ಛಾಯಾಗ್ರಾಹರ ವಿವಿಧ ಬೇಡಿಕೆ ಈಡೆರಿಕೆಗಾಗಿ ತಹಸಿಲ್ದಾರರಿಗೆ ಮನವಿ

ವರದಿ : ಆನಂದ ಹೊಸಗೌಡರ್ ಹುಣಸಗಿ

ಹುಣಸಗಿ: ರಾಜ್ಯ ಛಾಯಾವೃತ್ತಿ ಸಮೂಹವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿ ವಿವಿದ ಬೇಡಿಕೆಗಳನ್ನು ಈಡೆರಿಸಲು .ಹಾಗೂ ಕೊವಿಡ್ ೧೯ ಹಿನ್ನೆಲೆಯಲ್ಲಿ ಸರ್ಕಾರವು ಲಾಕಡೌನ ಘೊಷಿಸಿದ್ದರಿಂದಾಗಿ ನಮಗೆ ಕೆಲಸವೇ ಇಲ್ಲದಂತಾಗಿದೆ ಈ ನಿರ್ಬಂದದಿಂದ ೨೦೨೦ರ ಅಂತ್ಯದವರೆಗೂ, ಯಾವುದೇ ಮದುವೆ ಮತ್ತಿತರ ಕಾರ್ಯಕ್ರಮಗಳು ಸಿಗುತ್ತಿಲ್ಲ . ಹೀಗಾಗಿ ಬಾಡಿಗೆ,ಕುಟುಂಬದ ನಿರ್ವಹಣೆ, ಮಕ್ಕಳ ಶಾಲಾ ಶುಲ್ಕ, ಸಾಲದ ಹೊರೆ ಮುಂತಾದ ಎಲ್ಲದಕ್ಕು ಕಷ್ಟಕರವಾಗಿದೆ .

ನಮ್ಮ ಬೇಡಿಕೆ ಈಡೆರದಿದ್ದರೆ ಅಕ್ಟೋಬರ್ 31-10-2020ರಂದು ಬೆಂಗಳೂರು ಚಲೋ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ರಘುವೀರಸಿಂಗ್ ಛಾಯಾಗ್ರಹಕರ ಸಂಘದ ಅದ್ಯಕ್ಷ ಚಂದ್ರಶೇಖರ ಚಿತ್ತರಗಿ ಹೇಳಿದರು ಹಾಗೂ ಶಿವಣ್ಣ ಪೂಜಾರಿ,ಅಯ್ಯನಗೌಡ,ಶ್ರಿಕಾಂತ ನಾಗರಾಳ,ಮಲ್ಲು ಹೆಬ್ಬಾಳ, ಹಣಮಂತ ಪೂಜಾರಿ, ಶ್ರಿಶೈಲ, ಶಾಂತಗೌಡ, ಅಂಬ್ರೇಶ, ಬಸವರಾಜ್, ರವಿ, ಈರಣ್ಣ ಗುಂಡಲಗೇರಿ , ಮೌನೇಶ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಜರಿದ್ದರು.

 

Be the first to comment

Leave a Reply

Your email address will not be published.


*