ಹುಣಸಗಿಯಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ನ ಜಯಂತಿಯನ್ನು ಕೊವಿಡ-19 ಇರುವ ಕಾರಣ ಸರಳವಾಗಿ ಚನ್ನಮ್ಮನ ವೃತ್ತದಲ್ಲಿ ಆಚರಣೆ ಮಾಡಲಾಯಿತು,
ಗ್ರಾಮದ ಹಿರಿಯರು ಮಾತನಾಡಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟೀಷರೊಡನೆ ಹೋರಾಡಿದ ಧೀರ ಮಹಿಳೆ ನಮ್ಮ ಕರ್ನಾಟಕ ರಾಜ್ಯದಲ್ಲಿ ಜನಿಸಿರುವುದು ನಮ್ಮೆಲ್ಲರ ಪುಣ್ಯ ಮತ್ತು ಸೌಭಾಗ್ಯ, ವೀರಮಾತೆ ಚನ್ನಮ್ಮನ ಧೈರ್ಯ ಸಾಹಸ ತ್ಯಾಗ ಬಲಿದಾನ ಈಗಿನ ಯುವ ಸಮುದಾಯಕ್ಕೆ ಮಾದರಿಯಾಗಲಿ, ಬ್ರಿಟೀಷರನ್ನು ಎದುರಿಸಿದ ಕಿತ್ತೂರು ರಾಣಿ ಚೆನ್ನಮ್ಮ ನ ಚರಿತ್ರೆ ಪುಟಗಳಲ್ಲಿ ಸೇರಿ ಹೋಗಿದ್ದರೂ, ಆಕೆಯ ಶೌರ್ಯ ಸಾಹಸ ಇಂದಿಗೂ ಕನ್ನಡ ನಾಡಿನ ಮನೆ ಮಾತಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಎ.ಪಿ.ಎಮ್.ಸಿ ಅದ್ಯಕ್ಷರಾದ ದೇವಣ್ಣ ಮಲಗಲದಿನ್ನಿ, ಮುಖಂಡರಾದ ವಿರೇಶ ಚಿಂಚೋಳಿ, ಬಸವರಾಜ ಮಲಗಲದಿನ್ನಿ, ಮಹದೇವ ಚಂದಾ , ಆರ್.ಎಮ್.ರೇವಡಿ, ಹೊನ್ನಕೇಶವ ದೇಸಾಯಿ, ಮಲ್ಲಿಕಾರ್ಜುನ ದೇಸಾಯಿ, ಬಸಣ್ಣ ಬಾಲಗೌಡ್ರ, ರಾಜಶೇಖರ ದೇಸಾಯಿ, ಮುರಿಗೆಣ್ಣ ದೇಸಾಯಿ, ಮಾಂತಪ್ಪ ಮಲಗಲದಿನ್ನಿ, ಮುದಕಪ್ಪ ದೇಸಾಯಿ,ಅನೀಲ ಸಾಹು ಬಳಿ, ರಾಜು ಮಲಗಲದಿನ್ನಿ, ನಿಂಗಣ್ಣ ಮಲಗಲದಿನ್ನಿ, ಅಶೋಕ ಕೊಡೇಕಲ್ಲ ನಾಗಯ್ಯ ಹಿರೇಮಠ, ಪ್ರಮೋದ, ಪ್ರಶಾಂತ ಮಲಗಲದಿನ್ನಿ ಇತರರು ಹಾಜರಿದ್ದರು.
Be the first to comment