ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ:ಇಂದು ಮತ್ತು ಸುಸ್ತಿರ ನಾಳೆಗಾಗಿ ಲಿಂಗ ಸಮಾನತೆ ಯನ್ನು ಗ್ರಾಮೀಣ ಹಾಗೂ ನಗರದ ಮಹಿಳೆಯರೊಂದಿಗೆ ವಿವಿಧ ಆಟಗಳೊಂದಿಗೆ ಆಚರಣೆಯನ್ನು ನವನಗರದ ಸಮುದಾಯ ಭವನದಲ್ಲಿ ನೆಡೆಯಿತು.

ವಿದ್ಯಾನಿಕೇಥನ್ ಸಂಸ್ಥೆ,ರೀಚ್ ಸಂಸ್ಥೆ,ಸಿ.ಆರ್.ಎಪ್.ಟಿ.ಡಿ.ಹೆಚ್ ಸಂಸ್ಥೆ ಸಹಯೋಗದಲ್ಲಿ ಇಮೇಜ್ ನೆಷ್ಟ್ ಆಂದೋಲನದ ಬಾಗವಾಗಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಯನ್ನು ಗಿಡಕ್ಕೆ ನೀರು ಹಾಕುವುದರ ಮೂಲಕ ಕಾರ್ಯಕ್ರಮ ಉಧ್ಘಾಟನೆ ಮಾಡಲಾಯಿತು.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಶ್ರೀಮತಿ ಸುಮಂಗಲ ಮನಗೂಳಿ, ಪೋಸ್ಟ್ ಮಾಸ್ಟರ್ ಇವರು ಎಲ್ಲರಿಗೂ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಬಾಷಯಗಳನ್ನು ತಿಳಿಸುತ್ತಾ ಎಲ್ಲಾ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಖುಷಿಯ ವಿಚಾರ ಇದರಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿರುವುದು ಸಾರ್ಥಕವಾಯಿತು.

ಮಹಿಳೆ ಅಬಲೆಯಲ್ಲ ಅವಳು ಸಬಲೆ ಎಂದು ತಿಳಿಸಿದರು ಅವಳು ಎಲ್ಲ ರಂಗಗಳಲ್ಲೂ ಭಾಗವಹಿಸಿದ್ದಾಳೆ, ಆಟೋ ಚಾಲನೆ ಮಾಡುವುದರಿಂದ ಹಿಡಿದು ಏರೋಪ್ಲೇನ್ ಚಾಲನೆ ಮಾಡುವ ಹುದ್ದೆಯಲ್ಲಿ ಕೂಡ ಮಹಿಳೆಯ ಮುಂದಾಗಿದ್ದಾಳೆ ಇದು ನಮ್ಮ ಮಹಿಳಾ ಸಬಲೀಕರಣ ಎಂದು ತಿಳಿಸಿದರು. ಅಂಚೆ ಕಚೇರಿಯಲ್ಲಿ ಸುಕನ್ಯ ಯೋಜನೆ ಇದ್ದು ಇದು ಹೆಣ್ಣು ಮಗುವಿಗೆ ಶಿಕ್ಷಣಕ್ಕೆ ಸಹಾಯವಾಗುತ್ತದೆ. ಎಲ್ಲರೂ ಇದರ ಸದುಪಯೋಗ ಪಡೆಯಿರಿ ಎಂದು ತಿಳಿಸಿದರು.

ಇಮೇಜ್ ಆಂದೋಲನದ ನಾಯಕಿಯಾದ ಶಿಲ್ಪ ಬಡಿಗೇರ್ ಇವರು ಬಾಲ್ಯವಿವಾಹದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಬಾಲ್ಯ ವಿವಾಹದಿಂದ ಅನುಭವಿಸುವ ಹಿಂಸೆಯನ್ನು ಯಾವ ಮಕ್ಕಳು ಕೂಡ ಅನುಭವಿಸಬಾರದು ಈ ಕಾರ್ಯಕ್ರಮದ ಮುಖಾಂತರ ನಾನು ಎಲ್ಲ ಮಹಿಳೆಯರಿಗೂ ಕೇಳಿಕೊಳ್ಳುವುದೇನೆಂದರೆ ಯಾರೂ ಕೂಡ ಬಾಲ್ಯವಿವಾಹವನ್ನು ಮಾಡಬಾರದು ಬಾಲ್ಯವಿವಾಹ ಕಂಡು ಬಂದಲ್ಲಿ ಮಾಹಿತಿಯನ್ನು ೧೦೯೮ಕ್ಕೆ ನೀಡಿ ಬಾಲ್ಯವಿವಾಹನ್ನು ತಡೆಗಟ್ಟೋಣ ಎಂದು ತಿಳಿಸಿದರು. ಇನ್ನೊಬ್ಬ ಆಂದೋಲನ ನಾಯಕಿಯಾದ ಗೀತಾ ಕಾವಳ್ಳಿ ಅವರು ಬಾಲ್ಯವಿವಾಹ ಮಾಡಬೇಡಿ, ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ ನಾವು ಎಲ್ಲಾ ಮಹಿಳೆಯರು ಸೇರಿ ನಮ್ಮ ಗ್ರಾಮಗಳಲ್ಲಿ ಬಾಲ್ಯವಿವಾಹವಾಗದಂತೆ ನೋಡಿಕೊಂಡಾಗ ಮಾತ್ರ ಇದು ಮಹಿಳಾ ಸಬಲೀಕರಣವಾಗುತ್ತದೆ. ಮಹಿಳಾ ದಿನಾಚರಣೆ ಆಚರಿಸುವುದಕ್ಕೂ ಒಂದು ಸಾರ್ಥಕತೆ ಆಗುತ್ತದೆ ಎಂದು ತಿಳಿಸಿದರು. ಎಷ್ಟೋ ಮಕ್ಕಳಿಗೆ ಬಾಲ್ಯವಿವಾಹ ಮಾಡಿಕೊಂಡು ಶಿಕ್ಷಣದಿಂದ ವಂಚಿತರಾಗಿದ್ದಾರೆ, ಅದಕ್ಕಾಗಿ ಯಾವ ಮಹಿಳೆಯೂ ಕೂಡ ತಮ್ಮ ಮಕ್ಕಳಿಗೆ ಬಾಲ್ಯವಿವಾಹವನ್ನು ಮಾಡಬೇಡಿ ಎಂದು ತಿಳಿಸಿದರು.

