ದುಡಿಯುವ ಕೈಗಳಿಗೆ ಕೆಲಸ ನೀಡಲು ಜಿಲ್ಲಾ ಪಂಚಾಯಿತಿ ತಂತ್ರ .

ವರದಿ:- ಕಲ್ಲಪ್ಪ ಪಾಮನಾಯಕ ಗೋಕಾಕ

ಜಿಲ್ಲಾ ಸುದ್ದಿ ಬೆಳಗಾವಿ

ಹುಕ್ಕೇರಿ ತಾಲೂಕಿನ ಹಿರಣ್ಯಕೇಶಿ ನದಿ ಹೋಳು ತೆಗೆಯಲು ವಿಶೇಷ ಯೋಜನೆ ಸಿದ್ಧ.

ಲಾಕ್ ಡೌನ್ಲೋಡ್ ಪರಿಣಾಮ ಕೆಲಸವಿಲ್ಲದೆ ಕಂಗೆಟ್ಟಿರುವ ಹಾಗೂ ವಲಸೆ ಹೋಗಿ ಮರಳಿ ತಮ್ಮ ಹಳ್ಳಿಗಳಿಗೆ ಹೆಜ್ಜೆ ಹಾಕಿರುವ ಕೂಲಿಕಾರ್ಮಿಕರಿಗೆ ಇದೊಂದು ಸಿಹಿ ಸುದ್ದಿ.

ಕೋರೋಣ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಹೇರಲಾದ ಲಾಕ್ ಡೌನ್ ನಿಂದ ನೂರಾರು ಕೂಲಿ ಕಾರ್ಮಿಕರು ದುಡಿಯುವ ಕೈಗಳಿಗೆ ಕೆಲಸ ಈಡಲು ಬೆಳಗಾವಿ ಜಿಲ್ಲಾ ಪಂಚಾಯತ್ ವಿಶೇಷ ಯೋಜನೆಯೊಂದನ್ನು ಸಿದ್ದಪಡಿಸಿದೆ.

