ಸ್ವಚ್ಚ ಭಾರತ ಅಭಿಯಾನದ ಮೂಲಕ ಗಾಂಧಿ ಜಯಂತಿ ಆಚರಿಸಿದ ಬಿಜೆಪಿ ಯುವ ಮೋರ್ಚಾ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು 

ಮುದ್ದೇಬಿಹಾಳ ಅ.2:

ದೇಶವೇ ರಾಮರಾಜ್ಯವನ್ನಾಗಿಸಬೇಕು ಎಂಬ ಕನಸನ್ನು ಇಟ್ಟುಕೊಂಡ ಮಹಾತ್ಮಾ ಗಾಂಧೀಜಿ ಅವರು ಬ್ರಿಟಿಷರಿಂದ ಭಾರತವನ್ನು ಸ್ವತಂತ್ರಗೊಳಿಸಿದರು. ಅವರ ಜನ್ಮದಿನದಂದು ಅವರು ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳುವ ಶಪಥ ಮಾಡಬೇಕು ಎಂದು ಬಿಜೆಪಿ ತಾಲೂಕಾ ಅಧ್ಯಕ್ಷ ಪರಶುರಾಮ ಪವಾರ ಹೇಳಿದರು.



ಮುದ್ದೇಬಿಹಾಳ ತಾಲೂಕಿನ ಕವಡಿಮಟ್ಟಿ ಗ್ರಾಮದಲ್ಲಿ  ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ವತಿಯಿಂದ ಗಾಂಧೀಜಿ ಅವರ ಜನ್ಮದಿನೋತ್ಸವದ ನಿಮಿತ್ಯವಾಗಿ ಹಮ್ಮಿಕೊಳ್ಳಲಾಗಿದ ಸ್ವಚ್ಚಭಾರತ ಅಭಿಯಾನದಲ್ಲಿ ಅವರು ಮಾತನಾಡಿದರು. 

ಡಿಸಿಸಿ ಬ್ಯಾಂಕ ನಿರ್ದೇಶಕ ಸೋಮನಗೌಡ ಬಿರಾದಾರ ಅಭಿಯಾನಕ್ಕೆ ಚಾಲನೆ ನೀಡಿದರು.



 ಈ ಸಂಧರ್ಭದಲ್ಲಿ ಶಾಸಕರು ಆಪ್ತ ಸಹಾಯಕ ಬಸನಗೌಡ ಪಾಟೀಲ್, ಗೌಡಪ್ಪ ಇಂಗಳಗಿ, ಬಸವರಾಜ ಗುಳಬಾಳ, ಅಶೋಕ ರಾಠೋಡ, ಶಿವು ದಡಿ, ಮಂಜುನಾಥ ರತ್ನಾಕರ, ನೀಲಮ್ಮ ಚಲವಾದಿ, ಗೌರಮ್ಮ ಹುನಗುಂದ ಇದ್ದರು. 


 

 

 

Be the first to comment

Leave a Reply

Your email address will not be published.


*