ಶಿರಶಿಯ ಶಾಸಕ ಕಾಗೆರಯವರಿಗೆ ಒಲಿದ ಸಭಾಪತಿ ಸ್ಥಾನ


           ರಾಜಕೀಯ ಸುದ್ದಿ


ಬೆಂಗಳೂರು: ರಾಜ್ಯ ವಿಧಾನಸಭೆಯ ನೂತನ ಸ್ಪೀಕರ್‌ ಆಗಿ ಶಿರಸಿ-ಸಿದ್ದಾಪುರದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅವಿರೋಧವಾಗಿ ಆಯ್ಕೆಯಾದರು.


ಈ ಮೂಲಕ ರಮೇಶ್‌ಕುಮಾರ್‌ ಅವರಿಂದ ತೆರವಾದ ಸ್ಥಾನವನ್ನು ಕಾಗೇರಿ ಅವರು ಅಲಂಕರಿಸಿದರು.

ವಿಧಾನಸಭೆಯಲ್ಲಿ ಬುಧವಾರ ಉಪ ಸಭಾಧ್ಯಕ್ಷ ಜೆ.ಕೆ.ಕೃಷ್ಣಾರೆಡ್ಡಿಯವರು ಸ್ಪೀಕರ್‌ ಚುನಾವಣೆ ಪ್ರಕ್ರಿಯೆ ಪ್ರಸ್ತಾಪ ಮಂಡಿಸಿದರು. ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ಕಾಗೇರಿ ಅವರ ಹೆಸರು ಸೂಚಿಸಿದರು.


ಬಸವರಾಜ ಬೊಮ್ಮಾಯಿ ಅವರು ಅನುಮೋದಿಸಿದರು. ನಂತರ ಕಾಗೇರಿ ಅವರನ್ನು ಸಿಎಂ ಯಡಿಯೂರಪ್ಪ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸ್ಪೀಕರ್‌ ಪೀಠಕ್ಕೆ ಕರೆತಂದರು.

Be the first to comment

Leave a Reply

Your email address will not be published.


*