ವಿಜಯಪುರ ಜಿಲ್ಲಾ ಸಮಗ್ರ ನೀರಾವರಿ ನನ್ನ ಕನಸು ಎನ್ನುವವರು ಮೊದಲು ಕೃತಜ್ಞತಾ ಭಾವನೆ ಹೊಂದಲಿ: ಕೆ.ಎಫ್.ಸಿ.ಎಸ್.ಸಿ. ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾಕದರು

ಜಿಲ್ಲಾ ಸುದ್ದಿಗಳು

ಮುದ್ದೇಬಿಹಾಳ ಅ.8:

ವಿಜಯಪುರ ಜಿಲ್ಲಾ ನೀರಾವರಿ ಯೋಜನೆಗಳು ನನ್ನ ಕನಸು ಎಂದು ಹೇಳುತ್ತಿರುವ ಶಾಸಕ ಎಂ.ಬಿ.ಪಾಟೀಲ ಅವರಿಗೆ ಅವರ ಕನಸನ್ನು ನನಸು ಮಾಡಿರುವ ಬಿಜೆಪಿ ಸರಕಾರಕ್ಕೆ ಕೃತಜ್ಞತೆ ಸಲ್ಲಿಸುವ ಭಾವನೆ ಮೂಡಬೇಕು ಎಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಅಧ್ಯಕ್ಷ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.



ಮುದ್ದೇಬಿಹಾಳ ಪಟ್ಟಣದ ದಾಸೋಹ ನಿಲಯದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೇಸ್ ಸರಕಾರ ಅವಧಿಯಲ್ಲಿ ಎಂ.ಬಿ.ಪಾಟೀಲರೇ ನೀರಾವರಿ ಸಚಿವರಾದ ಸಂದರ್ಭದಲ್ಲಿ ವಿಧಾನಸೌದದಲ್ಲಿ ಜಿಲ್ಲಾ ನೀರಾವರಿ ಬಗ್ಗೆ ಯಾವ ರೀತಿಯಲ್ಲಿ ಧ್ವನಿ ಎತ್ತಿದ್ದಾರೆ ಹಾಗೂ ಯಾವ ಯೋಜನೆಗಳನ್ನು ಅನುಷ್ಠಾನಕ್ಕೆ ಬರುವಂತಹ ಕಾರ್ಯ ಮಾಡಿದ್ದಾರೆ ಎಂಬುವುದರ ಬಗ್ಗೆ ಸ್ಪಷ್ಠ ಪಡಿಸಲಿ ಎಂದು ಅವರು ಸವಾಲ್ ಎಸೆಗಿದ್ದಾರೆ.

ಎಂ.ಬಿ.ಪಾಟೀಲ ಅವರು ನೀರಾವರಿ ಸಚಿವರಾಗಿದ್ದಾಗ ಕೆರೆ ತುಂಬುವ ಯೋಜನೆ ಪಟ್ಟಿಯಲ್ಲಿ ಕೇವಲ ಎರಡೇ ಕೆರೆಗಳು ಬರುತ್ತವೆ. ಅವುಗಳು ಅವರ ಭಾಗಕ್ಕೆ ಮಾತ್ರ ಸೀಮಿತವಾಗಿವೆ. ಅಲ್ಲದೇ ಯಾವುದೇ ಹಣ ವೆಚ್ಚ ಮಾಡದೇ ತುಂಬಬಹುದಾದ ಕೆರೆಗಳಿಗೆ ಸರಕಾರದಿಂದ ಹಣ ಬಿಡುಗಡೆಗೊಳಿಸಿ ಅವುಗಳನ್ನು ತುಂಬಿಸಲಾಗಿದೆ. ಇನ್ನೂಳಿದ ಜಿಲ್ಲೆಯ ಯಾವುದೇ ಕೆರೆ ತುಂಬುವಲ್ಲಿ ಪಾಟೀಲರು ಯಶಸ್ವಿಯಾಗಿಲ್ಲ ಎಂದು ಅವರು ಆರೋಪಿಸಿದರು.


 


ಪುರಾವೆ ಇಲ್ಲದೇ ಜಂಬ ಕೊಚ್ಚಿಕೊಳ್ಳುವುದು ಬಿಡಬೇಕು:

ಶಾಸಕ ಎಂ.ಬಿ.ಪಾಟೀಲ ಅವರು ಜಿಲ್ಲಾ ನೀರಾವರಿ ಬಗ್ಗೆ ವಿಶೇಷವಾದ ಯೋಜನೆಯನ್ನು ಇಟ್ಟುಕೊಂಡು ಅದನ್ನು ರಾಜ್ಯ ಸರಕಾರದ ಎದುರಿಗೆ ಇಟ್ಟಂತಹ ಒಂದಾದರು ಪುರಾವೆ ಇದೆಯಾ…? ಆದರೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಮತ್ತು ದೇವರ ಹಿಪ್ಪರಗಿ ಮತಕ್ಷೇತ್ರದಲ್ಲಿ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಬಂಡಿ ಯಾತ್ರೆ, ಮುದ್ದೇಬಿಹಾಳ ದಿಂದ ಆಲಮಟ್ಟಿಯವರೆಗೂ ಪಾದಯಾತ್ರೆ ಸೇರಿದಂತೆ ಸಾಕಷ್ಟು ಹೋರಾಟಗಳನ್ನು ನಾನು ಮಾಡಿದ್ದೇನೆ. ಅಲ್ಲದೇ ಅಂದಿನ ರಾಜ್ಯದ ಸರಕಾರಗಳ ವಿರುದ್ಧ ಧ್ವನಿಯೂ ಎತ್ತಿದ್ದೇನೆ. ಇದರ ಬಗ್ಗೆ ವಿಧಾನಸೌದದಲ್ಲಿಯೇ ಪುರಾವೆಗಳಿವೆ ಎಂದು ಅವರು ಹೇಳಿದರು.

