ಅಂಬಿಗ ನ್ಯೂಸ್ ಯಾದಗಿರಿ
ಯಾದಗಿರಿ: ಇಡೀ ದೇಶಾದ್ಯಂತ ಕಿಲ್ಲರ್ ಕೊರೊನಾ ಲಾಕ್‌ಡೌನ್‌ನಿಂದ ಸಾರಿಗೆ ವ್ಯವಸ್ಥೆ ಸ್ತಬ್ಧವಾಗಿತ್ತು.
ಸದ್ಯ ಕೊರೊನಾ ವೈರಸ್ ನ ಯಾವುದೇ ಲಕ್ಷಣಗಳಿಲ್ಲದ ಜಿಲ್ಲೆಗಳಲ್ಲಿ(ಗ್ರೀನ್ ಜೋನ್) ಲಾಕ್ಡೌನ್ ಸಡಿಲಿಕೆಗೊಳಿಸಿದ ಬಳಿಕ ಅಂತರ್ ಜಿಲ್ಲೆ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಗ್ರೀನ್ ಜೋನ್‌ನಲ್ಲಿರೋ ಯಾದಗಿರಿಯಲ್ಲೂ ಕೆಎಸ್‌ಆರ್‌ಟಿಸಿ ಬಸ್ ಕಾರ್ಯಾರಂಭ ಮಾಡಿದೆ.
ಯಾದಗಿರಿಯಲ್ಲಿ ಕೂಡ ನಿನ್ನೆಯಿಂದ ಸಾರಿಗೆ ಬಸ್ ಸಂಚಾರ ಆರಂಭಗೊಂಡಿದೆ. ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳುವ ಮೂಲಕ ಜಿಲ್ಲಾ ಸಾರಿಗೆ ಸಂಸ್ಥೆ ಜಿಲ್ಲಾ ಕೇಂದ್ರದಿಂದ ಸುರಪುರ, ಶಹಾಪುರ, ಸೇರಿದಂತೆ ಗುರಮಿಠಕಲ್ ತಾಲೂಕು ಕೇಂದ್ರಗಳಿಗೆ ಪ್ರಯಾಣಿಕರು ಸಂಚರಿಸಲು ಬಸ್ ವ್ಯವಸ್ಥೆ ಕಲ್ಪಿಸಿದೆ. ಆದ್ರೆ, ಬಸ್ ಹತ್ಬೇಕು ಅಂದ್ರೆ ಮಾಸ್ಕ್ ಹಾಕಿರಲೇಬೇಕು ಎಂಬ ನಿಯಮ ಜಾರಿಮಾಡಿದೆ.
ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ ಧರಿಸಿದರೆ ಮಾತ್ರ ಬಸ್ನಲ್ಲಿ ಪ್ರವೇಶ. ಹಾಗೆ ಪ್ರಯಾಣಿಕರಿಗೆ ಸ್ಯಾನಿಟೈಸರ್‌ನಿಂದ ಹ್ಯಾಂಡ್ ವಾಶ್ ಕೂಡ ಕಡ್ಡಾಯಗೊಳಿಸಿದ್ದು, ಒಂದು ಬಸ್ನಲ್ಲಿ ಕೇವಲ 30 ಪ್ರಯಾಣಿಕರಷ್ಟೇ ಸಂಚರಿಸುವ ವ್ಯವಸ್ಥೆ ಮಾಡಿದೆ. ಸಾಮಾಜಿಕ ಅಂತರಕ್ಕೂ ಮಹತ್ವ ನೀಡಲಾಗಿದೆ. ಜನ್ರು ಮಾತ್ರ ಸರ್ಕಾರ ಲಾಕ್ಡೌನ್ ಸಡಿಲಿಕೆಗೊಳಿಸಿದೆ ಎಂದು ಅನಾವಶ್ಯಕ ಓಡಾಡದೇ ಕೇವಲ ಅಗತ್ಯ ಸೇವೆಗೆ ಮಾತ್ರ ಹೊರಗಡೆ ಹೋಗಬೇಕು ಎಂದು ಜಿಲ್ಲಾಡಳಿತ ತಿಳಿಸಿದೆ. ಅದರಂತೆ ಜನರು ಜಾಗೃತರಾಗಿ ಸಂಚರಿಸುವ ವಾತವಾರಣ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ.
Be the first to comment