ಅದೇ ರೀತಿ ಸಂಸ್ಥೆಯ ಸಿಬ್ಬಂದಿಯಾದ ಶ್ರೀಮತಿ ಶಾರದಾ ಭಜಂತ್ರಿಯವರು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕುರಿತು ಮಾತನಾಡಿದರು ಹೆಣ್ಣು ಮಗುವನ್ನು ಉಳಿಸಿ ಬೆಳೆಸಿ ಓದಿಸಿ ರಕ್ಷಣೆ ಮಾಡಿ ಉತ್ತಮ ಶಿಕ್ಷಣ ಕೊಡಿಸಿ ಅವರು ಒಂದು ಉನ್ನತ ಹುದ್ದೆಗೆ ಹೋಗಲು ಅವಕಾಶ ಮಾಡಿಕೊಡಬೇಕು ಅವಳು ಎಲ್ಲಾ ರಂಗಗಳಲ್ಲಿ ಭಾಗವಹಿಸುವಂತೆ ನಾವು ಪ್ರೇರೇಪಿಸಿ ಮಕ್ಕಳ ಹಕ್ಕುಗಳು ಉಲ್ಲಂಘನೆಯಾಗದAತೆ ಅವರ ಹಕ್ಕುಗಳ ಬದ್ಧತೆಗಾಗಿ ಸಿದ್ದರಾಗೋಣ ಬಾಲ್ಯವಿವಾಹವಾಗದಂತೆ ನಮ್ಮ ಗ್ರಾಮಗಳಲ್ಲಿ ನೋಡಿಕೊಳ್ಳೋಣ ಎಂದು ತಿಳಿಸಿದರು.

ಕುಮಾರ್ ರವರು ಲಿಂಗ ಸಮಾನತೆಯಿಂದ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಹಾಗಾಗಿ ಲಿಂಗದನ್ವಯ ತಾರತಮ್ಯ ಮಾಡುವುದು ಬಿಟ್ಟು ಗಂಡು ಪಾತ್ರೆ ತೊಳೆಯಲಿ ಹೆಣ್ಣು ಆಟ ಆಡಲಿ ಹೀಗೆ ಎಲ್ಲಿರಿಗೂ ಎಲ್ಲದರಲ್ಲು ಬಾಗವಹಿಸುವಂತೆ ಅವಕಾಶ ಕಲ್ಪಿಸಬೇಕು ಎಂದು ತಿಳಿಸಿದರು.

