ಜೀಲ್ಲಾ ಸುದ್ದಿಗಳು
ಕಾಲಚಕ್ರದಲ್ಲಿ ಕರೋನಾ ವೈರಸ್ ನ ಮಹಿಮೆ.
ದಾವಣಗೆರೆ:-ಹಳೆಯ ಗಾದೆಯೊಂದು ಹೇಳುತ್ತದೆ ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ,ಈಗ ಅದೇ ಮಾತನ್ನು ಮಾಸ್ಕ್ ಗೆ ಅನ್ವಯಿಸುತ್ತದೆ ಅಲ್ಲವೇ .?
ಒಂದು ಕಾಲದಲ್ಲಿ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಹೋದರೆ ಜನರು ಆ ವ್ಯಕ್ತಿಯನ್ನು ಆಶ್ಚರ್ಯ ಖಚಿತವಾಗಿ ನೋಡುತ್ತಿದ್ದರು .ಇಂದು ಮಾರ್ಚ್ ಇಲ್ಲದೇ ಹೋದರೆ ಜನರು ಆ ವ್ಯಕ್ತಿಯಿಂದ ದೂರ ನಿಲ್ಲುತ್ತಾರೆ ,ಆ ವ್ಯಕ್ತಿಯಿಂದ ಅಂತರವನ್ನು ಕಾಪಾಡಿಕೊಳ್ಳುತ್ತಾರೆ .
ಮಾಸ್ಕ್ ಬೇಡಿಕೆ ಹೇಗಿದೆ ಎಂದರೆ ,ಯಾವುದೇ ವ್ಯಕ್ತಿ ಮಾಸ್ಕ್ ಇಲ್ಲದೇ ಹೋದರೆ ಆ ವ್ಯಕ್ತಿಗೆ ಸಂಬಂಧಪಟ್ಟ ಅಧಿಕಾರಿಗಳು 500,1000,ರೂಪಾಯಿಗಳ ದಂಡಗಳನ್ನು ಹಾಕುತ್ತಾರೆ .ಅಷ್ಟರ ಮಟ್ಟಿಗೆ ಮಾಸ್ಕ್ ಪ್ರಪಂಚದ ಬೇಡಿಕೆಯ ವಸ್ತುವಾಗಿ ಮಾರ್ಪಟ್ಟಿದೆ, ಜನರ ಅತ್ಯಗತ್ಯ ವಸ್ತುಗಳ ಅವಿಭಾಜ್ಯ ಅಂಗವಾಗಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.
ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದರೆ ನಾವು ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಲೇ ಬೇಕಾದ ಅನಿವಾರ್ಯತೆ ಎದುರಾಗಿದೆ .ಇದಕ್ಕೆಲ್ಲ ಕಾರಣ ಚೀನಾದಿಂದ ಆಮದು ಮಾಡಿಕೊಂಡಿರುವ ಕರೋನಾ ವೈರಸ್ ಇದರ ಮಹಿಮೆ .
ಶಿವಮೊಗ್ಗ, ದಾವಣಗೆರೆ, ಹಾಗೂ ರಾಜ್ಯದ ಇತರ ಜಿಲ್ಲೆಯ ಜಿಲ್ಲಾಧಿಕಾರಿಗಳು ಮಾಸ್ಕ್ ಹಾಕಿಕೊಳ್ಳದೇ ಹೊರಗೆ ಬರುವ ವ್ಯಕ್ತಿಗಳಿಗೆ ಐನೂರರಿಂದ ಸಾವಿರ ರೂಪಾಯಿವರೆಗೆ ದಂಡ ಹಾಕಲಾಗುತ್ತದೆ ಎಂದು ಆದೇಶ ಹೊರಡಿಸಿ ಎಚ್ಚರಿಕೆ ನೀಡಿದ್ದಾರೆ .
ರಾಜ್ಯದ ಪರಿಸ್ಥಿತಿಯಲ್ಲಿ ಕರೋನಾ ವೈರಸ್ ನಿಯಂತ್ರಣಕ್ಕೆ ಇರುವ ಮಾರ್ಗಗಳು ಎಂದರೆ ಒಂದು ಸಾಮಾಜಿಕ ಅಂತರ ಇನ್ನೊಂದು ಕಡ್ಡಾಯವಾಗಿ ಮಾರ್ಚ್ ಧರಿಸುವುದು.ಇದರ ಹೊರತು ಬೇರೆ ದಾರಿಯೇ ಇಲ್ಲ ಎನ್ನುವಂತಾಗಿದೆ ಈಗಾಗಲೇ ದಾವಣಗೆರೆ ಜಿಲ್ಲಾಧಿಕಾರಿಗಳು ವಿಡಿಯೋ ಮುಖಾಂತರ ಜನರಲ್ಲಿ ಮಾಸ್ಕ್ ಧರಿಸುವಂತೆ ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ .
ಅದಕ್ಕೆ ಹೇಳುವುದು ಒಂದಲ್ಲ ಒಂದು ದಿನ ಬೇಡವಾದ ವಸ್ತು ಬೇಕಾಗಬಹುದು , ಆದ್ದರಿಂದ ಯಾವುದನ್ನೂ ನಿರ್ಲಕ್ಷ್ಯ ಮಾಡಬಾರದು.
ಕಷ್ಟದ ಸಮಯದಲ್ಲಿ ಹುಲ್ಲು ಕಡ್ಡಿಯ ಸಹಾಯವೂ ಬೇಕಾಗುತ್ತದೆ .ಈಗ ಮಾಸ್ಕ್ ಇದರ ಬಳಕೆ ಪ್ರಪಂಚದ ಪ್ರತಿ ವ್ಯಕ್ತಿಗೂ ಅತ್ಯಾವಶ್ಯಕ .
ಯಾರ ಮನೆಯಿಂದ ಅವರಿಗೆ ಹೋಗಬೇಕಾದರೆ ಮಾಸ್ಕ್ನ್ನು ಕಡ್ಡಾಯವಾಗಿ ಬಳಸಿ ಹಾಗೂ ಸಾಮಾಜಿಕ ಅಂತರ ಕಾಪಾಡಿ ಎಂಬುದು ನಮ್ಮ ವಾಹಿನಿಯ ಕಳಕಳಿಯಾಗಿತಗ
Be the first to comment