ರಾಜ್ಯ ಸುದ್ದಿಗಳು
ಮುದ್ದೇಬಿಹಾಳ:
ದೇಶಕ್ಕೆ ಸಂವಿಧಾನ ನೀಡಿ ಮೇಲ್ಜಾತಿಯವರು ಕೀಳಾಗಿ ಕಾಣುತಿದ್ದವರಿಗೆ ಸಮಾನತೆಯ ಬಗ್ಗೆ ತಿಳಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆದರೆ ಅಂಬೇಡ್ಕರ್ ಅವರ ಸಂಪೂರ್ಣ ಕತೆ ಬಗ್ಗೆ ಧಾರಾವಾಹಿ ಮಾಡಿ ಅವರ ಬಾಲ್ಯದ ಬಗ್ಗೆ ತಿಳಿಸುವ ಮಾಡುತ್ತಿರುವ ಕಾರ್ಯ ಹೆಮ್ಮೆಯ ವಿಷಯವಾಗಿದೆ ಎಂದು ಡಿಎಸ್ಎಸ್ ಮುಖಂಡ ಚನ್ನಪ್ಪ ವಿಜಯಕಾರ ಹೇಳಿದರು.
ಪಟ್ಟಣದ ಪುರಸಭೆ ಎದುರಿಗೆ ಜಿ ಕನ್ನಡದದಲ್ಲಿ ಪ್ರಸಾರವಾಗುತ್ತಿರುವ ಮಹಾನಾಯಕ ಧಾರಾವಾಹಿಯ 21ನೇ ಎಪಿಸೋಡ್ ಸಂಭ್ರಮಾಚರಣೆ ನಿಮಿತ್ಯ ಹಮ್ಮಿಕೊಳ್ಳಲಾಗಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರು ಕೇವಲ ಕೆಳಮಟ್ಟದವರಿಗೆ ಮಾತ್ರವೇ ಮೀಸಲಾಗಿಲ್ಲ. ಸಮಾಜದಲ್ಲಿ ಯಲ್ಲರಿಗೂ ಸಮಾನತೆ ಇರಬೇಕು ಎನ್ನುವುದೇ ಅವರ ಮೂಲ ಉದ್ದೇಶವಾಗಿತ್ತು. ಅವರ ಚಿಂತನೆಗಳನ್ನು ಬಿಡಿಬಿಡಿಯಾಗಿ ಹೇಳುವ ಮಹಾನಾಯಕ ಧಾರಾವಾಹಿ ಅದ್ಭುತವಾಗಿ ಮೂಡಿಬರುತ್ತಿ. ಇದನ್ನು ಪ್ರಸಾರ ಮಾಡುತ್ತಿರುವ ಜಿ ವಾಹಿನಿಯ ಪ್ರಮುಖರಿಗೆ ಧನ್ಯತೆ ಅರ್ಪಿಸಬೇಕಿದೆ ಎಂದು ಅವರು ಹೇಳಿದರು.
ಇದೆ ವೇಳೆ ಡಾ.ಅಂಬೇಡ್ಕರ್ ಅವರ ಮೂರ್ತಿಗೆ ಹಾರ ಹಾಕುವ ಮೂಲಕ ಸಿಪಿಐ ಆನಂದ್ ವಾಗ್ಮೋಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪಿಎಸ್ಐ ಮಲ್ಲಪ್ಪ ಮಡ್ಡಿ ಕೇಕ್ ಕತ್ತರಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಮೈಬೂಬ್ ಗೊಳಸಂಗಿ, ಶಿವು ಶಿವುಪೂರ, ಬಸವರಾಜ ಪೂಜಾರಿ, ಪ್ರಕಾಶ್ ಚಲವಾದಿ, ಪುರಸಭೆ ಕಂದಾಯಾಧಿಕಾರಿ ಎಂ.ಬಿ.ಮಾಡಿಗಿ. ಪ್ರಶಾಂತ್ ಕಾಳೆ, ರೇವಣಪ್ಪ ಹರ್ಜನ್, ಪ್ರಕಾಶ ಸರೂರ, ದೇವರಾಜ ಹಂಗರಗಿ, ಮೌನಶ ನಾಯಕ ಇದ್ದರು.
Be the first to comment