದ ನಮಗೆ ನಮ್ಮ ಅಭ್ಯಾಸದ ಕಡೆಗೆ ಗಮನಹರಿಸಲು ಆಗುವುದಿಲ್ಲ ಆದ್ದರಿಂದ ಈ ಕಾರ್ಯಕ್ರಮಕ್ಕೆ ನಮ್ಮ ಸಮಸ್ಯೆಗಳನ್ನು ತಿಳಿದುಕೊಂಡು ಸರಿಪಡಿಸಬೇಕೆಂದು ವಿನಂತಿಸಿಕೊಂಡಳು.
ಈಶ್ವರ ದೊಡ್ಮನಿ 10ನೇ ತರಗತಿ ವಿದ್ಯಾರ್ಥಿ ನಮ್ಮ ಶಾಲೆಯಲ್ಲಿ ಆಟವಾಡಲು ಮೈದಾನವಿಲ್ಲ ಮತ್ತು ಕುಡುಕರು ಕುಡಿದು ಬಂದು ನಮ್ಮ ಶಾಲೆಯಲ್ಲಿ ಮಲಗುತ್ತಾರೆ ಇಸ್ಪೀಟ್ ಆಡುತ್ತಾರೆ ಮತ್ತು ನಮ್ಮ ಶಾಲೆಯ ನೀರಿನ ಸಿಂಟ್ಯಾಕ್ಸನ್ನು ಹೊಡೆದು ಹೋಗುತ್ತಾರೆ ಕಾಂಪೌಂಡ್ ವ್ಯವಸ್ಥೆ ಇಲ್ಲದಿರುವುದರಿಂದ ನಮ್ಮ ಶಾಲೆಯಲ್ಲಿಯೇ ಎಲ್ಲಾ ರೀತಿಯ ವಾಹನಗಳನ್ನು ನಿಲ್ಲಿಸುತ್ತಾರೆ. ಮತ್ತು ನಮ್ಮ ಶಾಲೆಯಲ್ಲಿ ಆಟದ ಮೈದಾನ ಇಲ್ಲದಿರುವರಿದ್ದರಿಂದ ಬೇರೆ ಶಾಲೆಗೆ ಹೋಗಿ ಕ್ರೀಡೆಗಳ ತಯಾರಿಯನ್ನು ಮಾಡುತ್ತೇವೆ.
ಶ್ರೀ ಸುನಿಲ್ ಕಂಬೋಗಿ ಮಾದಿಗ ಮಹಾಸಭೆ ತಾಲೂಕ ಅಧ್ಯಕ್ಷರು ಮುಧೋಳ್ ಇವರು ಶಾಲೆಯ ಹೆಸರಿಗೆ ನಿವೇಶನವನ್ನು ನೋಂದಣಿ ಮಾಡಿಕೊಡಬೇಕು,ಸಂತೆ ಆಟೋ ಸ್ಟ್ಯಾಂಡ್‌ಗಳನ್ನು ಸ್ಥಳಾಂತರ ಗೊಳಿಸಿಕೊಡಬೇಕು, ಶಾಲಾ ಕಂಪೌಂಡ್ ನಿರ್ಮಾಣ ಮಾಡಿಕೊಡಬೇಕು, ಶಾಲಾ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡುವುದು ಶಾಲಾ ಸುತ್ತಮುತ್ತ ಇರುವ ಅಂಗಡಿ, ಮುಗ್ಗಟ್ಟುಗಳನ್ನು ತೆರವುಗೊಳಿಸುವುದು, ಶಾಲಾ ಆವರಣದಲ್ಲಿ ಮಧ್ಯಪಾನ ಧೂಮಪಾನ ಮಾಡುವುದನ್ನು ತಡೆಗಟ್ಟಿ ತಂಬಾಕು ಮುಕ್ತ ಪ್ರದೇಶವನ್ನಾಗಿ ಮಾಡಬೇಕು, ಸರ್ಕಾರಿ ಶಾಲೆ ಸಬಲೀಕರಣಕ್ಕೆ ಸಮುದಾಯ ಪಾಲಕರ ಸಹಕಾರ ಅಗತ್ಯವಿದೆ ಎಂದು
ಕಾರ್ಯಕ್ರಮಕ್ಕೆ ಆಗಮಿಸಿರುವ ಅಧಿಕಾರಿಗಳಲ್ಲಿ ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ಕೊಡಬೇಕೆಂದು ವಿನಂತಿಸಿಕೊಳ್ಳುತ್ತೇನೆ ಎಂದು ಮಾತನಾಡಿದರು.
ಈ ಸಂದರ್ಭದಲ್ಲಿ ಮಾನ್ಯ ಶಿಕ್ಷಣ ಇಲಾಖೆ ಕ್ಷೇತ್ರ ಸಮನ್ವಯ ಅಧಿಕಾರಿಗಳು,ಯಶವಂತ ಮಾದರ್ ಜಿಲ್ಲಾ ಮಕ್ಕಳ ರಕ್ಷಣಾ ಘಟಕ,ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮುಧೋಳ್, ಸುರೇಶ್ ಮೈತ್ರಿ ಎಸ್.ಡಿ.ಎಮ್.ಸಿ ಅಧ್ಯಕ್ಷರು,ಪಾಟೀಲ್ ಸಮಾಜ ಕಲ್ಯಾಣ ಇಲಾಖೆ,ಸುನಿಲ್ ಕಂಬೋಗಿ ಮಾದಿಗ ಮಹಾಸಭೆ ತಾಲೂಕಾ ಅಧ್ಯಕ್ಷರು,ಮಕ್ಕಳ ಸಹಾಯವಾಣಿಯ-1098 ಸಂಯೋಜಕರಾದ ವೇದಶ್ರೀ ನಾಯಕ ಮತ್ತು ಜಯಶ್ರೀ ಹಂಸನೂರ್, ಚಿನ್ನನ್ನವರ್ ಶಾಲೆಯ ಮುಖ್ಯಗುರುಗಳು, ಭಾಗ್ಯಶ್ರೀ ತೊಣಸಿಹಾಳ್ ಮತ್ತು ಈಶ್ವರ್ ದೊಡ್ಮನಿ 10ನೇ ತರಗತಿ ಮಕ್ಕಳು,ಉಪಸ್ಥಿತರಿದ್ದರು.ಪದ್ಮ ಪತ್ತಾರ್ ಶಿಕ್ಷಕರು ನಿರೂಪಿಸಿದರು,ಜಯಶ್ರೀ ಹಂಸನೂರ್ ಮಕ್ಕಳ ಸಹಾಯವಾಣಿ ತಂಡದ ಸದಸ್ಯರು ವಂದಿಸಿದರು.
Be the first to comment