ತಾಲೂಕಿನಲ್ಲಿ ಹಾದು ಹೋಗಿರುವ ಹಿರಣ್ಯಕೇಶಿ ನದಿ ಪಾತ್ರದಲ್ಲಿ ಸಂಗ್ರಹವಾಗಿರುವ ಹೋಳು ತಡೆಯುವುದಕ್ಕಾಗಿ ವಿಶೇಷ ಯೋಜನೆ ಅನುಷ್ಠಾನಗೊಳಿಸಲು ಭರದ ಸಿದ್ಧತೆ ನಡೆದಿದೆ. ಇದಕ್ಕಾಗಿ ನದಿ ಪಾತ್ರದಲ್ಲಿ ಬರುವ ಸುಮಾರು 19 ಗ್ರಾಮಗಳನ್ನು ಆಯ್ಕೆ ಮಾಡಿದ್ದು ಈ ಪಂಚಾಯಿತಿ ವ್ಯಾಪ್ತಿಯ ಇತರೆ ಹಳ್ಳಿಗಳಿಗೆ ಕೂಲಿಕಾರ್ಮಿಕರು ಅರ್ಹರಾಗಿದ್ದಾರೆ .
ಇಡೀ ಬೆಳಗಾವಿ ಜಿಲ್ಲೆಯಲ್ಲಿ ಮೊತ್ತ ಮೊದಲ ಬಾರಿಗೆ ಹುಕ್ಕೇರಿ ತಾಲೂಕಿನ ಯೋಜನೆ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗಿದೆ ಬಳಿಕ ಬೆಳಗಾವಿ ಮತ್ತು ರಾಮದುರ್ಗ ತಾಲೂಕಿನ ನದಿ ಪಾತ್ರದಲ್ಲಿ ಯೋಜನೆ ವಿಸ್ತರಿಸುವ ಉದ್ದೇಶ ಹೊಂದಲಾಗಿದೆ.
₹ 6.80 ಕೋಟಿ ಕ್ರಿಯಾಯೋಜನೆ :
ಹುಕ್ಕೇರಿ ತಾಲೂಕಿನಲ್ಲಿ ಹರಿದುಹೋಗಿರುವ ಹಿರಣ್ಯಕೇಶಿ ನದಿ ಪಾತ್ರದಲ್ಲಿ ಹೂಳು ತೆಗೆಯುವುದಕಾಗಿ ಉದ್ಯೋಗ ಖಾತ್ರಿ ಯೋಜನೆ ಬಳಸಿಕೊಳ್ಳಲು ಮುಂದಾಗಿದೆ. ಇದಕ್ಕಾಗಿ ಸುಮಾರು ₹ 6.80 ಕೋಟಿ ಅನುದಾನದ ವಿಶೇಷ ಕ್ರಿಯಾ ಯೋಜನೆ ಮಂಜೂರಾತಿ ಪಡೆಯಲಾಗಿದೆ.ಈ ವಿನೂತನ ಕಾಮಗಾರಿಕೆ ಯಿಂದ ನಿಯೋಜಿತ 19 ಗ್ರಾಮ ಪಂಚಾಯಿತಿಗಳು ಸೇರಿ ಒಟ್ಟು ₹2.34 ಲಕ್ಷ ಮಾನವ ದಿನಗಳ ಯೋಜನೆ ಆಗುವ ನಿರೀಕ್ಷೆ ಹೊಂದಲಾಗಿದೆ ಜೊತೆಗೆ ಉದ್ಯೋಗ ಖಾತ್ರಿಯಿಂದ ಜಾಬ್ ಕಾರ್ಡ್ ಹೊಂದಿರುವ ಸುಮಾರು 10,000 ಕೂಲಿಕಾರ್ಮಿಕರ ಕೈಗಳಿಗೆ ಕೆಲಸ ಸಿಗಲಿದೆ.
ಯಾವ್ಯಾವ ಹಳ್ಳಿಗಳು ?: ಬಡಕುಂದ್ರಿ, ಬಸ್ತವಾಡ, ಬೆನಿವಾಡ್, ಹೊಸೂರ್, ಸುಲ್ತಾನಪುರ್, ಗೋಟೂರು, ಹೆಬ್ಬಾಳ, ಹಂಚಿನಾಳ,ಕುರಣಿ, ಕೋಚರಿ, ಹೊಸಪೇಟೆ, ಮನಗುತ್ತಿ,ದಡ್ಡಿ, ಕೋಟ, ಬಸಾಪುರ, ಸಶಾಬಂದ್ರಾ, ಸಲಾಂಮವಾಡಿ, ಯಮಕನಮರಡಿ, ಹತ್ತರಕಿ, ಗ್ರಾಮಪಂಚಾಯಿತಿಗಳನ್ನು ಈ ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ ಇನ್ನೂ ಅನ್ಯ ಜಿಲ್ಲೆ ಮತ್ತು ಬೇರೆ ರಾಜ್ಯಗಳಿಂದ ದುಡಿಯಲು ವಲಸೆ ಹೋಗಿದ್ದ ಕಾರ್ಮಿಕರು ಹಿನ್ನೆಲೆಯಲ್ಲಿ ಇದೀಗ ಮರಳಿ ತಮ್ಮ ಊರು ಸೇರಿದ್ದಾರೆ. ಈ ಕಾರ್ಮಿಕರು ಸಹ ದುಡಿಯಲು ಮುಂದಾದರೆ ತರಿತವಾಗಿ ಜಾಬ್ ಕಾರ್ಡ್ ಮಾಡಿಸಿ ಉದ್ಯೋಗ ನೀಡಲು ಅವಕಾಶ ಕಲ್ಪಿಸಲಾಗಿದೆ.
ರಾಜೇಂದ್ರ ಕೆ. ವಿ.ಜಿಲ್ಲಾ ಪಂಚಾಯತ್ ಸಿಇಓ ಎಂ ಎಸ್ ಬಿರಾದರಪಾಟೀಲ್ ತಾಲೂಕ ಪಂಚಾಯತ್ ತಾಲೂಕ ಪಂಚಾಯತ್ ಇ.ಓ ತಿಳಿಸಿದರು 

 

Be the first to comment

Leave a Reply

Your email address will not be published.


*