ಕೋಲಿ ಗಂಗಾಮತಸ್ಥರ ಸಾಂಸ್ಕೃತಿಕ ಆಸ್ಮಿತೆ ಮಂಡ್ಯ ಜಿಲ್ಲೆ* *ಮಳವಳ್ಳಿಯ ಖ್ಯಾತ ಕವಿ, ದಿವಂಗತ ಕೆ.ನ. ಶಿವತೀರ್ಥನ್

ಕೋಲಿ ಗಂಗಾಮತಸ್ಥ ಸಮುದಾಯದ ಖ್ಯಾತ ಕನ್ನಡ ಕವಿ ದಿವಂಗತ ಕೆ‌.ನ. ಶಿವತೀರ್ಥನ್ ಅವರು ಕನ್ನಡ ಸಾಹಿತ್ಯಕ್ಕೆ
ಅಪಾರ ಕೊಡುಗೆ ನೀಡಿದ್ದಾರೆ ಮತ್ತು ತಮ್ಮ ಕವಿತೆ, ಕವನಗಳಲ್ಲಿ ನಮ್ಮ ಕುಲ ಕಸುಬದ ಮೀನುಗಾರಿಕೆ , ಮೀನುಗಾರರ ಸಂಕಷ್ಟಕ್ಕೆ ಧ್ವನಿಯಾಗಿದ್ದಾರೆ.
ಕೆ.ನ. ಶಿವತೀರ್ಥನ್ ಅವರು

1943 ರಲ್ಲಿ ಮಂಡ್ಯ ಜಿಲ್ಲೆಯ ಜನಿಸಿದರು,
ಇವರ ತಂದೆ ಆರೋಗ್ಯ ಇಲಾಖೆಯಲ್ಲಿ ಉನ್ನತ ಅಧಿಕಾರಿಯಾಗಿದ್ದ ಕೆಂಪೀರಯ್ಯನವರು
ತಾಯಿ ಮಾದಮ್ಮನವರು,
1967 ರಲ್ಲಿ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ M.A. ಡಿಗ್ರಿ ಪಡೆಯುತ್ತಾರೆ,
1970 ರಲ್ಲಿ ಮೈಸುರಿನ ಪ್ರಖ್ಯಾತ D.ಬನುಮಯ್ಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ವೃತಿ ಜೀವನ ಆರಂಭಿಸುತ್ತಾರೆ ಜೊತೆಯಲ್ಲಿ ಕಾವ್ಯ ಸಾಹಿತ್ಯದಲ್ಲಿ ತೊಡಗುವ ಇವರು,
ಬರವಣಿಗೆ ಮೂಲಕ ಛಾಪು ಮೂಡಿಸುತ್ತಾರೆ,
1979 ರಲ್ಲಿ ಬೆಸ್ತ ಕವನ ಸಂಕಲನ ಪ್ರಕಟಿಸುತ್ತಾರೆ,
1989 ರಲ್ಲಿ ಗೆರೆಗಳು ಕವನ ಸಂಕಲನ,
1993 ರಲ್ಲಿ ಕನ್ನಡ ವಿನೋದ ಸಾಹಿತ್ಯ( ಸಂಪಾದಿತ ಇತರರೊಂದಿಗೆ)
2000 ಇಸವಿಯಲ್ಲಿ ಒಳದನಿ ಲೇಖನಗಳ
ಪುಸ್ತಕ ಪ್ರಕಟಿಸುತ್ತಾರೆ.


