ಜೀಲ್ಲಾ ಸುದ್ದಿಗಳು
ಹರಿಹರ:-ಬೆಣ್ಣೆ ನಗರಿ ದಾವಣಗೆರೆಯೂ ಕರೋನಾ ನಗರವಾಗಿ ಮಾರ್ಪಟ್ಟಿದೆ ,ಕರೊನಾ ಸುನಾಮಿ ದಾವಣಗೇರಿ ಜಿಲ್ಲೆಗೆ ಬಂದು ಅಪ್ಪಳಿಸಿದರೂ ಜಿಲ್ಲೆಯ ಜನತೆ ಮಾತ್ರ ಇನ್ನೂ ಬುದ್ಧಿ ಕಲಿತಿಲ್ಲ ,ದಿನೇ ದಿನೇ ಕರೋನ ಜಿಲ್ಲೆಯಲ್ಲಿ ಅಟ್ಟಹಾಸದಲ್ಲಿ ಮೆರೆಯುತ್ತಿದೆ , ಇಂತಹ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಪಾಡುವುದು ಮಾಸ್ಕ್ ಧರಿಸುವುದು ಜನಸಾಮಾನ್ಯರ ಕರ್ತವ್ಯವಾಗಿದೆ .ಆದರೆ ಜನರು ಇದ್ಯಾವುದನ್ನೂ ಪಾಲಿಸದೆ ತನಗೆ ಕರೋನ ಬರುವುದೇ ಇಲ್ಲ ಎನ್ನುವಂತೆ ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ .
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿರುವ S.B.I ಬ್ಯಾಂಕಿನ ಮುಂದೆ ಕೇಂದ್ರ ಸರಕಾರದ ಜನ್ ಧನ್ ಖಾತೆಯ ಐನೂರು ರೂಪಾಯಿ ಹಾಗೂ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಐನೂರು ರೂಪಾಯಿ ಹಣ ಪಡೆಯಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರು ಬ್ಯಾಂಕಿನ ಮುಂದೆ ಸಾಮಾಜಿಕ ಅಂತರ ಕಾಪಾಡದೆ, ಮಾಸ್ಕ್ ಧರಿಸದೇ ಬೇಜವಾಬ್ದಾರಿತನದಿಂದ ವರ್ತಿಸಿರುವ ದೃಶ್ಯವನ್ನು ನಮ್ಮ ಮಾಧ್ಯಮ ಪ್ರತಿನಿಧಿ ಇಂದು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.
ಕರೋನಾ ವಾರಿಯರ್ಸ್ ತಮ್ಮ ವ್ಯಾಪ್ತಿಯ ಜನರಲ್ಲಿ ಕರೋನಾ ವೈರಸ್ ನಿಯಂತ್ರಣದ ಜಾಗೃತಿ ಮೂಡಿಸಿದರು ಜನತೆ ಮಾತ್ರ ಜಾಗೃತರಾಗಿಲ್ಲ ,ಅವರು ಜಾಗೃತರಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ .
ನಮ್ಮ ವಾರಿಯರ್ಸ್ ಗಳ ಶ್ರಮ ‘ಸಮುದ್ರದ ನೀರಿನಲ್ಲಿ ಹೋಮ’ ಮಾಡಿದಂತಾಗಿದೆ ,ಇವರು ಬುದ್ಧಿ ಕಲಿಯುವುದು ಯಾವಾಗ ಎಂಬುದು ಪ್ರಶ್ನೆಯಾಗಿ ಉಳಿದಿದೆ.
ಇನ್ನು ಮುಂದಾದರೂ ಜನರು ಕರೋನಾ ವೈರಸ್ ನಿಯಂತ್ರಣದಲ್ಲಿ ಸರ್ಕಾರದೊಂದಿಗೆ ಕೈ ಜೋಡಿಸಿ ಸಹಕರಿಸಲಿ ಎಂಬುದು ನಮ್ಮ ವಾಹಿನಿಯ ಕಳಕಳಿಯಾಗಿದೆ.
Be the first to comment