ಜೀಲ್ಲಾ ಸುದ್ದಿಗಳು
ವಿಜಯಪುರ :-:ಸಾಮಾನ್ಯವಾಗಿ ಹಾವು ಅಂದ್ರೆನೇ ಭಯ. ಅದರಲ್ಲೂ ವಿಷಯುಕ್ತ ಹಾವಾದರಂತೂ ಕೇಳೋದೇ ಬೇಡ. ಇನ್ನೂ ಕೊಳಕ ಮಂಡಲ ದಂತಹ ವಿಷ ಪೂರಿತ ಹಾವು ಇದ್ದರಂತರೂ ಮುಗೀತು. ಈ ಹಾವನ್ನು ಕಂಡರೆ ಎಂಥವರಾದ್ರೂ ಒಂದು ಕ್ಷಣ ಭಯ ಬಿಳುತ್ತಾರೆ. ಇಂತಹ ಕೊಳಕ ಮಂಡಲ ಹಾವನ್ನು ಗುಮ್ಮಟನಗರಿಯ ಸ್ನೇಕ್ ಪ್ರೀಯರು ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ವಿಜಯಪುರ ತಾಲೂಕಿನ ಶಿವಣಗಿ ಬಾವಿಯೊಂದರಲ್ಲಿ ಹಾವು ಅವಿತು ಕುಳಿತಿತ್ತು. ಇದರಿಂದ ಸುತ್ತ ಮುತ್ತಲಿನ ಜನತೆ ಭಯ ಗೊಂಡಿದ್ದರು.
ಕೊಳಕ ಮಂಡಲ ಹಾವನ್ನು ಸ್ನೇಕ್ ಪ್ರೀಯರಾದ ಕಲ್ಲು ಆಲೂರ ಹಾಗೂ ಸಚೀನ್ ಗೊಶೆಟ್ಟಿ ಆಳವಾದ ಬಾವಿಯಲ್ಲಿ ಹಗ್ಗದ ಸಹಾಯದಿಂದ ಹಿಡಿದು ಕಾಡಿಗೆ ಬಿಟ್ಟರು. ಶಿವಣಗಿ ಗ್ರಾಮದ ಹೊಲದಲ್ಲಿನ ಬಾವಿಯಲ್ಲಿ ಸುಮಾರು 3 ವರ್ಷದ 4 ಅಡಿ ಉದ್ದದ ಕೊಳಕ ಮಂಡಲ ಹಾವನ್ನು ಸ್ನೇಕ್ ಸಚಿನ ಹಾಗೂ ಕಲ್ಲು ಸೆರೆ ಹಿಡಿದರು. ಹಾವನ್ನು ನೋಡುತ್ತಲೇ ಅಲ್ಲಿನ ನಿವಾಸಿಗಳು ಉರಗ ಪ್ರೇಮಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕಾಗಮಿಸಿದ ಇಬ್ಬರು ಅನಾಯಾಸವಾಗಿ ಸೆರೆ ಹಿಡಿದು ಅದನ್ನು ಕಾಡಿಗೆ ಬಿಟ್ಟಿದ್ದು, ನಿವಾಸಿಗಳಲ್ಲಿ ಮೂಡಿದ್ದ ಆತಂಕವನ್ನ ನಿವಾರಿಸಿದರು. ಈಗಾಗಲೇ ಕಲ್ಲು ಆಲೂರ ವಿವಿಧ ಜಾತಿಯ ನೂರಾರು ಹಾವುಗಳನ್ನು ಹಿಡಿದು ಅವುಗಳನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.
Be the first to comment