ಸಾಧನೆಯಲ್ಲಿ ಕಾಂಗ್ರೆಸ್‌ದು ಶೇ.೨೦ ಪಾಲಾದರೆ ಬಿಜೆಪಿಯದು ಶೇ.೮೦ರಷ್ಟಿದೆ:
ಕಾಂಗೆಸ್ ಸರಕಾರದಲ್ಲಿ ರಾಜ್ಯದ ನೀರಾವರಿ ಸಚಿವರಾಗಿದ್ದ ಎಂ.ಬಿ.ಪಾಟೀಲ ಅವರು ಮೊದಲು ತಮ್ಮ ಕ್ಷೇತ್ರಕ್ಕೆ ಆದ್ಯತೆ ನೀಡಿದ್ದರು. ನಂತರ ಕಾಲುವೆಗಳ ನಿಮಾರ್ಣಕ್ಕೆ ಟೆಂಡರ್ ಕರೆಯಲಾಯಿತು. ಆದರೆ ಅದನ್ನು ಅನುಷ್ಠಾನ ಮಾಡುವಲ್ಲಿ ಬಿಜೆಪಿ ಸರಕಾರ ಕಾರ್ಯ ಮಹತ್ವವಾಗಿದೆ. ಇನ್ನೂ ಮುದ್ದೇಬಿಹಾಳ ಮತಕ್ಷೇತ್ರದ ತಾಳಿಕೋಟಿ ಭಾಗದ ೨೪ ಕೋಟಿಯ ಟೇಲ್‌ಯಂಡ್ ಕಾಮಗಾರಿ, ನಾಗರಬೆಟ್ಟದ ೩೮ ಕೋಟಿ ಯೋಜನೆ, ಬೂದಿಹಾಳ ಪೀರಾಪುರ ಯೋಜನೆಯ ೫೮೦ಕೋಟಿ ಕಾಮಗಾರಿಗಳಿಗೆ ರಾಜ್ಯ ಸರಕಾರ ಬದಲಾವಣೆಯ ಹಂತದ ವೇಳೆಯಲ್ಲಿ ಟೆಂಡರ್ ಕರೆಯಲು ಅನುಮತಿಸಲಾಯಿತು. ಆದರೆ ಅದಕ್ಕೆ ಅನುಷ್ಠಾನದ ರೂಪ ನೀಡುತ್ತಿರುವುದು ಬಿಜೆಪಿ ಸರಕಾರ ಎನ್ನುವುದು ಮರೆಯಬಾರದು ಎಂದು ಶಾಸಕ ನಡಹಳ್ಳಿ ಹೇಳಿದರು.
ಜಿಲ್ಲಾ ನೀರಾವರಿ ಯೋಜನೆಗಳಿಗೆ ಬಿಜೆಪಿ ಸರಕಾರದಿಂದಲೇ ಅಸ್ತು:
ವಿಜಯಪುರ ಜಿಲ್ಲೆಯಲ್ಲಿ ಬಹುಬೇಡಿಕೆಯಾಗಿದ್ದ ಚಿಮ್ಮಲಗಿ ಹಾಗೂ ಮುಳವಾಡ ಏತ್ ನೀರಾವರಿ ಅನುಷ್ಠಾನಕ್ಕಾಗಿ ಸುಮಾರು ೮೦೦ ಕೋಟಿ ಮೀಸಲಿಟ್ಟ ಹಿರಿಮೆ ಅಂದಿನ ಬಿಜೆಪಿ ಸರಕಾರಕ್ಕೆ ಸಲ್ಲುತ್ತದೆ. ಜಿಲ್ಲೆಯ ಕೆರೆತುಂಬುವ ಯೋಜನೆಗೆ ಕಾಂಗ್ರೆಸ್ ಸರಕಾರದಲ್ಲಿ ಖರ್ಗೆಯವರು ನೀರಾವರಿ ಮಂತ್ರಿಗಳಾಗಿದ್ದಾಗ ಒಪ್ಪಿಸಗೆ ಸಿಗಲಿಲ್ಲ. ಆದರೆ ರಾಜ್ಯದ ಸಮೀಶ್ರ ಸರಕಾರದಲ್ಲಿ ಈಶ್ವರಪ್ಪನವರು ಒಪ್ಪಿಗೆ ನೀಡಿದರು. ವಿಜಯಪುರ ಜಿಲ್ಲೆಯ ನೀರಾವರಿಗೆ ಪ್ರಥಮ ಆದ್ಯತೆ ನೀಡಿದ್ದೆ ಬಿಜೆಪಿ ಸರಕಾರ ಎಂದು ಶಾಸಕ ನಡಹಳ್ಳಿ ಹೇಳಿದರು.

 

Be the first to comment

Leave a Reply

Your email address will not be published.


*