ವಿವಿದ ಸ್ಪರ್ಧೆಗಳನ್ನು ಹಮ್ಮಿಕೊಂಡಿದ್ದು ಸ್ಪರ್ಧೆಗಳು ಈ ರೀತಿಯಾಗಿತ್ತು ಸಂಗೀತ ಸ್ಪರ್ಧೇ, ಬಾಲ್ಯವಿವಾದ ದುಷ್ಪರಿಣಾಮಗಳು ಮತ್ತು ಬಾಲ್ಯವನ್ನು ಯಾವತರ ತಡೆಹಿಡಿಯಬೇಕು ಎಂಬುವುದರ ಕುರಿತು ವಿಡಿಯೋ ಸ್ಪರ್ಧೆ, ಪೌಷ್ಟಿಕಾಂಶ ಆಹಾರಗಳು ಅಡುಗೆ ಸ್ಪರ್ಧೆ, ಮ್ಯೂಸಿಕ್ ಕುರ್ಚಿ ಸ್ಪರ್ಧೆಗಳನ್ನು ಹಮ್ಮಿಕೊಂಡಿದ್ದು ಈ ಸ್ಪರ್ಧೆಯಲ್ಲಿ ಕಿಶೋರಿಯರು ಮತ್ತು ಅವರ ಕುಟುಂಬದವರು ಭಾಗವಹಿಸಿದರು. ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಐಶ್ವರ್ಯ ಮಾದರ್, ದ್ವಿತೀಯ ಅವಕ್ಕ ಮಾದರ್, ದ್ವಿತೀಯ ಗೀತಾ ಕೋವಳ್ಳಿ, ಸಂಗೀತ ಕುರ್ಚಿ ಸ್ಪರ್ಧೆಯಲ್ಲಿ ಪ್ರಥಮ ಶಾರವ್ವ ಪೂಜಾರಿ, ದ್ವಿತೀಯ ಭಾಗ್ಯಶ್ರೀ ಮಾದರ್, ತೃತೀಯ ಇಂದುಮತಿ, ಅಡುಗೆ ಸ್ಪರ್ಧೆಯಲ್ಲಿ ಪ್ರಥಮ ಸುಧಾ ಜಗಲಿ, ದ್ವಿತೀಯ ರೇಖಾ ಬಡಿಗೇರ್, ವಿಡಿಯೋ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಶಿಲ್ಪ ಬಡಿಗೇರ್, ದ್ವಿತೀಯ ಸುಧಾ ಜಗಲಿ, ತೃತೀಯ ಸರಸ್ವತಿ ತಳವಾರ್, ಎಲ್ಲಾ ಮಕ್ಕಳು ಮಹಿಳೆಯರು ಈ ಎಲ್ಲಾ ಸ್ಪರ್ಧೆಯಲ್ಲಿ ತುಂಬಾ ಆಸಕ್ತಿಯಿಂದ ಭಾಗವಹಿಸಿ ಮಹಿಳಾ ದಿನಾಚರಣೆಯನ್ನು ಯಶಸ್ವಿಗೊಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ಸ್ಥಾನ ವಹಿಸಿದ ಶ್ರೀಯುತ ಜಿ.ಎನ್.ಸಿಂಹ, ನಿರ್ಧೇಶಕರು, ರೀಚ್ ಸಂಸ್ಥೆ, ಬಾಗಲಕೋಟೆ ಇವರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ವಿಶೇಷದ ಕುರಿತು ಮಾತನಾಡಿದರು, ಹಿಂದಿನ ಕಾಲದಲ್ಲಿ ಮಹಿಳೆಯರ ಸ್ಥಾನಮಾನ ಮಹಿಳೆಯರು ಹೊರಗಡೆ ಬರುವುದಕ್ಕೆ ಹಿಂದೆಟು ಹಾಕುತ್ತಿದ್ದರು ಅವರ ಸ್ಥಿತಿಗತಿಗಳು ಸಾಮಾಜಿಕ ಸ್ಥಾನಮಾನಗಳು ಅವರ ಹಕ್ಕುಗಳ ಕುರಿತು ತಿಳಿಸಿದರು, ಸರ್ಕಾರವು ಮಹಿಳೆಯರ ಹಕ್ಕುಗಳ ಭದ್ರತೆಗಾಗಿ ಹೊಸ ಸುತ್ತೋಲೆಯನ್ನು ಹೊರಡಿಸಿದೆ ಮಹಿಳಾ ವಿಶೇಷ ಗ್ರಾಮ ಸಭೆ ಆಯೋಜಿಸಿ ಅಲ್ಲಿ ಕೇವಲ ಮಹಿಳೆಯರ ಬೇಕು ಬೇಡಿಕೆಗಳನ್ನು ಚರ್ಚಿಸುವುದು ವಿಶೇಷವಾಗಿರುತ್ತದೆ ಎಂದು ಕಾರ್ಯಕ್ರಮಕ್ಕೆ ಭಾಗವಹಿಸಿದ ಎಲ್ಲಾ ಮಹಿಳೆಯರು ಕೂಡ ಇದರ ಉಪಯೋಗವನ್ನು ಪಡೆದುಕೊಂಡು ತಮ್ಮ ಹಕ್ಕನ್ನು ಚಲಾಯಿಸಿ ತನ್ನ ಕರ್ತವ್ಯವನ್ನು ಮಾಡಬೇಕೆಂದು ತಿಳಿಸಿದರು.

ಪ್ರಾರ್ಥನೆ ಶಾರದ, ನಿರೂಪಣೆ ಶ್ರೀದೇವಿ,ಸ್ವಾಗತ ರೇಖಾ ಬಡಿಗೇರ, ವಂದನಾರ್ಪಣೆಯನ್ನು ಶೈಲರವರು ನೆರವೇರಿಸಿದರು. ನವನಗರದ ವಾಂಬೆ ಕಲೋನಿ, ಮುರನಾಳ, ಕಲಾದಗಿ, ಐಹೋಳೆ, ಕೊರ್ತಿ, ಸುನಗ, ಸೀಮಿಕೇರಿ, ತೋಗುನಸಿ, ತುಳಸಿಗೇರಿ, ಗದ್ದನಕೇರಿ ಗ್ರಾಮಗಳಿಂದ ೧೮೦ ಮಹಿಳೆಯರು ಬಾಗವಹಿಸಿದ್ದರು.

Be the first to comment

Leave a Reply

Your email address will not be published.


*