ಫೋಟೋಗ್ರಾಫರ್ಸ್‌ಗೆ ನೆರವು ನೀಡಲು ಸರ್ಕಾರಕ್ಕೆ ಮಾಜಿ ಸಿ.ಎಮ್ ಸಿದ್ದರಾಮಯ್ಯ ಒತ್ತಾಯ

ವರದಿ : ಆನಂದ ಹೊಸಗೌಡರ್ ಹುಣಸಗಿ

ಮೂರು ತಿಂಗಳಿಂದ ಎಲ್ಲವೂ ಬಂದ್ ಆಗಿರುವ ಹಿನ್ನಲೆ ಮದುವೆ ಹಾಗೂ ಇತರ ಕಾರ್ಯಗಳು ನಡೆಯದೆ ಫೋಟೋಗ್ರಾಫರ್​ಗಳ ಜೀವನಕ್ಕೆ ತೊಂದರೆ ಆಗಿರುವ ಬಗ್ಗೆ ಸಿದ್ದರಾಮಯ್ಯನವರು ಟ್ವೀಟ್​ ಮಾಡಿದ್ದಾರೆ.

 ಕೊರೊನಾ ಭೀತಿಯಿಂದ ಎಲ್ಲವೂ ಬಂದ್ ಆಗಿರುವುದಕ್ಕೆ ಫೋಟೋಗ್ರಾಫರ್​ಗಳು ಅನುಭವಿಸುತ್ತಿರುವ ತೊಂದರೆ ಬಗ್ಗೆ   ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ಪಂದನೆ ಮಾಡಿ, ಸರ್ಕಾರಕ್ಕೆ ಟ್ವೀಟ್​ ಮಾಡಿದ್ದಾರೆ.

ಫೋಟೋಗ್ರಾಫರ್‌ಗಳು ಉದ್ಯೋಗವಿಲ್ಲದೆ ಉಳಿದ ಸಮುದಾಯಗಳಂತೆಯೆ ತೀವ್ರ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಆದ್ದರಿಂದ ಅವರಿಗೆ ಮನೆ ಬಾಡಿಗೆ, ಸಾಲದ ಮೇಲಿನ ಬಡ್ಡಿ, ಇಎಂಐ, ಮುಂತಾದವುಗಳನ್ನು ಕನಿಷ್ಠ 6 ತಿಂಗಳವರೆಗೆ ವಸೂಲಿ ಮಾಡಬಾರದೆಂದು ಸಂಬಂಧಿಸಿದವರಿಗೆ ಸೂಕ್ತ ನಿರ್ದೇಶನಗಳನ್ನು ನೀಡಬೇಕು. .ಮೂರು ತಿಂಗಳಿಂದ ಎಲ್ಲವೂ ಬಂದ್ ಆಗಿರುವ ಹಿನ್ನಲೆ ಮದುವೆ ಹಾಗೂ ಇತರ ಕಾರ್ಯಗಳು ನಡೆದಿಲ್ಲ. ಇದರಿಂದ ಫೋಟೋಗ್ರಾಫರ್​ಗಳ ಜೀವನಕ್ಕೆ ತೊಂದರೆ ಆಗಿರುವ ಬಗ್ಗೆ ಸಿದ್ದರಾಮಯ್ಯನವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

Be the first to comment

Leave a Reply

Your email address will not be published.


*