ಬೆಣ್ಣೆ ನಗರ ‘ನರ್ಸ’ ನಿಂದ ‘ಕರೋನಾ’ ನಗರ. ಬೆಣ್ಣೆ ಜಾರಿ ಕರೋನಾ ಕ್ಕೆ ಬಿತ್ತಾ .?

ವರದಿ:- ಪ್ರಕಾಶ ಮಂದಾರ ಹರಿಹರ

ಜೀಲ್ಲಾ ಸುದ್ದಿಗಳು

ದಾವಣಗೆರೆ(ಮೇ 1) ಕಳೆದ ಎರಡು ದಿನಗಳ ಹಿಂದೆ ಬೆಣ್ಣೆ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ಒಬ್ಬರಿಗೆ ಕರೋನಾ ಸೋಂಕು ಇರುವುದು ದೃಢಪಟ್ಟಿತ್ತು .

ನರ್ಸ್ ಸಂಪರ್ಕದಿಂದ ಒಂದು ವರ್ಷದ ಮಗು ಸೇರಿದಂತೆ ಆರು ಮಂದಿಗೆ ಇಂದು ಕರೋನಾ ಪಾಸಿಟಿವ್ ಪತ್ತೆಯಾಗಿದೆ .ಈ ಮೂಲಕ ಬೆಣ್ಣೆ ಜಾರಿ ಎಂಟು ಪಾಸಿಟಿವ್ ಕರೋನಾ ದಾವಣಗೆರೆ ಜಿಲ್ಲೆಗೆ ಬಿದ್ದಿದೆ .ಇದುವರೆಗೆ ಸೋಂಕಿತರ ಸಂಖ್ಯೆ ಎಂಟಕ್ಕೆ ಏರಿಕೆ ಆಗಿದೆ .ಹಳೆಯ ಎರಡು ಪ್ರಕರಣ ಸೇರಿಸಿದರೆ ಒಟ್ಟು ಜಿಲ್ಲೆಯಲ್ಲಿ ಹತ್ತು ಪ್ರಕರಣಗಳು ವರದಿಯಾದಂತೆ .



ಸಾಂದರ್ಭಿಕ ಚಿತ್ರ

ಈ ಕುರಿತಂತೆ ಮಾಹಿತಿ ನೀಡಿದ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೋಂಕಿತ ನರ್ಸ್ ಸಂಪರ್ಕದಿಂದಾಗಿ ಅವರ 16 ವರ್ಷದ ಮಗನಿಗೂ ಕರೋನಾ ಸೋಂಕು ತಗುಲಿದೆ.

ಜೊತೆಗೆ ಒಂದೇ ಕುಟುಂಬದ 5 ಜನರಲ್ಲಿ ಕರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಇವರ ಸಂಪರ್ಕದಲ್ಲಿದ್ದಂತ 34 ಜನರನ್ನು ಕ್ವಾರಂಟ್ಯೆನ್ ಮಾಡಲಾಯಿತು ,ಇದೀಗ ಕೆಲವರು ಕರೋನಾ ಪರೀಕ್ಷೆ ಲ್ಯಾಬ್ ರಿಪೋರ್ಟ್ ಬಂದಿದೆ. ಅಲ್ಲದೆ ಇವರೊಂದಿಗೆ ಇವರ ಒಂದೇ ಕುಟುಂಬದ 6 ಜನರಿಗೆ ಕರೋನಾ ಸೋಂಕು ಪಾಸಿಟಿವ್ ಎಂಬುದಾಗಿ ತಿಳಿದು ಬಂದಿದೆ ಎಂದು ತಿಳಿಸಿದ್ದಾರೆ.



ಸಾಂದರ್ಭಿಕ ಚಿತ್ರ

ಇದುವರೆಗೂ ರಾಜ್ಯಾದ್ಯಂತ ಬೆಣ್ಣೆ ನಗರಿ ಎಂದು ಖ್ಯಾತಿ ಪಡೆದ ದಾವಣಗೆರೆ ಜಿಲ್ಲೆ ಕರೋನಾ ನಗರವಾಗಿ ಮಾರ್ಪಡುತ್ತಿರುವುದು ಜಿಲ್ಲೆಯ ಜನಸಾಮಾನ್ಯರಲ್ಲಿ ಹೊಸ ಆತಂಕ ಮನೆ ಮಾಡಿದೆ .

ಇನ್ನು ಮುಂದಾದರೂ ಜನರು ಎಚ್ಚೆತ್ತುಕೊಂಡು. ಸಾಮಾಜಿಕ ಅಂತರ ಕಾಪಾಡಿ ,ಮನೆಯಲ್ಲಿ ಸುರಕ್ಷಿತವಾಗಿ ಇರಿ ಎಂಬುವರು ನಮ್ಮ ವಾಹಿನಿಯ ಕಳಕಳಿಯಾಗಿದೆ.

Be the first to comment

Leave a Reply

Your email address will not be published.


*