ಇವರ ಪ್ರಥಮ ಬೆಸ್ತ ಕವನ ಸಂಕಲನಕ್ಕೆ
ಕರ್ನಾಟಕದ ಪ್ರಖ್ಯಾತ ಪತ್ರಕರ್ತ,
ಸಾಹಿತಿ, ಕವಿಗಳಾದ P.ಲಂಕೇಶ್ ಮುನ್ನುಡಿ ಬರೆಯುತ್ತಾರೆ,
ಬೆಸ್ತ ಕವನ ಸಂಕಲನದ
“ಗೆಂಡಗಯ್ಯ” ಕವನವು ನಾಡಿನ
ಕಾವ್ಯಾಸಕ್ತರ ಅಪಾರ ಮನ್ನಣೆ ಪಡೆಯಿತು, ಕಾವ್ಯ ವಿಮರ್ಶಕರ
ಪ್ರಶಂಸೆಗೆ ಪಾತ್ರವಾಯಿತು.
ಗೆರೆಗಳು ಅವರ ಎರಡನೇ ಕವನಸಂಕಲಕ್ಕೆ ಸಾಹಿತಿ ಪೋಲಂಕಿ ರಾಮಮೂರ್ತಿ ಅವರ ಮುನ್ನುಡಿ,
1991 ರಲ್ಲಿ ಕನ್ನಡ ಸಾಹಿತ್ಯ ಅಕಾಡೆಮಿ
ಸದಸ್ಯರಾಗುತ್ತಾರೆ,
1995 ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ
ಸದಸ್ಯರಾಗಿ, ಪ್ರಾಧಿಕಾರಕ್ಕೆ ಹೊಸ ರೂಪ ನೀಡುತ್ತಾರೆ.
ಮೈಸೂರಿನ ಪ್ರಗತಿಪರ, ಅಹಿಂದ ಚಳುವಳಿಯಲ್ಲಿ ಸದಾ ಸಕ್ರಿಯರಾಗಿರುತ್ತಿದ್ದ ಕೆ.ನ. ಶಿವತೀರ್ಥನ್
ಸಾಹಿತಿ, ಹೋರಾಟಗಾರ ದೇವನೂರು ಮಹದೇವ್, K. ರಾಮದಾಸ್ ಇವರುಗಳ ಒಡನಾಡಿ.
ಪತ್ರಕರ್ತ ಸಾಹಿತಿ, P. ಲಂಕೇಶ್ ಅವರ ಗೆಳೆಯರಾಗಿದ್ದು, ರಾಜ್ಯದ ಪ್ರಮುಖ ಚಳುವಳಿಗಳಲ್ಲಿ ಇವರು ಪ್ರಮುಖ ಪಾತ್ರವಹಿಸಿದ್ದರು.
2007 ರಲ್ಲಿ ಅರೋಗ್ಯ ಸಮಸ್ಯೆಗೆ ಒಳಗಾಗಿ, ಪಾಶ್ವರ್ವಾಯು ಉಲ್ಬಣಗೊಳ್ಳುತ್ತದೆ,
ಅವರ ವೈದ್ಯ ಪತ್ನಿ ಡಾ. ನಿರ್ಮಾಲಾ ಹಾಗೂ ಅವರ ಪುತ್ರ ಡಾ. ನೈರುತ್ಯ ಶಿವತೀರ್ಥನ್ ಅವರ ಆರೈಕೆಯಲ್ಲಿ ಅವರದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ,
ಆದರೆ ಅ ಪಾರ್ಶ್ವವಾಯುವು ಅವರನ್ನು ಸತತ ನಾಲ್ಕು ವರ್ಷಗಳ ಕಾಲ ಅವರ ದೇಹವನ್ನು ಹಿಂಡಿಹಿಪ್ಪೆ ಮಾಡಿಬಿಟ್ಟಿತ್ತು.
ಅಪಾರ ನೋವನ್ನು ಅನುಭವಿಸಿ
ಸೆಪ್ಟೆಂಬರ್ 12, 2011 ರಂದು ಅವರು
ತಮ್ಮ 68 ನೇ ವಯಸ್ಸಿಗೆ ಅಸುನಿಗುತ್ತಾರೆ, ಜನಪರರು ಹಾಗೂ ಜೀವನ ಪ್ರೇಮಿಯಾಗಿದ್ದು
ಸಾಂಪ್ರದಾಯಿಕ ಮೀನುಗಾರರ ಬಗ್ಗೆ ಅಪಾರ ಪ್ರೀತಿ, ಸಮುದಾಯಪ್ರಜ್ಞೆಯಿಂದ ಬರೆಯುತ್ತಿದ್ದ ಕೆ.ನ. ಶಿವತೀರ್ಥನ್ ಅವರು ಕೋಲಿ ಗಂಗಾಮತಸ್ಥರ ಸಾಂಸ್ಕೃತಿಕ ಆಸ್ಮಿತೆಯಾಗಿದ್ದು.
ಇವರನ್ನು ಸ್ಮರಿಸಿ ಗೌರವಿಸೋಣ,
ಕೋಲಿ ಗಂಗಾಮತಸ್ಥರ ಹೆಮ್ಮೆಯ ಸಾಧಕ ಕೆ.ನ. ಶಿವತೀರ್ಥನ್ ಅವರ ಸಾಧನೆ,
ಸಮಸ್ತ ಕೋಲಿ ಗಂಗಾಮತಸ್ಥರಿಗೆ ಸದಾ ಸ್ಪೂರ್ತಿ

Be the first to comment

Leave a Reply

Your email address will not be published.


*